ನೀವು ನಮ್ಮನ್ನು ಅಗಲಿ ಹತ್ತು ವರ್ಷ ಕಳೆದರೂ ನಿಮ್ಮ ನೆನಪು ನಮ್ಮಲ್ಲಿ ಸದಾ ಜೀವಂತ: ಸಂತೋಷ್ ಜಾರಕಿಹೊಳಿ
ಗೋಕಾಕ್: ಗೋಕಾಕ ನಗರದ ಪ್ರತಿಷ್ಠಿತ ಮನೆತನ ಜಾರಕಿಹೊಳಿ ಕುಟುಂಬದಲ್ಲಿ ಇಂದು ದುಃಖ ಹಾಗೂ ಸಂತೋಷ್ ಎರಡರ ಸಂಭ್ರಮಾಚರಣೆ
ಒಂದುಕಡೆ ಹಿರಿಯ ಜೀವಗಳು ಅಗಲಿ, ಹತ್ತು ವರ್ಷ ಕಳೆದಿವೆ ಎಂಬ ನೋವು ಆದ್ರೆ , ಇನ್ನೊಂದು ಕಡೆ ಅವರ್ ನೆನಪು ಸದಾ ನಮ್ಮ ಮನದಲ್ಲಿ ಹಚ್ಚ ಹಸಿರು ಆಗಿವೆ ಎಂಬ ನೆನಪು ಇವೆ ಎಂದರು ಸಂತೋಷ್ ಜಾರಕಿಹೊಳಿ ಅವರು
ಹೌದು ಇಂದು ಗೋಕಾಕ ನಗರದಲ್ಲಿ ಗೋಕಾಕ ಮನೆತನದ ಹಿರಿಯ ಜೀವಿಗಳಾದ ಶ್ರೀ ಲಕ್ಷ್ಮಣ ರಾವ್ ದಂಪತಿಗಳ 10ನೆಯ ಪುಣ್ಯ ಸ್ಮರಣೆ ದಿನ
ಇಂದು ತೋಟದ ಮನೆಯಲ್ಲಿ ಈ ಒಂದು ಕಾರ್ಯಕ್ರಮ ನಡೆಯುತ್ತಿದ್ದು ಇಲ್ಲಿ ಎಲ್ಲ ಜಾರಕಿಹೊಳಿ ಕುಟುಂಬದ ಹಿರಿಯ ಕಿರಿಯ ಜೀವಿಗಳು ಬಂದು ಅವರ್ ಆಶೀರ್ವಾದ ಪಡೆಯುತ್ತಾರೆ
ಹಾಗೂ ಸಂತೋಷ್ ಜಾರಕಿಹೊಳಿ ಅವರಿಗೆ ಅಜ್ಜ ಅಜ್ಜಿ ಅಂದರೆ ಅಪಾರ ಪ್ರೀತಿ ಮೊದಲನೆಯ ಮೊಮ್ಮಗ ಇವರು ಆಗಿರುವುದರಿಂದ ಇವರ ಮೇಲೆ ಪ್ರೀತಿ ಜಾಸ್ತಿ .
ಅವರ್ ಸವಿ ನೆನಪಿಗೆ ಸಂತೋಷ್ ಜಾರಕಿಹೊಳಿ ಅವರು ಅವರ್ ಶ್ರೀ ಸೌಭಾಗ್ಯ ಲಕ್ಷ್ಮಿ ಸಕ್ಕರೆ ಕಾರ್ಖಾನೆ ಯಲ್ಲಿ ಕೂಡ ಅವರ್ ಭಾವ ಚಿತ್ರವನ್ನ ಅತ್ಯಂತ ದೊಡ್ಡ ದಾದ ಗಾತ್ರದಲ್ಲಿ ನಿರ್ಮಾಣ ಮಾಡಿದ್ದಾರೆ
ಇನ್ನು ಅವರ್ ನೆನಪು ಸದಾ ನನ್ನ ಮನದಲ್ಲಿದ್ದೆ ಅವರು ನಮ್ಮನ್ನ ಬರಿ ದೇಹದಿಂದ ಅಗಲಿದ್ದಾರೆ ಹೊರತು ಮನಸ್ಸಿನಿಂದ ಅಲ್ಲ ಎಂದು ಕೂಡ ಹೇಳಿದ್ದಾರೆ .
ಇನ್ನೂ ಇಂದಿನ ಪುಣ್ಯ ಸ್ಮರಣೆ ಕಾರ್ಯಕ್ರಮದಲ್ಲಿ ವಿವಿಧ ಭಾಗದ ಹಳ್ಳಿಯ ಜನ ಕೂಡ ಭಾಗಿಯಾಗಲಿದ್ದಾರೆ , ಎಲ್ಲರೂ ಬಂದು ಆಶೀರ್ವಾದ ಪಡೆದು ಕೊಳ್ಳಿ ಎಂದು ಕೂಡ ಹೇಳಿದ್ದಾರೆ
ಜೊತೆಗಿರದ ಜೀವ ಎಂದೆಂದಿಗೂ ಜೀವಂತ