Breaking News

ವೈದ್ಯನ ಎಡವಟ್ಟು ಬಡ್ ಕುಟುಂಬ ಸಂಕಷ್ಟಕ್ಕೆ

Spread the love

ಬೆಂಗಳೂರು : ಜ್ವರ ಕಾಣಿಸಿಕೊಂಡು ಚಿಕಿತ್ಸೆ ಪಡೆಯಲು ಬಂದಿದ್ದ ಯುವಕನಿಗೆ ವೈದ್ಯರೊಬ್ಬರು ಇಂಜೆಕ್ಷನ್​ ಮಾಡಿದ್ದರು. ಈಗ ಆ ಜಾಗದಲ್ಲಿ ದೇಹ ಕೊಳೆಯಲು ಶುರುವಾಗಿದೆ. ವೈದ್ಯರ ಪ್ರಮಾದಿಂದ ಬಡ ಕುಟುಂಬವೊಂದು ಸಂಕಷ್ಟಕ್ಕೀಡಾದ ಘಟನೆ ಬೆಂಗಳೂರಿನಲ್ಲಿ ನಡೆದಿದೆ.

ಬೆಂಗಳೂರು ದಕ್ಷಿಣ ತಾಲೂಕು ಮೈಲಸಂದ್ರ ಗ್ರಾಮದ ನಿವಾಸಿ ಮುರುಳಿ ಎಂಬ ಯುವಕ ಅನಾರೋಗ್ಯ ಪೀಡಿತನಾಗಿ ಆಸ್ಪತ್ರೆ ಸೇರಿದವರು. ಜನವರಿ 6ರಂದು ಯುವಕ ಮುರುಳಿಗೆ ಜ್ವರ ಕಾಣಿಸಿತ್ತು. ಸಮೀಪದ ಸಾನ್ಸಿಯಾ ಕ್ಲಿನಿಕ್​ನಲ್ಲಿ ಚಿಕಿತ್ಸೆ ಪಡೆದಿದ್ದಾರೆ. ಈ ವೇಳೆ ವೈದ್ಯರು ಯುವಕನಿಗೆ ಇಂಜೆಕ್ಷನ್ ನೀಡಿ, ಮಾತ್ರೆ ಕೊಟ್ಟಿದ್ದಾರೆ.

ವೈದ್ಯನ ಪ್ರಮಾದದಿಂದ ಕೊಳೆಯುತ್ತಿರುವ ಯುವಕನ ದೇಹಸ್ವಲ್ಪ ಸಮಯದ ಬಳಿಕ ಇಂಜೆಕ್ಷನ್ ನೀಡಿದ್ದ ಸ್ಥಳದಲ್ಲಿ ಊತ ಕಾಣಿಸಿದೆ. ಬಳಿಕ ತೊಡೆ, ಬೆನ್ನಿನ ಹಿಂಭಾಗ ಮತ್ತು ಹೊಟ್ಟೆ ಬಳಿಯ ಚರ್ಮ ಕೊಳೆತು ಗಾಯದಂತಾಗಿದೆ. ಇದರಿಂದ ಹೆದರಿದ ಕುಟುಂಬಸ್ಥರು ಯುವಕನನ್ನು ಅದೇ ಕ್ಲಿನಿಕ್​ಗೆ ಕರೆ ತಂದಾಗ ಈ ವೇಳೆ ವೈದ್ಯರು ಇರಲಿಲ್ಲ. ಅಲ್ಲಿನ ಸಿಬ್ಬಂದಿಯೊಬ್ಬರು ಗಾಯಕ್ಕೆ ಹಚ್ಚಲು ಮುಲಾಮೊಂದನ್ನು ನೀಡಿ ಕಳುಹಿಸಿದ್ದಾರೆ.

ಕ್ರಮೇಣ ಯುವಕನ ಆರೋಗ್ಯ ಸ್ಥಿತಿ ಹದಗೆಡುತ್ತಾ ಬಂದಿದೆ. ಮೂತ್ರದಲ್ಲಿ ರಕ್ತ, ನಿತ್ರಾಣ ಮತ್ತು ಎದೆ ನೋವು ಕಾಣಿಸಿದೆ. ಜೊತೆಗೆ ಇಂಜೆಕ್ಷನ್ ನೀಡಿದ ಜಾಗ, ತೊಡೆ ಭಾಗ ಮತ್ತು ಹೊಟ್ಟೆಯ ಕೆಳಭಾಗದಲ್ಲಿ ಗಾಯ ಹೆಚ್ಚಾಗಿ ರಕ್ತ ಮತ್ತು ಕೀವು ಒಸರಲು ಶುರುವಾಗಿದೆ.

ಈ ವೇಳೆ ಕುಟುಂಬಸ್ಥರು ಕ್ಲಿನಿಕ್ ಬಳಿ ಬಂದು ಗಲಾಟೆ ಮಾಡಿದ್ದಾರೆ.‌ ಪೊಲೀಸ್ ಠಾಣೆಗೆ ದೂರು ನೀಡುತ್ತೇವೆ ಎಂದಾಗ ಕ್ಲಿನಿಕ್​ ಸಿಬ್ಬಂದಿ ಜಿಗಣಿ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ಯುವಕನನ್ನು ದಾಖಲಿಸಿ, ₹40 ಸಾವಿರ ನೀಡಿ ಸರ್ಜರಿ ಮಾಡಿಸಿದ್ದಾರೆ.

ಅಲ್ಲಿಯೂ ಆರೋಗ್ಯ ಸುಧಾರಿಸದಿದ್ದಾಗ ವೈದ್ಯನ ವಿರುದ್ಧ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಲಾಗಿದೆ. ಬಳಿಕ ವೈದ್ಯ ನಾಪತ್ತೆಯಾಗಿದ್ದಾನೆ. ಜೊತೆಗೆ ಮೊಬೈಲ್ ಸ್ವಿಚ್​ ಆಫ್ ಮಾಡಿಕೊಂಡಿದ್ದಾರೆ. 


Spread the love

About Laxminews 24x7

Check Also

ಯರಗಟ್ಟಿ ತಾಲ್ಲೂಕಿನಿಂದ ಅವಿರೋಧವಾಗಿ ಆಯ್ಕೆ ನಿಮ್ಮ ನಂಬಿಕೆ ಉಳಿಸಿಕೊಂಡು, ತಾಲ್ಲೂಕಿನ ರೈತರು ಮತ್ತು ಸಹಕಾರಿ ಕ್ಷೇತ್ರದ ಅಭಿವೃದ್ಧಿಗೆ ಪ್ರಾಮಾಣಿಕವಾಗಿ ಶ್ರಮಿಸುತ್ತೇನೆ

Spread the loveಬೆಳಗಾವಿ ಜಿಲ್ಲಾ ಕೇಂದ್ರ ಸಹಕಾರಿ (BDCC) ಬ್ಯಾಂಕ್‌ನ ನಿರ್ದೇಶಕರ ಸ್ಥಾನಕ್ಕೆ ಯರಗಟ್ಟಿ ತಾಲ್ಲೂಕಿನಿಂದ ಅವಿರೋಧವಾಗಿ ಆಯ್ಕೆಯಾಗಲು ಕಾರಣರಾದ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ