Breaking News

ಜ. 31ರವರೆಗೂ ಶಾಲೆಗಳಿಗೆ ರಜೆ; 1ರಿಂದ 9ರ ವರೆಗಿನ ತರಗತಿಗಳಿಗಷ್ಟೇ ಅನ್ವಯ: ಬಿಎಂಸಿ ಘೋಷಣೆ

Spread the love

ಮುಂಬೈ: ದೇಶಾದ್ಯಂತ ಕರೊನಾ ಭೀತಿ ಅತಿಯಾಗಿದ್ದು, ಸದ್ಯದಲ್ಲೇ ದಿನಕ್ಕೆ ಸುಮಾರು 60 ಸಾವಿರ ಮಂದಿ ಸೋಂಕಿತರಾಗಿ ಆಸ್ಪತ್ರೆಗೆ ಸೇರಲಿದ್ದಾರೆ ಎಂಬ ಅಧ್ಯಯನವೊಂದರ ಅಂಶ ಮತ್ತಷ್ಟು ಆತಂಕವನ್ನು ಮೂಡಿಸಿದೆ.

ದೇಶದಲ್ಲಿ ಒಮಿಕ್ರಾನ್ ಅಲೆ ಗರಿಷ್ಠ ಮಟ್ಟ ತಲುಪುವ ವೇಳೆ ದೈನಿಕ ಸುಮಾರು 60,000 ಜನರು ಆಸ್ಪತ್ರೆಗಳಿಗೆ ದಾಖಲಾಗಬಹುದು.

ಸದ್ಯ ದೇಶದಲ್ಲಿ ಒಮಿಕ್ರಾನ್ ಪ್ರಭೇದವೇ ಪ್ರಮುಖ ತಳಿಯಾಗಿದ್ದು ಶೀಘ್ರವೇ ಆರೋಗ್ಯ ಬಿಕ್ಕಟ್ಟು ಅಪ್ಪಳಿಸಬಹುದು ಎಂದು ಖಾಸಗಿ ಅಧ್ಯಯನವೊಂದು ಹೇಳಿದೆ.

ಈ ನಡುವೆ ಮಹಾರಾಷ್ಟ್ರದಲ್ಲಿ ಈಗಾಗಲೇ ಪರಿಸ್ಥಿತಿ ಬಿಗಡಾಯಿಸಿದ್ದು ಮುಂಬೈನ ಶಾಲೆಗಳಿಗೆ ಈ ತಿಂಗಳಿಡೀ ರಜೆ ಘೋಷಿಸಲಾಗಿದೆ. ಮುಂಬೈನಲ್ಲಿ 1ರಿಂದ 9ನೇ ತರಗತಿವರೆಗೆ ಜ. 31ರ ವರೆಗೆ ಶಾಲೆಗಳಿಗೆ ರಜೆ ಘೋಷಿಸಲಾಗಿದೆ. ಕೋವಿಡ್​ ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಈ ಕ್ರಮಕೈಗೊಳ್ಳಲಾಗಿದ್ದು, 10-12ನೇ ತರಗತಿಗಳು ಎಂದಿನಂತೆಯೇ ನಡೆಯಲಿವೆ ಎಂದು ಬೃಹನ್ಮುಂಬೈ ಮುನಿಸಿಪಲ್​ ಕಾರ್ಪೋರೇಷನ್​ (ಬಿಎಂಸಿ) ತಿಳಿಸಿದೆ.


Spread the love

About Laxminews 24x7

Check Also

ರಾಜ್ಯದಲ್ಲಿ ಕ್ವಾಂಟಮ್‌ ಕ್ಷೇತ್ರದ ಅಭಿವೃದ್ದಿಗೆ ಸರಕಾರದಿಂದ ಹೆಚ್ಚಿನ ಸಹಕಾರ – ಶೀಘ್ರದಲ್ಲೇ ಕೈಗಾರಿಕೆ ಹಾಗೂ ಐಟಿಬಿಟಿ ಸಚಿವರೊಂದಿಗೆ ಸಭೆ: ಸಚಿವ ಎನ್‌ ಎಸ್‌ ಭೋಸರಾಜು

Spread the love ಬೆಂಗಳೂರು : ದೇಶದಲ್ಲೇ ಮೊದಲ ಕ್ವಾಂಟಮ್‌ ಕಂಪ್ಯೂಟರ್‌ ನಿರ್ಮಾಣದ ಮೂಲಕ ಕರ್ನಾಟಕ ರಾಜ್ಯ ದೇಶದಲ್ಲೇ ಪ್ರಥಮ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ