Breaking News

ಪೊಲೀಸರಿಂದ ತಪ್ಪಿಸಿಕೊಳ್ಳಲು ಹೋಗಿ ಡಿವೈಡರ್​ಗೆ ಬೈಕ್ ಡಿಕ್ಕಿ: ಬೆಂಗಳೂರಲ್ಲಿ ಜೀವಂತ ಹೆಣವಾದ ಯುವಕ

Spread the love

ಬೆಂಗಳೂರು : ಹೆಲ್ಮೆಟ್ ಹಾಕದೆ ವೇಗವಾಗಿ ಬೈಕ್​ ಚಾಲನೆ ಮಾಡಿಕೊಂಡು ಸ್ನೇಹಿತರಿಬ್ಬರು ಹೊರಟಿದ್ದರು. ಮಾರ್ಗಮಧ್ಯೆ ಜಂಕ್ಷನ್​ನಲ್ಲಿ ಸಂಚಾರಿ ಪೊಲೀಸರು ತಪಾಸಣೆಯಲ್ಲಿ ನಿರತರಾಗಿದ್ದರು. ಸೀದಾ ಹೋಗಿ ದಂಡ ಕಟ್ಟಿದ್ರೆ ಯಾವುದೇ ಅನಾಹುತ ಆಗುತ್ತಿರಲಿಲ್ಲ. ಆದ್ರೆ, ಸ್ನೇಹಿತನ ಹುಚ್ಚುತನವೋ, ಪೊಲೀಸರ ಅಸಡ್ಡೆಯೋ ಯುವಕನೊರ್ವ ಆಸ್ಪತ್ರೆಯಲ್ಲಿ ಜೀವಂತ ಶವವಾಗಿದ್ದಾನೆ.

ಹೌದು, ಇದೇ ತಿಂಗಳು 9 ರಂದು ಮಧ್ಯಾಹ್ನ ಬೈಕಿನಲ್ಲಿ ಸ್ನೇಹಿತರಿಬ್ಬರು ಕತ್ರಿಗುಪ್ಪೆ ಬಳಿ ಹೋಗುವಾಗ ತಪಾಸಣೆ ನಿರತನಾಗಿದ್ದ ಪೊಲೀಸರಿಂದ ತಪ್ಪಿಸಿಕೊಳ್ಳಲು ಹೋಗಿ ಡಿವೈಡರ್​ಗೆ ಗುದ್ದಿದ್ದರು. ಪರಿಣಾಮ ಕೌಶಿಕ್ ಎಂಬ ಯುವಕನ ತಲೆಗೆ ಗಂಭೀರ ಗಾಯವಾಗಿತ್ತು. ಈ ವೇಳೆ ಈತನ ಸ್ನೇಹಿತ ಚೇತನ್ ಎಸ್ಕೇಪ್ ಆಗಿದ್ದ.

ಪ್ರಕರಣದ ವಿವರ

ತಪಾಸಣೆ ವೇಳೆ ಬೈಕ್​​ ಅಪಘಾತ: ಚೇತನ್ ಎಂಬಾತ ಕೌಶಿಕ್​ನನ್ನ ಮನೆಗೆ ಡ್ರಾಪ್ ಮಾಡಲು ಸ್ಕೂಟರ್​ನಲ್ಲಿ ಹೊರಟಿದ್ದ. ಇಬ್ಬರೂ ಹೆಲ್ಮೆಟ್ ಹಾಕದೆ ಸ್ಪೀಡ್ ಆಗಿ ಹೋಗುತ್ತಿದ್ದರು. ಜಂಕ್ಷನ್​ನಲ್ಲಿ ಪೊಲೀಸರು ತಪಾಸಣೆ ಮಾಡುತ್ತಿರುವುದು ಕಂಡುಬಂದಿದೆ. ಕೂಡಲೇ ಸ್ಕೂಟರ್ ರಿಟರ್ನ್ ತೆಗೆದುಕೊಂಡು ಮತ್ತಷ್ಟು ವೇಗವಾಗಿ ಹೋಗಿದ್ದಾರೆ. ಇದನ್ನು ಗಮನಿಸಿದ ಸಂಚಾರಿ ಪೊಲೀಸರು ಸಹ ಅವರನ್ನು ಬೆನ್ನತ್ತಿದ್ದಾರೆ. ಆಗ ಯುವಕರು ಅತಿವೇಗದಿಂದ ಡ್ರೈವ್ ಮಾಡಿದ ಪರಿಣಾಮ ನಿಯಂತ್ರಣ ತಪ್ಪಿ ಡಿವೈಡರ್​ಗೆ ಡಿಕ್ಕಿ ಹೊಡೆದು ರಸ್ತೆಗೆ ಅಪ್ಪಳಿಸಿದ್ದಾರೆ. ಪರಿಣಾಮ ಕೌಶಿಕ್ ತಲೆಗೆ ತೀವ್ರ ಪೆಟ್ಟಾಗಿ ರಸ್ತೆಯಲ್ಲಿ ಬಿದ್ರೆ, ಚೇತನ್ ಸ್ಕೂಟರ್ ತೆಗೆದುಕೊಂಡು ಪರಾರಿಯಾಗಿದ್ದ. ಆ ಬಳಿಕ ಸ್ಥಳೀಯರು ಕೌಶಿಕ್​ನನ್ನು ಆಸ್ಪತ್ರೆಗೆ ದಾಖಲಿಸಿದ್ದರು.ಸದ್ಯ ಕಿಮ್ಸ್ ಆಸ್ಪತ್ರೆಗೆ ಶಿಫ್ಟ್ ಮಾಡಿದ್ರೂ ಕೌಶಿಕ್​ ಆರೋಗ್ಯದಲ್ಲಿ ಯಾವುದೇ ಚೇತರಿಕೆ ಕಂಡು ಬಂದಿಲ್ಲ. ಬ್ರೈನ್ ಡೆಡ್​ ಆಗಿದ್ದು, ಚಿಕಿತ್ಸೆಗೆ ಸ್ಪಂದಿಸ್ತಿಲ್ಲವೆಂದು ಹೇಳಲಾಗ್ತಿದೆ. ಈ ಮಧ್ಯೆ ವಿಜಯನಗರ ಸಂಚಾರಿ ಠಾಣೆಯಲ್ಲಿ ಡ್ರೈವ್ ಮಾಡ್ತಿದ್ದ ಚೇತನ್ ವಿರುದ್ದ ಎಫ್​ಐಆರ್ ದಾಖಲಾಗಿದೆ. ಆದ್ರೆ ಇದೆಲ್ಲದಕ್ಕೂ ಪೊಲೀಸರ ನಡೆಯೇ ಕಾರಣ ಅಂತ ಪೋಷಕರು ಆರೋಪಿಸಿದ್ದಾರೆ.


Spread the love

About Laxminews 24x7

Check Also

ಮೃತ ಸರ್ಕಾರಿ ವೈದ್ಯಾಧಿಕಾರಿ ಕೊಠಡಿಯಲ್ಲಿ ಮಾಟಮಂತ್ರ: ಸಾವಿನ ಸುತ್ತ ಅನುಮಾನದ ಹುತ್ತ

Spread the loveಕೋಲಾರ, ಜುಲೈ 07: ಜಿಲ್ಲೆ ಮಾಲೂರು ತಾಲ್ಲೂಕಿನ ಆಸ್ಪತ್ರೆಯ ವೈದ್ಯಾಧಿಕಾರಿ ಡಾ.ವಸಂತ್ ಕುಮಾರ್ ಅವರು ತಮ್ಮ ಉತ್ತಮ ಸೇವೆಯಿಂದಲೇ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ