Breaking News

ಸಿದ್ದರಾಮಯ್ಯ ಮೇಲೆ ಮುಗಿಬಿದ್ದ JDS, BJP.. ಅಂಥದ್ದೇನಾಯ್ತು?

Spread the love

ಮಾಜಿ ಸಿಎಂ ಸಿದ್ದರಾಮಯ್ಯ ವಿರುದ್ಧ ನಿನ್ನೆ ದಳಪತಿಗಳು ಅಕ್ಷರಶಃ ಸಮರ ಸಾರಿದ್ರು. ಇತ್ತ ಕೇಸರಿ ಪಾಳಯ ವಿಪಕ್ಷ ನಾಯಕರ ಮೇಲೆ ಕೆಂಡಾಮಂಡಲವಾಗಿತ್ತು. ಮಾಜಿ ಸಿಎಂ ಆಡಿದ್ದ ಮಾತುಗಳು ಕಮಲ ಮತ್ತು ದಳವನ್ನ ಬಡಿದೆಬ್ಬಿಸಿತ್ತು. ಹೀಗಾಗಿ ಸಿದ್ದು ವಿರುದ್ಧ ಇವತ್ತು ಟ್ವೀಟಾಸ್ತ್ರ ಪ್ರಯೋಗವಾಗಿತ್ತು. ಅಷ್ಟಕ್ಕೂ ಸಿದ್ದು ಆಡಿದ್ದ ಮಾತುಗಳೇನು? ಅದಕ್ಕೆ ಕಮಲ-ದಳದ ತಿರುಗೇಟೇನು? ಇಲ್ಲಿದೆ ಡಿಟೇಲ್ಸ್‌..

ಸಿದ್ದರಾಮಯ್ಯ ಬಾಯಲ್ಲಿ ಬಂದಿದ್ದ ಬಾಲಂಗೋಚಿ ಮಾತು ದಳಪತಿಯನ್ನ ಕೆರಳಿ ಕೆಂಡವಾಗುವಂತೆ ಮಾಡಿದೆ. ಅಲ್ಲದೇ ಮಾಜಿ ಸಿಎಂ ಕುಮಾರಸ್ವಾಮಿ ಟ್ವೀಟಾಸ್ತ್ರವನ್ನ ಪ್ರಯೋಗಿಸುವಷ್ಟರ ಮಟ್ಟಿಗೆ ವಿಪಕ್ಷ ನಾಯಕರ ಮಾತು ಚುಚ್ಚಿಬಿಟ್ಟಿದೆ. ಜೆಡಿಎಸ್‌ ಅನ್ನೋದು ಬಿಜೆಪಿಯ ಬಾಲಂಗೋಚಿ ಎಂದಿದ್ದ ಸಿದ್ದರಾಮಯ್ಯರ ಮಾತು ಕುಮಾರಸ್ವಾಮಿಯವರಿಗೆ ನಕಶಿಕಾಂತವೇ ಉರಿಯುವಂತೆ ಮಾಡಿಬಿಟ್ಟಿದೆ. ಹೀಗಾಗಿ ಸಿದ್ದರಾಮಯ್ಯಗೆ ಪಕ್ಷ ಕಟ್ಟುವ ಧಮ್ ಇಲ್ಲ, ನೀವೊಬ್ಬ ವಿಷ ಸರ್ಪ ಅಂತಾ ಟ್ವೀಟ್ ಮೂಲಕ ಕುಮಾರಸ್ವಾಮಿ ಹರಿಹಾಯ್ದಿದ್ದಾರೆ.

ಒಬ್ಬ ನಾಯಕನನ್ನು ಸೃಷ್ಟಿ ಮಾಡುವ ಯೋಗ್ಯತೆ ಇಲ್ಲ. ಪಕ್ಷ ಕಟ್ಟುವ ಧಂ ಇಲ್ಲ. ಗೆದ್ದಲು ಕಟ್ಟಿದ ಹುತ್ತದಲ್ಲಿ ವಿಷಸರ್ಪದಂತೆ ಹೋಗಿ ಸೇರಿಕೊಳ್ಳುವ, ಕಂಡೋರ ಕಷ್ಟದ ಮೇಲೆ ಅಧಿಕಾರ ಅನುಭವಿಸುವ ಸಿದ್ದರಾಮಯ್ಯ.. ನೀವಾ ಜೆಡಿಎಸ್‌ ಬಗ್ಗೆ ಮಾತನಾಡುವುದು? ತುಮಕೂರಿನಿಂದ ಜೆಡಿಎಸ್‌ʼನ್ನು ಓಡಿಸಿ ಅನ್ನುವುದಕ್ಕೆ ತುಮಕೂರು ಜಿಲ್ಲೆಯೇನು ನಿಮ್ಮಪ್ಪನ ಜಹಗೀರಾ? ಅಥವಾ ಕಾಂಗ್ರೆಸ್‌ʼನ ಪಿತ್ರಾರ್ಜಿತ ಆಸ್ತಿಯಾ? ಎಂದು ಮಾಜಿ ಸಿಎಂ ಹೆಚ್‌.ಡಿ. ಕುಮಾರಸ್ವಾಮಿ ಕಿಡಿಕಾರಿದ್ದಾರೆ.

ಇನ್ನು ಇಷ್ಟಕ್ಕೆ ಸುಮ್ಮನಾಗದ ಕುಮಾರಸ್ವಾಮಿ, ಚಾಮುಂಡೇಶ್ವರಿ ಕ್ಷೇತ್ರದಿಂದ ಜನ ನಿಮ್ಮನ್ನ ಓಡಿಸಿದ್ದು ಮರೆತು ಬಿಟ್ಟಿದ್ದೀರಾ? ನಿಮ್ಮ ಕಂತ್ರಿ ರಾಜಕೀಯ ಎಲ್ಲರಿಗೂ ಗೊತ್ತಿದೆ ಅಂತಾ ಟ್ವೀಟ್‌ ಕಿಡಿಯನ್ನ ಸಿಡಿಸಿಬಿಟ್ಟಿದ್ದಾರೆ.

‘ನಿಮ್ಮದು ಕಂತ್ರಿ ರಾಜಕೀಯ’

ಚಾಮುಂಡೇಶ್ವರಿ ಕ್ಷೇತ್ರದಿಂದ ನಿಮ್ಮನ್ನು ಜನರು ಓಡಿಸಿದ್ದು ಮರೆತುಬಿಟ್ಟಿರಾ? ಈ ಸಲ ಬಾದಾಮಿ ಕ್ಷೇತ್ರದಿಂದಲೂ ಓಡಬೇಕಾಗುತ್ತದೆ, ಕಾಯಿರಿ. ಮತ್ತೆ ಮುಖ್ಯಮಂತ್ರಿ ಆಗಬೇಕೆನ್ನುವ ದುರಾಸೆ, ಅವಕಾಶ ಸಿಗದೇನೋ ಅನ್ನುವ ಹತಾಶೆ. ಅಭ್ಯರ್ಥಿಗಳಿಲ್ಲ, ಜೆಡಿಎಸ್‌ ಬಿಟ್ಟರೆ ಗತಿ ಇಲ್ಲ ನಿಮ್ಮ ಯೋಗ್ಯತೆಗೆ. ನಮ್ಮವರನ್ನು ಹೈಜಾಕ್‌ ಮಾಡಿ ಅವರಿಗೆ ಟಿಕೆಟ್‌ ಆಮಿಷ ತೋರಿಸಿ ಮೂಲ ಕಾಂಗ್ರೆಸ್ಸಿಗರನ್ನು ಮೂಲೆಗೆ ತಳ್ಳುವ ನಿಮ್ಮ ʼಕಂತ್ರಿʼ ರಾಜಕೀಯ ಎಲ್ಲರಿಗೂ ಗೊತ್ತಿದೆ ಎಂದರು ಹೆಚ್‌.ಡಿ. ಕುಮಾರಸ್ವಾಮಿ.

ಇನ್ನು ಹೆಚ್.ಡಿ. ಕುಮಾರಸ್ವಾಮಿ ಪಕ್ಷ ಕಟ್ಟುವ ಧಮ್ ಇಲ್ಲಾ ಎಂಬ ಮಾತಿಗೆ ಸಿದ್ದರಾಮಯ್ಯ ತಿರುಗೇಟು ಕೊಟ್ಟಿದ್ದಾರೆ. ಕುಮಾರಸ್ವಾಮಿಯವರ ಭಾಷೆ ಅವರ ಸಂಸ್ಕೃತಿಯನ್ನ ಹೇಳುತ್ತೇ ಅಂತಾ ಟಾಂಗ್ ಕೊಟ್ಟಿದ್ದಾರೆ.
ಇನ್ನು ನಾನು ಸಿಎಂ ಆಗಿದ್ದಾಗ ಗುತ್ತಿಗೆದಾರರಿಂದ ಹಣ ಪಡೆದಿಲ್ಲ. ಒಂದ್ವೇಳೆ ನಾನು ಹಣ ಪಡೆದಿರೋದು ಸಾಬೀತಾದ್ರೆ, ರಾಜಕೀಯಕ್ಕೆ ಗುಡ್‌ಬೈ ಹೇಳ್ತೀನಿ ಅಂತಾ ಸಿದ್ದರಾಮಯ್ಯ ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದ್ರು. ಇದೀಗ ಸಿದ್ದು ಈ ಮಾತಿಗೆ ಕೇಸರಿ ಪಡೆ ಕೂಡಾ ಟ್ವೀಟ್ ಮೂಲಕ ಟಾಂಗ್ ಕೊಟ್ಟಿದೆ.

ಮಾನ್ಯ ಸಿದ್ದರಾಮಯ್ಯನವರೇ ನೀವು ರಾಜಕೀಯ ನಿವೃತ್ತಿ ನೀಡಬೇಡಿ. ದೇಶಾದ್ಯಂತ ಕಾಂಗ್ರೆಸ್ ಹಡಗನ್ನು ಮುಳುಗಿಸಲು ನಿಮ್ಮಂತಹ ನಾಯಕರ ಅಗತ್ಯವಿದೆ. ಅಂದ ಹಾಗೆ ನೀವು ನಯಾಪೈಸೆ ಲಂಚ ತೆಗೆದುಕೊಂಡಿಲ್ಲ ಎಂದು ಹೇಳಿದ್ದೀರಿ. ಹಾಗಾದರೆ ಹ್ಯೂಬ್ಲೋಟ್ ವಾಚ್ ಬಂದಿದ್ದೆಲ್ಲಿಂದ? ಎಂದು ಬಿಜೆಪಿ ಕರ್ನಾಟಕ ಕೆಂಡಕಾರಿದೆ.


Spread the love

About Laxminews 24x7

Check Also

ಶ್ರೀಶೈಲಗಿರಿ ಪ್ರಕಾಶನ ಬೆಳಗಾವಿ ರವರಿಂದ ಸಾಹಿತಿ ಬಿ.ಕೆ. ಮಲಾಬಾದಿಯವರ ಕೃತಿ ಲೋಕಾರ್ಪಣೆ – ಜೀವನದ ಆದರ್ಶಗಳನ್ನು ಒತ್ತಿ ಹೇಳುವ ಕೃತಿಗಳು ಎಲ್ಲರಿಗೂ ಮಾರ್ಗದರ್ಶಿ– -ಎಸಿಪಿ ನಾರಾಯಣ ಬರಮನಿ

Spread the love ಶ್ರೀಶೈಲಗಿರಿ ಪ್ರಕಾಶನ ಬೆಳಗಾವಿ ರವರಿಂದ ಸಾಹಿತಿ ಬಿ.ಕೆ. ಮಲಾಬಾದಿಯವರ ಕೃತಿ ಲೋಕಾರ್ಪಣೆ – ಜೀವನದ ಆದರ್ಶಗಳನ್ನು …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ