Breaking News

ಯಾರೂ ಎಲ್ಲಿಯೂ ಯಾರನ್ನೂ ರ‍್ಯಾಗಿಂಗ್​ ಮಾಡುವಂತಿಲ್ಲ.

Spread the love

ಚಿತ್ರದುರ್ಗ: ಯಾರೂ ಎಲ್ಲಿಯೂ ಯಾರನ್ನೂ ರ‍್ಯಾಗಿಂಗ್​ ಮಾಡುವಂತಿಲ್ಲ. ಮಾಡಿದ್ರೆ ಅದು ಶಿಕ್ಷಾರ್ಹ ಅಪರಾಧ ಎಂದು ಪದೇಪದೆ ಜಾಗೃತಿ ಮೂಡಿಸುವ ಕಾರ್ಯ ನಡೆಯುತ್ತಲೇ ಇದೆ. ಆದರೆ, ಸಾಮಾಜಿಕ ಪಿಗುಡು ಮಾತ್ರ ಇನ್ನೂ ಜೀವಂತವಾಗಿದೆ. ಇದೀಗ ಚಿತ್ರದುರ್ಗ ಜಿಲ್ಲೆಯಲ್ಲಿ ರ‍್ಯಾಗಿಂಗ್​ ಕಿರುಕುಳಕ್ಕೆ 17 ವರ್ಷದ ಬಾಲಕಿಯೊಬ್ಬಳು ಬಲಿಯಾಗಿದ್ದಾಳೆ.

 

ಹೊಸದುರ್ಗ ತಾಲೂಕಿನ ಕೋಡಿಹಳ್ಳಿಹಟ್ಟಿ ಗ್ರಾಮದ ವಿಜಯಕುಮಾರ್ ಎಂಬುವರ ಪುತ್ರಿ ವಿ.ರಾಧಿಕಾ ಮೃತ ದುರ್ದೈವಿ. ಪಿಯುಸಿ ಓದುತ್ತಿದ್ದ ಈಕೆಯನ್ನು ಪಾಣಿಕಿಟ್ಟದಹಳ್ಳಿ ಗ್ರಾಮದ ಮುತ್ತು, ಶೀರೆನಕಟ್ಟೆ ಗ್ರಾಮದ ಯುವಕರಾದ ಸುದೀಪ್, ಕೋಟೇಶ್ ಮತ್ತು ಅಭಿಷೇಕ್ ಎಂಬ ನಾಲ್ವರು ಯುವಕರು ರೇಗಿಸುತ್ತಿದ್ದರಂತೆ. ಪ್ರತಿನಿತ್ಯ ಕಾಲೇಜಿಗೆ ಹೀಗುವಾಗ, ವಾಪಸ್​ ಮನೆಗೆ ಬರುವಾಗ ರೇಗಿಸೋದು, ಕಲ್ಲು ಹೊಡೆಯೋದು ಸೇರಿದಂತೆ ಮಾನಸಿಕ ಕಿರಿಕಿರಿ ನೀಡುತ್ತಿದ್ದರಂತೆ. ಇದರಿಂದ ಮನನೊಂದ ರಾಧಿಕಾ, ಡಿ.19ರಂದು ಆತ್ಮಹತ್ಯೆಗೆ ಶರಣಾಗಿದ್ದಾಳೆ.

ಮಾಡಿಕೊಂಡಿದ್ದಾರೆ ಎಂದು ಮೃತಳ ತಂದೆ ವಿಜಯಕುಮಾರ್, ನಾಲ್ವರು ಯುವಕರ ಕಾಟದಿಂದಲೇ ನನ್ನ ಮಗಳು ಸತ್ತಿದ್ದಾಳೆ. ಈ ಯುವಕರು ನಿತ್ಯ ಕಾಲೇಜು ವಿದ್ಯಾರ್ಥಿನಿಯರಿಗೆ ರೇಗಿಸುತ್ತಾ, ಕಲ್ಲು ಹೊಡೆಯುತ್ತಾ ಅಸಭ್ಯವಾಗಿ ಮಾತನಾಡಿ ಕಿರುಕುಳ ನೀಡುತ್ತಿದ್ದರು. ಅವರ ಕಾಟದಿಂದಲೇ ನನ್ನ ಮಗಳು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ಹೊಸದುರ್ಗ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಈ ಸಂಬಂಧ ಮುತ್ತು ಅಲಿಯಾಸ್ ಮುತ್ತಪ್ಪ(21), ಸುದೀಪ್ (19), ಕೋಟೇಶ್ (19), ಅಭಿಷೇಕ್ (22) ಎಂಬುವರನ್ನು ಪೊಲೀಸರು ಬಂಧಿಸಿ ಜೈಲಿಗೆ ಕಳುಹಿಸಿದ್ದಾರೆ.

 


Spread the love

About Laxminews 24x7

Check Also

14 ವರ್ಷದ ಬಾಲಕಿ ಮೇಲೆ ಅತ್ಯಾಚಾರ: ನಿಪ್ಪಾಣಿ ಯುವಕನಿಗೆ 30 ವರ್ಷ ಜೈಲು ಶಿಕ್ಷೆ

Spread the love 14 ವರ್ಷದ ಬಾಲಕಿ ಮೇಲೆ ಅತ್ಯಾಚಾರ: ನಿಪ್ಪಾಣಿ ಯುವಕನಿಗೆ 30 ವರ್ಷ ಜೈಲು ಶಿಕ್ಷೆ ನಿಪ್ಪಾಣಿ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ