ಹೊಲದಲ್ಲಿ ನಿಂತು ಮಣ್ಣನ್ನು(Soil) ತೋರಿಸುತ್ತಿರುವ ರೈತ. ಇಲ್ಲಿ ದೊಡ್ಡ ಪ್ರಮಾಣದಲ್ಲಿ ತೆಗೆದಿರುವ ಗುಂಡಿ. ಇದು ಯಾವುದೋ ನಿಧಿ ಆಸೆಗೆ ತೆಗೆದಿರುವ ಹಳ್ಳವಂತೂ ಅಲ್ಲವೇ ಅಲ್ಲ. ಆದ್ರೆ ಈ ಜಮೀನನಲ್ಲಿರುವ ಮಣ್ಣನ್ನೇ(farmers land ) ಕಳ್ಳರು ಕಳ್ಳತನ ಮಾಡಿರುವ ಪ್ರಕರಣವೊಂದು ಬೆಳಕಿಗೆ ಬಂದಿದೆ. ಹೌದು. ಬಡ ರೈತನ ಜಮೀನಲ್ಲಿರುವ ಮಣ್ಣನ್ನು ಕಳ್ಳತನ ಮಾಡಿರುವ ಘಟನೆ ಹುಬ್ಬಳ್ಳಿಯ ತಾಲೂಕಿನ ಅಂಚಟಗೇರಿ ಗ್ರಾಮದ ಕಾಶೀನಾಥ ಖೊಡೆ ಎಂಬುವ ರೈತನ ಜಮೀನನಲ್ಲಿ ನಡೆದಿದೆ.
ರಾತ್ರೋ ರಾತ್ರಿ ಜಮೀನಿನ ಮಣ್ಣು ಕಳವು ಮಾಡಿದ ಭೂಪರು. ಇಟ್ಟಿಗೆ ತಯಾರಿಸಲು ಫಲ ನೀಡುವ ಮಣ್ಣು ಕಳ್ಳತನ ಮಾಡಿದ್ದಾರೆ. ನಮ್ಮ ತೋಟವನ್ನೇ ನಾಶ ಮಾಡಿ ಮಣ್ಣು ಕದ್ದಿದ್ದು, ದುಷ್ಕರ್ಮಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ರೈತ ಕಾಶಿನಾಥ ಖೋಡೆ ಆಗ್ರಹಿಸಿದ್ದಾರೆ. ಸುಮಾರು 15 ಲಕ್ಷ ಬೆಲೆಬಾಳುವ ಮಣ್ಣು ಕಳ್ಳತನ ಮಾಡಿದ ಚಾಲಕಿ ಕಳ್ಳರು. ರೈತನ ಬದುಕಿಗೆ ಕೊಡ್ಲಿ ಪೆಟ್ಟು ಹಾಕಿದ್ದಾರೆ. ಇದರಿಂದ ಬಡ ರೈತ ಕಂಗಾಲಾಗಿದ್ದಾನೆ. ಕೇವಲ 22 ಗುಂಟೆ ಜಮೀನು ಹೊಂದಿದ ರೈತನ ಜಮೀನನಲ್ಲಿ ಪ್ಲ್ಯಾನ್ ಮಾಡಿ ಮಣ್ಣಿನ ಕಳ್ಳತನ ಮಾಡಿದ್ದಾರೆ. ಇರುವ ಚಿಕ್ಕ ಜಮೀನಲ್ಲಿ ತೋಟ ಮಾಡಿದ್ದ ಅನ್ನದಾತ. ಆದ್ರೆ ಈ ಕಳ್ಳರು ತೋಟದಲ್ಲಿನ ಗಿಡಗಳನ್ನು ನಾಶ ಪಡಿಸಿ ಮಣ್ಣು ಕಳ್ಳತನ ಮಾಡಿದ್ದಾರೆ.
: Affair-Love-Murder: ಮಗಳು ಅರೆಸ್ಟ್.. ತಾಯಿಯ ಕೊಲೆಗೆ ಆಕೆಯ 3ನೇ ಗಂಡನೊಂದಿಗೆ ಕೈ ಜೋಡಿಸಿದ್ದಳಾ?
ಬಡ ರೈತನ ಅಳಲು..!
ಮಣ್ಣು ಕಳವು ಮಾಡಿದವರ ವಿರುದ್ಧ ನ್ಯಾಯ ಕೊಡಿಸಲು ರೈತ ಪೊಲೀಸ್ ಠಾಣೆ ಮೆಟ್ಟಿಲು ಏರಿದ್ದಾನೆ. ಇನ್ನೂ ವಿಶೇಷ ಅಂದ್ರೆ ಒಂದು ಜೆಸಿಬಿ ಹಾಗೂ ಟ್ರಕ್ ಅನ್ನು ಬಡ ರೈತ ಪೊಲೀಸರಿಗೆ ಒಪ್ಪಿಸಿದ್ದಾನೆ. ರಾತ್ರೋರಾತ್ರಿ ಇಂತಹ ಕೃತ್ಯ ಎಸಗಿ ರೈತನನ್ನು ವಂಚಿಸಿದವರ ಮೇಲೆ ಕ್ರಮ ಕೈಗೊಳ್ಳುವಂತೆ ಸ್ಥಳೀಯರು ಒತ್ತಾಯಿಸಿದ್ದಾರೆ. ವಾಸುದೇವ ಉದೋಜಿ ಎನ್ನುವವರು ಮಣ್ಣು ಕಳ್ಳತನ ಮಾಡಿದ್ದು, ಅವರಿಂದ ನಮಗೆ ನ್ಯಾಯ ಕೊಡಿಸಿ ಎಂದು ಪೊಲೀಸರ ಮೊರೆ ಹೋಗಿದ್ದಾನೆ.
ಇಟ್ಟಿಗೆ ಮಾಡಲು ಮಣ್ಣು ಕಳ್ಳತನ
ಇಟ್ಟಿಗೆ ಮಾಡಲು ಮಣ್ಣು ಅತ್ಯುಪಯುಕ್ತವಾಗಿದೆ ಎಂದು ರಾತ್ರೋರಾತ್ರಿ ಜೆಸಿಬಿಗಳ ಯಂತ್ರಗಳ ಸಹಾಯದಿಂದ, ಟ್ರಕ್ ಗಳಲ್ಲಿ ಮಣ್ಣು ಸಾಗಿಸಲಾಗುತ್ತಿತ್ತು. ಸ್ಥಳೀಯರು ಈ ವಿಷಯವನ್ನು ಗಮನಕ್ಕೆ ತರುತ್ತಿದ್ದಂತೆಯೇ ರಾತ್ರೋರಾತ್ರಿ ಹೊಲಕ್ಕೆ ದೌಡಾಯಿಸಿದ ರೈತ ಮಣ್ಣು ಕಳ್ಳರನ್ನು ರೆಡ್ ಹ್ಯಾಂಡ್ ಆಗಿ ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾನೆ. ಈ ಕುರಿತು ಹುಬ್ಬಳ್ಳಿಯ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.