Breaking News

ಮಹಾರಾಷ್ಟ್ರದಲ್ಲಿ ಓಮಿಕ್ರಾನ್ ಸ್ಫೋಟವಾಗಿದೆ. ಒಂದೇ ದಿನ 7 ಜನರಲ್ಲಿ ಓಮಿಕ್ರಾನ್ ಸೋಂಕು

Spread the love

ಪಕ್ಕದ ಮಹಾರಾಷ್ಟ್ರದಲ್ಲಿ ಓಮಿಕ್ರಾನ್ ಸ್ಫೋಟವಾಗಿದೆ. ಒಂದೇ ದಿನ 7 ಜನರಲ್ಲಿ ಓಮಿಕ್ರಾನ್ ಸೋಂಕು ಕಾಣಿಸಿಕೊಂಡಿದೆ. ಪಿಂಪ್ರಿಯ ನಾಲ್ವರು ಹಾಗೂ ಮುಂಬಯಿನ ಮೂವರಲ್ಲಿ ಓಮಿಕ್ರಾನ್ ಕಾಣಿಸಿಕೊಂಡಿದೆ. ಈ ಮೂಲಕ ರಾಜ್ಯದಲ್ಲಿ ಓಮಿಕ್ರಾನ್ ಸೋಂಕಿತರ ಸಂಖ್ಯೆ 17ಕ್ಕೆ ಏರಿಕೆಯಾಗಿದೆ ಎಂದು ಮಹಾರಾಷ್ಟ್ರ ಆರೋಗ್ಯ ಇಲಾಖೆ ಹೇಳಿದೆ.

 

ಮುಂಬಯಿನ ಮೂವರು ಸೋಂಕಿತರೆಲ್ಲ ಪುರುಷರಾಗಿದ್ದು, 25, 37 ಹಾಗೂ 48 ವರ್ಷದವರಾಗಿದ್ದಾರೆ. ಇವರೆಲ್ಲ ದಕ್ಷಿಣ ಆಫ್ರಿಕಾ, ತಾಂಜೇನಿಯಾ ಹಾಗೂ ಇಂಗ್ಲೆಂಡ್ ನಿಂದ ಬಂದವರಾಗಿದ್ದಾರೆ. ರೋಗಿಗಳಲ್ಲಿ ಯಾವುದೇ ರೋಗ ಲಕ್ಷಣ ಕಂಡು ಬಂದಿಲ್ಲ ಎಂದು ವೈದ್ಯರು ತಿಳಿಸಿದ್ದಾರೆ.

ಈ ನಿಟ್ಟಿನಲ್ಲಿ ದೇಶದಲ್ಲಿ ಸದ್ಯ ಓಮಿಕ್ರಾನ್ ಪ್ರಕರಣಗಳ ಸಂಖ್ಯೆ 32ಕ್ಕೆ ಏರಿಕೆಯಾಗಿದೆ. ಮಹಾರಾಷ್ಟ್ರದಲ್ಲಿ 17, ರಾಜಸ್ಥಾನದಲ್ಲಿ 9, ಗುಜರಾತ್ ನಲ್ಲಿ 3 ಹಾಗೂ ಕರ್ನಾಟಕ ಹಾಗೂ ದೆಹಲಿಯಲ್ಲಿ ತಲಾ ಇಬ್ಬರು ಸೋಂಕಿತರಾಗಿದ್ದಾರೆ.


Spread the love

About Laxminews 24x7

Check Also

ಕಾರವಾರ ಕರಾವಳಿ ಉತ್ಸವದಲ್ಲಿ ಮಾನವೀಯತೆ ಮೆರುಗು: ಗಣ್ಯರಿಗಲ್ಲ, ವಿಶೇಷಚೇತನ ಮಕ್ಕಳಿಗೆ ಸಿಕ್ಕಿತು ‘ಹಾರುವ’ ಭಾಗ್ಯ!

Spread the loveಕಾರವಾರ: ಏಳು ವರ್ಷಗಳ ಸುದೀರ್ಘ ಕಾಯುವಿಕೆಯ ನಂತರ ಅರಬ್ಬಿ ಸಮುದ್ರತೀರದಲ್ಲಿ ನಡೆಯುತ್ತಿರುವ ‘ಕರಾವಳಿ ಉತ್ಸವ’ವು ಈ ಬಾರಿ ಕೇವಲ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ