ಬೆಂಗಳೂರು: ಖಾಸಗೀ ಮನರಂಜನಾ ವಾಹಿನಿಯ ರಿಯಾಲಿಟಿ ಶೋ ನಲ್ಲಿ ಹೆಸರುವಾಸಿಯಾಗಿದ್ದಂತ ಪುಟಾಣಿ ಸಮನ್ವಿ, ನಿನ್ನೆ ಟಿಪ್ಪರ್ ಲಾರಿ ಚಾಲಕನ ಅಜಾಗರೂಕ ಚಾಲನೆಯಿಂದ ಬೈಕ್ ನಿಂದ ಕೆಳಗೆ ಬಿದ್ದು ಸಾವನ್ನಪ್ಪಿದ್ದಳು. ಸಮನ್ವಿಯ ಮೃತ ದೇಹ ಕಂಡ ತಂದೆ ರೂಪೇಶ್..
ಮಗಳೇ ನನ್ನ ಕ್ಷಮಿಸಿ ಬಿಡು.. ನಿನ್ನ ಉಳಿಸಿಕೊಳ್ಳೋದಕ್ಕೆ ಆಗಲಿಲ್ಲ ಎಂಬುದಾಗಿ ಬಿಕ್ಕಿ ಬಿಕ್ಕಿ ಅತ್ತಿದ್ದಾರೆ.
ನಿನ್ನೆ ರಿಯಾಲಿಟಿ ಶೋ ಸ್ಪರ್ಧಿ ಸಮನ್ವಿ, ಆಕೆಯ ತಾಯಿಯೊಂದಿಗೆ ಸ್ಕೂಟಿಯಲ್ಲಿ ತೆರಳುತ್ತಿದ್ದಂತ ಸಂದರ್ಭದಲ್ಲಿ ಟಿಪ್ಪರ್ ಲಾರಿಯೊಂದು ಓವರ್ ಟೇಕ್ ಮಾಡೋ ಬರದಲ್ಲಿ, ಇವರು ತೆರಳುತ್ತಿದ್ದಂತ ಸ್ಕೂಟಿಗೆ ಡಿಕ್ಕಿಯಾಗಿತ್ತು. ಟಿಪ್ಪರ್ ಬೈಕ್ ಗೆ ಡಿಕ್ಕಿಯಾಗಿ ಕೆಳಗೆ ಬಿದ್ದಂತ ಸಮನ್ವಿ ಮೂಳೆ ಮುರಿತಗೊಂಡು ತೀವ್ರ ರಕ್ತಸ್ತ್ರಾವ ಉಂಟಾಗಿ, ಆಸ್ಪತ್ರೆಗೆ ಸಾಗಿಸೋ ಮಾರ್ಗ ಮಧ್ಯೆಯೇ ಸಾವನ್ನಪ್ಪಿದ್ದರು. ಸಮನ್ವಿ ತಾಯಿ ಅಮೃತಾ ಗಾಯಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಮಗಳ ಮೃತದೇಹವನ್ನು ಕಿಮ್ಸ್ ಆಸ್ಪತ್ರೆಯ ಬಳಿಯಲ್ಲಿ ಕಂಡಂತ ತಂದೆ ರೂಪೇಶ್ ಅವರು, ಮೃತದೇಹವನ್ನು ತಪ್ಪಿ, ಬಿಕ್ಕಿ ಬಿಕ್ಕಿ ಅತ್ತರು. ಅಲ್ಲದೇ ಐ ಆಂ ವೆರಿ ಸಾರಿ, ನಿನ್ನ ಉಳಿಸಿಕೊಳ್ಳೋದಕ್ಕೆ ಆಗಲಿಲ್ಲ ಎಂಬುದಾಗಿ ದುಖದ ಕಟ್ಟೆ ಹೊಡೆದು, ಗಳಗಳ ಅತ್ತರು. ಅಲ್ಲಿದ್ದ ಸಂಬಂಧಿಕರು ಅವರನ್ನು ಸಮಾಧಾನಿಸುವಂತೆ ಆಯ್ತು.
Laxmi News 24×7