Breaking News

ಸರ್ಕಾರ ತೆಗೆದುಕೊಂಡ ತೀರ್ಮಾನಕ್ಕೆ ನಾವು ಬದ್ಧ.:ಡಿ.ಕೆ.ಶಿವಕುಮಾರ್

Spread the love

ಬೆಂಗಳೂರು, ಏ.21- ಎಲ್ಲರೂ ಕಾನೂನು ಗೌರವಿಸಬೇಕು. ಕೊರೊನಾ ಹೋರಾಟದಲ್ಲಿ ಸರ್ಕಾರ ತೆಗೆದುಕೊಳ್ಳುವ ಒಳ್ಳೆಯ ನಿರ್ಧಾರಗಳ ಜೊತೆಯಲ್ಲಿ ಇರಬೇಕು ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಸೂಚನೆ ನೀಡಿದ್ದಾರೆ.

ಪದ್ಮನಾಭನಗರ ವಿಧಾನಸಭಾ ಕ್ಷೇತ್ರದಲ್ಲಿ ಹತ್ತು ಸಾವಿರ ಮಂದಿಗೆ ತಲಾ 10 ಕೆಜಿ ಅಕ್ಕಿ ವಿತರಿಸುವ ಕಾರ್ಯಕ್ರಮದಲ್ಲಿ ಭಾಗವಹಿಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸರ್ಕಾರ ತೆಗೆದುಕೊಂಡ ತೀರ್ಮಾನಕ್ಕೆ ನಾವು ಬದ್ಧ. ನಾವು ಕೂಡ ಅನೇಕ ಸಲಹೆಗಳನ್ನು ನೀಡಿದ್ದೇವೆ. ಅವುಗಳಲ್ಲಿ ಎಷ್ಟನ್ನು ಸ್ವೀಕಾರ ಮಾಡುತ್ತಾರೋ ಬಿಡುತ್ತಾರೋ ಅದು ಸರ್ಕಾರಕ್ಕೆ ಬಿಟ್ಟಿದ್ದು.

ರಾಜ್ಯದ ಜನರ ಆರೋಗ್ಯ, ಎಲ್ಲಾ ವರ್ಗದ ಜನರ ರಕ್ಷಣೆ, ಪಾರದರ್ಶಕತೆ ಕಾಪಾಡಿಕೊಳ್ಳುವುದು ಸರ್ಕಾರದ ಜವಾಬ್ದಾರಿ. ಆ ಕೆಲಸ ಮಾಡುತ್ತಾರೆ ಎಂಬ ವಿಶ್ವಾಸ ಇದೆ. ಸಂಕಷ್ಟದ ಸಮಯದಲ್ಲಿ ಸರ್ಕಾರದ ಜೊತೆಯಲ್ಲಿ ಇರುತ್ತೇವೆ ಎಂದು ನಾವು ಮೊದಲಿನಿಂದಲೂ ಹೇಳುತ್ತಿದ್ದೇವೆ, ಈಗಲೂ ಅದಕ್ಕೆ ಬದ್ಧರಿದ್ದೇವೆ ಎಂದರು.

ಆದರೆ ಕೇಂದ್ರ ಸರ್ಕಾರ ಒಂದು ರೀತಿ ರಾಜ್ಯ ಸರ್ಕಾರ ಇನ್ನೊಂದು ರೀತಿ ಘೋಷಣೆಗಳನ್ನು ಮಾಡಿ ಲಾಕ್ ಡೌನ್ ವಿಷಯದಲ್ಲಿ ಗೊಂದಲವು ಮೂಡಿಸಿವೆ ಎಂದು ಹೇಳಿದರು. ನಿನ್ನೆ ಪಾದರಾಯನಪುರ ಘಟನೆಯಲ್ಲೂ ನಾವು ಸರ್ಕಾರದ ಜೊತೆಯಲ್ಲಿ ನಿಂತಿದ್ದೇವೆ. ಬಿಜೆಪಿಯವರು ಪ್ರತಿ ಘಟನೆಗೂ ಜಾತಿ, ಧರ್ಮದ ಲೇಪ ಹಚ್ಚುತ್ತಿದ್ದಾರೆ. ಯಾರೋ ನೂರೈವತ್ತು ಜನ ಮಾಡಿದ ಕೃತ್ಯಕ್ಕೆ ಇಡೀ ಸಮುದಾಯವನ್ನೇ ಹೊಣೆ ಮಾಡುವುದನ್ನು ನಿಲ್ಲಿಸಬೇಕು ಎಂದು ಅವರು ಒತ್ತಾಯಿಸಿದರು.

ವಿಶ್ವಕ್ಕೆ ಕೊರೊನಾ ಕಾಡುತ್ತಿದೆ. ಮೇ 3ರವರೆಗಿನ ಲಾಕ್ ಡೌನ್ ಗೆ ನಾವು ಸಹಕಾರ ನೀಡುತ್ತೇವೆ, ರೈತರ, ಕೂಲಿ ಕಾರ್ಮಿಕರ, ಕಾರ್ಮಿಕರ ದಿನ ನಿತ್ಯದ ವಸ್ತುಗಳ ಪೂರೈಕೆಗೆ ಸರ್ಕಾರ ಕ್ರಮ ಕೈಗೊಳ್ಳಬೇಕು ಎಂದು ಸಲಹೆ ನೀಡಿದರು.

ಪಾದರಾಯನಪುರದಲ್ಲಿ ಗಲಾಟೆ ಮಾಡಿದವರನ್ನು ಹಸಿರು ವಲಯವಾಗಿರುವ ರಾಮನಗರದ ಜೈಲಿಗೆ ಸ್ಥಳಾಂತರಿಸುವ ಬಗ್ಗೆ ರಾಮನಗರ ಜೈಲು ಹಾಗೂ ಹೊರಗಿನಿಂದ ಈ ಕುರಿತು ನನಗೆ ಮಾಹಿತಿ ಬಂದಿದೆ. ಸರ್ಕಾರ ಮುಂದಾಲೋಚನೆ ಮಾಡಿಯೇ ರಾಮನಗರಕ್ಕೆ ಆರೋಪಿಗಳನ್ನು ಕಳುಹಿಸುತ್ತಿದ್ದಾರೆ. ನಾನು ಅದನ್ನು ವಿರೋಧಿಸಲು ಹೋಗುವುದಿಲ್ಲ. ರಕ್ಷಣೆ ಮಾಡುವುದು ಸರ್ಕಾರದ ಜವಾಬ್ದಾರಿ, ಅದನ್ನು ಮಾಡುತ್ತಾರೆ ಎಂದು ಹೇಳಿದರು.

ಕಾನೂನು ಯಾರಿಗೂ ದೊಡ್ಡದಲ್ಲಿ, ಎಲ್ಲರೂ ಕಾನೂನನ್ನು ಗೌರವಿಸಬೇಕು. ಸರ್ಕಾರ ಮಾಡುವ ಒಳ್ಳೆಯ ಕೆಲಸಗಳಿಗೆ ನಾವು ಬೆಂಬಲ ನೀಡಬೇಕು. ಯಾರೂ ಕಾನೂನು ಕೈಗೆತ್ತಿಕೊಳ್ಳಬಾರದು. ಕಾನೂನು ಕೈಗೆತ್ತಿಕೊಳ್ಳುವವರನ್ನು ಬೆಂಬಲಿಸಬಾರದು ಎಂದು ಎಲ್ಲರಿಗೂ ಕಟ್ಟುನಿಟ್ಟಾಗಿ ಸೂಚನೆ ನೀಡಲಾಗಿದೆ. ಒಂದಿಬ್ಬರು ಶಾಸಕರು ತಮ್ಮ ಸ್ಥಳೀಯ ರಾಜಕಾರಣ ಆಧರಿಸಿ ಕೆಲ ಮಾತುಗಳನ್ನಾಡಿದ್ದಾರೆ. ಆದರೂ ಎಲ್ಲರೂ ಎಚ್ಚರಿಕೆಯಿಂದ ನಡೆದುಕೊಳ್ಳುವಂತೆ ಹೇಳಿರುವುದಾಗಿ ತಿಳಿಸಿದರು.

ಕೆಪಿಸಿಸಿ ಕಾರ್ಯಾಧ್ಯಕ್ಷ ಸಲೀಂ ಅಹಮದ್, ಮಾಜಿ ಸಚಿವ ರಾಮಲಿಂಗಾರೆಡ್ಡಿ, ಕೆಪಿಸಿಸಿ ಮಾಜಿ ಪ್ರಧಾನ ಕಾರ್ಯದರ್ಶಿ ಗುರಪ್ಪನಾಯ್ಡು, ಸ್ಥಳೀಯ ಕಾರ್ಪೋರೇಟರ್ ಅನ್ಸರ್ ಪಾಶಾ ಮತ್ತಿತರರು ಹಾಜರಿದ್ದರು


Spread the love

About Laxminews 24x7

Check Also

ಭವಿಷ್ಯ ಹೇಳುತ್ತಿರುವ ಆರ್. ಅಶೋಕ ಬಳಿ ನಾನು ಕೂಡ ಭವಿಷ್ಯ ಕೇಳಲು ಹೋಗಿ ಬರ್ತೇನೆ: ಡಿ.ಕೆ. ಶಿವಕುಮಾರ್

Spread the loveಬೆಂಗಳೂರು: ನನಗೂ ಜ್ಯೋತಿಷ್ಯ ಶಾಸ್ತ್ರದ ಚಟವಿದೆ. ಆರ್. ಅಶೋಕ ಬೋರ್ಡ ಹಾಕಿಕೊಂಡಿದ್ದಾರೆ. ಸ್ವಲ್ಪ ಸಮಯ ತೆಗೆದುಕೊಂಡು ತಾವೂ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ