ಮುಂಬೈ: ಮದುವೆ, ವಿಚ್ಛೇದನ, ವಿವಾಹೇತರ ಸಂಬಂಧ, ಡೇಟಿಂಗ್… ಇಂಥವೆಲ್ಲವೂ ಚಿತ್ರರಂಗದಲ್ಲಿ ಸಾಮಾನ್ಯ ಎನಿಸಿಬಿಟ್ಟಿದೆ. ದಿಢೀರ್ ಮದುವೆಯಾಗುವುದು, ಅಷ್ಟೇ ವೇಗದಲ್ಲಿ ಡಿವೋರ್ಸ್ ಕೊಡುವುದು ನಂತರ ಇನ್ನೊಬ್ಬಳ ಜತೆ ತಿರುಗುವುದು ಇಲ್ಲವೇ ಮದುವೆಯಾಗಿರುವಾಗಲೇ ಇನ್ನೊಬ್ಬರ ಜತೆ ಸಂಬಂಧ ಹೊಂದುವುದು..
ಹೀಗೆ ಅನೇಕ ವಿಷಯಗಳಿಂದ ಸೆಲಿಬ್ರಿಟಿಗಳು ಸುದ್ದಿಯಾಗುತ್ತಲೇ ಇರುತ್ತಾರೆ. ಅವರ ಸಾಲಿಗೆ ಸೇರಿದ್ದಾರೆ ಖ್ಯಾತ ಬಾಲಿವುಡ್ ತಾರೆ ಹೃತಿಕ್ ರೋಷನ್.
ಹಿಂದೊಮ್ಮೆ ಮದುವೆಯಾದ ಬಳಿಕವೂ ನಟಿ ಕಂಗನಾ ರಣಾವತ್ ಜತೆಗೆ ಸಂಬಂಧ ಹೊಂದಿ ನಂತರ ಆಕೆಗೆ ಮೋಸ ಮಾಡಿರುವ ಗಂಭೀರ ಆರೋಪ ಹೊತ್ತಿರುವ ಹೃತಿಕ್ ರೋಷನ್, ಪತ್ನಿ ಸೂಸನ್‌ಗೆ 2014ರಲ್ಲಿ ವಿಚ್ಛೇದನ ಕೊಟ್ಟಿದ್ದಾರೆ. ಇಬ್ಬರು ಮಕ್ಕಳನ್ನು ಪಡೆದ ಬಳಿ ತಮ್ಮ 14 ವರ್ಷದ ದಾಂಪತ್ಯ ಜೀವನವನ್ನು ಅಂತಿಮಗೊಳಿಸಿದ್ದ ನಟ, ವಿಚ್ಛೇದನದ ನಂತರವೂ ಪತ್ನಿ, ಮಕ್ಕಳೊಂದಿಗೆ ಇದ್ದರು. ಒಟ್ಟಿಗೇ ಟ್ರಿಪ್‌ಗೆ ಹೋಗಿಯೂ ಸುದ್ದಿಯಾಗಿದ್ದರು.
ಬಾಲಿವುಡ್ನ ಮೋಸ್ಟ್ ಹ್ಯಾಂಡ್ಸಮ್, ಗ್ರೀಕ್ ಗಾಡ್ ಎಂದೆಲ್ಲಾ ಅಭಿಮಾನಿಗಳಿಂದ ಕರೆಸಿಕೊಳ್ಳುತ್ತಿರುವ ಹೃತಿಕ್, ನಟಿ ಸಬಾ ಆಜಾದ್ ಜತೆ ಹೃತಿಕ್ ರೋಷನ್ ಹೋಟೆಲ್ ಒಂದರಲ್ಲಿ ಕಾಣಿಸಿಕೊಂಡಿದ್ದು, ಭಾರಿ ಗುಸುಗುಸು ಶುರುವಾಗಿದೆ. ಸದಾ ತಮ್ಮ ವೈಯಕ್ತಿಕ ಜೀವನದ ವಿಚಾರಗಳನ್ನು ರಹಸ್ಯವಾಗಿ ಇಡುವಲ್ಲಿ ಪ್ರಸಿದ್ಧಿ ಹೊಂದಿರುವ ಹೃತಿಕ್ ರಾತ್ರಿ ಡಿನ್ನರ್‌ಗೆ ಸಬಾ ಜತೆ ಕೈಕೈ ಹಿಡಿದು ಹೋಗಿದ್ದು ಭಾರಿ ಸುದ್ದಿಯಾಗಿದೆ. ಈ ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದ್ದಂತೆ ಇಬ್ಬರೂ ಪ್ರೀತಿಯಲ್ಲಿ ಬಿದ್ದಿದ್ದಾರೆ ಎನ್ನಲಾಗುತ್ತಿದೆ.