ಬೆಳಗಾವಿಯಲ್ಲಿ ನಡೆದ ಗಲಾಟೆ ಬಗ್ಗೆ ಈಗಾಗಲೇ ಪೊಲೀಸ್ ಅಧಿಕಾರಿಗಳು ಕ್ರಮ ಕೈಗೊಂಡಿದ್ದಾರೆ. ನಾವು ಜನಪ್ರತಿನಿಧಿಗಳು ಏನು ಮಾಡೋಕೆ ಆಗುವುದಿಲ್ಲ. ಮುಂಚೆಯೇ ಹೇಳಿದ್ದೇವು ಅವರ ವಿರುದ್ಧ ಶಿಸ್ತಿನ ಕ್ರಮ ಕೈಗೊಳ್ಳುವಂತೆ. ಹೀಗಾಗಿ ಯಾರು ಇದರಲ್ಲಿ ಭಾಗಿಯಾಗಿದ್ದಾರೆ ಎಂದು ನಾವು ಹೇಳಲು ಬರೋದಿಲ್ಲ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ ಜಾರಕಿಹೊಳಿ ಮಾತಾಡಿದ್ದಾರೆ.
ಬೆಳಗಾವಿಯ ಸುವರ್ಣಸೌಧದಲ್ಲಿ ಮಾಧ್ಯಮಗಳ ಜೊತೆಗೆ ಮಾತನಾಡಿದ ಸತೀಶ ಜಾರಕಿಹೊಳಿ ಅವರು ಇದು ಕರ್ನಾಟಕದಲ್ಲಿ ಅಷ್ಟೇ ಅಲ್ಲ ಮಹಾರಾಷ್ಟ್ರದಲ್ಲಿಯೂ ಆಗುತ್ತದೆ. ಹೀಗಾಗಿ ಈ ಬಗ್ಗೆ ಸಮಗ್ರವಾಗಿ ಅಧ್ಯಯನ ಆಗಬೇಕು. ಇದರಲ್ಲಿ ಬಿಜೆಪಿ-ಕಾಂಗ್ರೆಸ್ ಪ್ರಶ್ನೆ ಬರೋದಿಲ್ಲ. ಸಮಸ್ಯೆ ಆದಾಗ ಇಂತಹ ಘಟನೆ ಆದಾಗ ಬೆಂಬಲವಾಗಿ ಮತ್ತು ವಿರೋಧವಾಗಿ ನಿಲ್ಲುವ ಪ್ರಯತ್ನ ಆಗಬೇಕು. ಅಂದಾಗ ಮಾತ್ರ ಸರ್ಕಾರ ಸರಿಯಾದ ಕ್ರಮ ಆಗಲು ಅನುಕೂಲ ಆಗುತ್ತದೆ ಎಂದರು.