Breaking News

ತುಮಕೂರಿನ ದಲಿತರ ಮನೆಗೆ ನುಗ್ಗಿ ಹಣೆಗೆ ಸಿಂಧೂರ ಯಾಕೆ ಇಟ್ಟಿಲ್ಲ? ಕ್ರಿಸ್​ಮಸ್​ ಪ್ರಾರ್ಥನೆ ಯಾಕೆ ಮಾಡುತ್ತೀರ? ಎಂದು ಪ್ರಶ್ನಿಸಿದ ಬಜರಂಗದಳದವರಿಗೆ ತಿರುಗೇಟು ನೀಡಿರುವ ಮಹಿಳೆ

Spread the love

ತುಮಕೂರಿನ ದಲಿತರ ಮನೆಗೆ ನುಗ್ಗಿ ಹಣೆಗೆ ಸಿಂಧೂರ ಯಾಕೆ ಇಟ್ಟಿಲ್ಲ? ಕ್ರಿಸ್​ಮಸ್​ ಪ್ರಾರ್ಥನೆ ಯಾಕೆ ಮಾಡುತ್ತೀರ? ಎಂದು ಪ್ರಶ್ನಿಸಿದ ಬಜರಂಗದಳದವರಿಗೆ ತಿರುಗೇಟು ನೀಡಿರುವ ಮಹಿಳೆಯರು ನಾವು ಮಾಂಗಲ್ಯ ಬೇಕಾದರೂ ಬಿಚ್ಚಿಡುತ್ತೇವೆ ಅದನ್ನು ಕೇಳಲು ನೀವು ಯಾರು? ಎಂದು ದಬಾಯಿಸಿದ್ದಾರೆ.

ಬೆಂಗಳೂರು: ತುಮಕೂರಿನಲ್ಲಿ ಕ್ರಿಸ್‌ಮಸ್ ಆಚರಣೆಯನ್ನು ಪ್ರಶ್ನಿಸಿ ಗಲಾಟೆ ಮಾಡಿದ ಬಲಪಂಥೀಯರ ವಿರುದ್ಧ ಮಹಿಳೆಯರ ಗುಂಪು ಸಿಡಿದೆದ್ದ ವಿಡಿಯೋವೊಂದು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಹಿಂದುತ್ವವಾದಿಗಳು ಎಂದು ಹೇಳಿಕೊಂಡು ಬಂದ ಗುಂಪೊಂದು ಕ್ರಿಸ್​ಮಸ್​ ಆಚರಿಸಿದ್ದಕ್ಕೆ ತುಮಕೂರಿನ ದಲಿತರ ಮನೆಗೆ ನುಗ್ಗಿ ಗಲಾಟೆ ಮಾಡಿತ್ತು. ಅವರಿಗೆ ಎದುರಾಗಿ ಮಹಿಳೆಯರು ಕೂಡ ಗಲಾಟೆ ಮಾಡಿದ್ದು, ಬಳಿಕ ಪೊಲೀಸರು ಬಂದು ಪರಿಸ್ಥಿತಿಯನ್ನು ಶಾಂತಗೊಳಿಸಿದರು.

 

 

ತುಮಕೂರಿನಲ್ಲಿ ದಲಿತರ ಮನೆಯೊಂದರ ಮನೆಗೆ ನುಗ್ಗಿದ ಹಿಂದುತ್ವವಾದಿಗಳ ಗುಂಪೊಂದು ಮಂಗಳವಾರ ಕ್ರಿಸ್​ಮಸ್ ಕಾರ್ಯಕ್ರಮವನ್ನು ಆಚರಿಸದಂತೆ ತಡೆಯಲು ಯತ್ನಿಸಿದರು. ಅದನ್ನು ಆ ದಲಿತರ ಮನೆಯ ಮಹಿಳೆಯರು ತಡೆದರು. ಈ ಘಟನೆಯ ವಿಡಿಯೋ ಎಲ್ಲೆಡೆ ಹರಿದಾಡುತ್ತಿದೆ. ಕೊನೆಗೆ ಅಲ್ಲಿನ ಪರಿಸ್ಥಿತಿಯನ್ನು ನಿಯಂತ್ರಿಸಲು ಪೊಲೀಸರನ್ನು ಮನೆಗೆ ಕರೆಸಲಾಯಿತು. ಆದರೆ ಈ ವಾಗ್ವಾದದ ಬಗ್ಗೆ ಯಾವುದೇ ಪ್ರಕರಣ ದಾಖಲಾಗಿಲ್ಲ.

ತುಮಕೂರಿನ ಕುಣಿಗಲ್ ತಾಲೂಕಿನ ಬಿಳಿದೇವಾಲಯ ಗ್ರಾಮದಲ್ಲಿ ಮಂಗಳವಾರ ಸಂಜೆ 7.30ರ ಸುಮಾರಿಗೆ ಈ ಘಟನೆ ನಡೆದಿದೆ. ವಾದ-ವಿವಾದದಲ್ಲಿ ಭಾಗಿಯಾದ ಎರಡೂ ಗುಂಪುಗಳಿಂದ ದೂರುಗಳಿದ್ದರೂ ಪ್ರಕರಣ ದಾಖಲಾಗಿಲ್ಲ ಎಂದು ಕುಣಿಗಲ್ ಠಾಣೆಯ ಪೊಲೀಸ್ ನಿರೀಕ್ಷಕ ರಾಜು ಪಿ. ತಿಳಿಸಿದ್ದಾರೆ. ಆ ಕುಟುಂಬವು ಕ್ರಿಸ್‌ಮಸ್ ಆಚರಿಸುತ್ತಿತ್ತು. ಆದರೆ, ಕೆಲವು ಪುರುಷರು ಅಲ್ಲಿಗೆ ಹೋಗಿ ಅಡ್ಡಿಪಡಿಸಿದ್ದಾರೆ. ಇದು ಕೇವಲ ವಾದವಾಗಿದೆ ಮತ್ತು ಯಾವುದೇ ಹಿಂಸಾಚಾರ ನಡೆದಿಲ್ಲ. ನಾವು ಪ್ರಕರಣವನ್ನು ದಾಖಲಿಸಿಲ್ಲ. ಈ ಬಗ್ಗೆ ಪೊಲೀಸ್ ಇನ್​ಸ್ಪೆಕ್ಟರ್ ರಾಜು ತಿಳಿಸಿದ್ದಾರೆ.


Spread the love

About Laxminews 24x7

Check Also

ವರದಕ್ಷಿಣೆ ಕಿರುಕುಳ ಆರೋಪ, ಐಎಸ್‌ಡಿ ಡಿವೈಎಸ್‌ಪಿ ವಿರುದ್ಧ ಎಫ್ಐಆರ್

Spread the love ಬೆಂಗಳೂರು : ಡಿವೈಎಸ್‌ಪಿಯೊಬ್ಬರ ವಿರುದ್ಧ ಪತ್ನಿಗೆ ವರದಕ್ಷಿಣೆ ಕಿರುಕುಳ ನೀಡಿದ ಆರೋಪ ಕೇಳಿ ಬಂದಿದೆ. 41 ವರ್ಷದ ಮಹಿಳೆ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ