ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ ಬೆಳಗಾವಿ ಗ್ರಾಮೀಣ ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್ ಸಂತೃಪ್ತಿಗೊಳಿಸಲು ಎಂಇಎಸ್ ಪುಂಡರ ಪರ ಮಾತನಾಡುತ್ತಿದ್ದಾರೆ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‍ರಾಜ್ ಇಲಾಖೆ ಸಚಿವ ಕೆ.ಎಸ್.ಈಶ್ವರಪ್ಪ ಹರಿಹಾಯ್ದಿದ್ದಾರೆ.
ಮಂಗಳವಾರ ಆನಗೋಳದಲ್ಲಿ ಭಗ್ನಗೊಂಡಿದ್ದ ರಾಯಣ್ಣ ಮೂರ್ತಿ ಮರುಸ್ಥಾಪನೆ ಮಾಡಿದ ಕನಕದಾಸ ಕಾಲೋನಿಗೆ ಭೇಟಿ ನೀಡಿ ಸಂಗೊಳ್ಳಿ ರಾಯಣ್ಣನವರ ಮೂರ್ತಿಗೆ ಸಚಿವ ಕೆ.ಎಸ್.ಈಶ್ವರಪ್ಪ ಮಾಲಾರ್ಪಣೆ ಮಾಡಿ ಗೌರವ ಸಲ್ಲಿಸಿದರು.
ನಂತರ ಮಾಧ್ಯಮಗಳ ಜೊತೆಗೆ ಮಾತನಾಡಿದ ಸಚಿವ ಕೆ.ಎಸ್.ಈಶ್ವರಪ್ಪ ಅವರು ಮುಕ್ಕಾಲು ಭಾಗ ಗ್ರಾಮೀಣ ಮತಕ್ಷೇತ್ರದಲ್ಲಿ ಎಂಇಎಸ್ ನವರ ಮತ ಪಡೆಯಲು ಡಿ.ಕೆ.ಶಿವಕುಮಾರ ಎಂಇಎಸ್ ಪರ ಮಾತನಾಡಿರಬಹುದು. ಕರ್ನಾಟಕ ರಾಜ್ಯ ಒಂದಾಗಿರುವ ಸಂದರ್ಭದಲ್ಲಿ ಡಿ.ಕೆ.ಶಿವಕುಮಾರ ಎಂಇಎಸ್ ಈ ಕೃತ್ಯ ಮಾಡಿಲ್ಲ. ಯಾರೋ ಪುಂಡರು ಇದನ್ನು ಮಾಡಿದ್ದಾರೆ ಎನ್ನುತ್ತಾರೆ. ಆದರೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಎಂಇಎಸ್ ನಿμÉೀಧ ಮಾಡಬೇಕು ಎನ್ನುತ್ತಾರೆ. ಈ ದ್ವಂದ್ವ ಹೇಳಿಕೆಗಳನ್ನು ಮೊದಲು ಇವರು ಸರಿಪಡಿಸಿಕೊಳ್ಳಲಿ ಎಂದು ಕಿಡಿಕಾರಿದರು.
ಎಂಇಎಸ್ ಪುಂಡರು ಕಿತಾಪತಿ ಮಾಡಿರುವುದು ಎಂದು ಇಡೀ ಕರ್ನಾಟಕಕ್ಕೆ ತಿಳಿದ ವಿಷಯವಾಗಿದೆ. ಅವರನ್ನು ಮಟ್ಟ ಹಾಕುವ ಕೆಲಸವನ್ನು ಸರಕಾರ ಮಾಡುತ್ತದೆ. ಈಗಾಗಲೇ 32 ಜನರನ್ನು ಬಂಧನ ಮಾಡಲಾಗಿದೆ. ಅವರನ್ನು ಪೆÇಲೀಸರು ವಿಚಾರಣೆ ಮಾಡಿ ಯಾರ್ಯಾರು ಇದ್ದಾರೆ ಎನ್ನುವುದು ಸಿಗುತ್ತದೆ. ಯಾವ ಸಂಘಟನೆ, ರಾಜಕೀಯ ಪಕ್ಷ ಇರುವುದು ಹೊರಗೆ ಬರುತ್ತದೆ. ಯಾವುದೇ ಕಾರಣಕ್ಕೂ ಮಹಾನ್ ಪುರುಷರಿಗೆ ಅಪಮಾನ ಮಾಡಿರುವವರನ್ನು ಬಿಡುವುದಿಲ್ಲ ಎಂದು ಎಚ್ಚರಿಸಿದರು.