ಲಂಡನ್(ಇಂಗ್ಲೆಂಡ್): ಸ್ವಿಸ್ ಬ್ಯಾಂಕ್ನೊಂದಿಗೆ ವಿವಾದಕ್ಕೆ ಸಂಬಂಧಿಸಿದ ಪ್ರಕರಣದಲ್ಲಿ ದೇಶ ಭ್ರಷ್ಟ ಉದ್ಯಮಿ ವಿಜಯ್ ಮಲ್ಯಗೆ ತೀವ್ರ ಹಿನ್ನಡೆಯಾಗಿದ್ದು, ಲಂಡನ್ನಲ್ಲಿರುವ ಐಷಾರಾಮಿ ನಿವಾಸವನ್ನು ತೊರೆಯುವಂತೆ ವಿಜಯ್ ಮಲ್ಯಗೆ ಆದೇಶ ನೀಡಲಾಗಿದೆ.ಸ್ವಿಸ್ ಬ್ಯಾಂಕ್ನೊಂದಿಗೆ ವಿಜಯ್ ಮಲ್ಯ ಸಾಲವನ್ನು ಪಡೆದಿದ್ದು, ತಮ್ಮ ಮನೆ ಸೇರಿದಂತೆ ಇತರ ಆಸ್ತಿಯನ್ನು ಅಡಮಾನವಾಗಿ ಇರಿಸಿದ್ದರು. ಹಲವಾರು ಬಾರಿ ಸಾಲ ಮರುಪಾವತಿಗೆ ಸೂಚನೆ ನೀಡಲಾಗಿತ್ತು. ದಿನಾಂಕವನ್ನೂ ವಿಸ್ತರಣೆ ಮಾಡಲಾಗಿತ್ತು.
ಸಾಲ ಮರುಪಾವತಿ ಮಾಡಲಾಗದ ಹಿನ್ನೆಲೆಯಲ್ಲಿ ಮಲ್ಯ ಕುಟುಂಬದವರಿಗೆ ಇನ್ನೂ ಹೆಚ್ಚಿನ ಕಾಲಾವಕಾಶ ನೀಡಲು ಸಾಧ್ಯವಿಲ್ಲ. ಅವರು ತಕ್ಷಣ ತಮ್ಮ ಐಷಾರಾಮಿ ನಿವಾಸವನ್ನು ಖಾಲಿ ಮಾಡಬೇಕೆಂದು ಕೋರ್ಟ್ ಆದೇಶ ನೀಡಿದೆ.
ವಿಜಯ್ ಮಲ್ಯ ನಿವಾಸ ಲಂಡನ್ನ ಕಾರ್ನ್ವಾಲ್ ಟೆರೇಸ್ ಬಳಿ ಇದ್ದು, ರೆಜೆಂಟ್ ಪಾರ್ಕ್ಗೆ ಸಮೀಪದಲ್ಲಿದೆ. ಅದಷ್ಟೇ ಅಲ್ಲದೇ ವಿಶ್ವವಿಖ್ಯಾತ ಮೇಡಂ ಟುಸ್ಸಾಡ್ಸ್ ಮ್ಯೂಸಿಯಂ ಕೂಡಾ ವಿಜಯ್ ಮಲ್ಯ ನಿವಾಸಕ್ಕೆ ಹತ್ತಿರವಿದೆ.