Breaking News

ಮರಕ್ಕೆ ಡಿಕ್ಕಿ ಹೊಡೆದ ಸೇನಾ ಹೆಲಿಕಾಪ್ಟರ್; ಬೆಂಕಿ ಹೊತ್ತಿಕೊಂಡು ಉರಿಯುತ್ತಲೇ ಕೆಳಗೆ ಬಿದ್ದ ಜನ; ಭಯಾನಕ ದೃಶ್ಯ ವಿವರಿಸಿದ ಪ್ರತ್ಯಕ್ಷದರ್ಶಿ

Spread the love

ಚೆನ್ನೈ: ಸಿಡಿಎಸ್ ಬಿಪಿನ್ ರಾವತ್ ಪ್ರಯಾಣಿಸುತ್ತಿದ್ದ ಹೆಲಿಕಾಪ್ಟರ್ ಪತನ ದುರಂತದಲ್ಲಿ 13 ಜನರು ಮೃತಪಟ್ಟಿದ್ದು, ಓರ್ವ ಗಾಯಾಳು ಸಾವು ಬದುಕಿನ ನಡುವೆ ಹೋರಾಡುತ್ತಿದ್ದಾರೆ ಎಂದು ತಿಳಿದುಬಂದಿದೆ.

ಸೇನಾ ಮುಖ್ಯಸ್ಥ ಬಿಪಿನ್ ರಾವತ್ ಸೇರಿದಂತೆ 14 ಜನರು ಪ್ರಯಾಣಿಸುತ್ತಿದ್ದ MI-17V5 ಹೆಲಿಕಾಪ್ಟರ್ ತಮಿಳುನಾಡಿನ ಕುನ್ನೂರು ಬಳಿಯ ದುರ್ಗಮ ಪ್ರದೇಶದಲ್ಲಿ ದುರಂತಕ್ಕೀಡಾಗಿದ್ದು, ಸೇನಾ ಹೆಲಿಕಾಪ್ಟರ್ ಪತನದ ಭಯಂಕರ ಸನ್ನಿವೇಶವನ್ನು ಪ್ರತ್ಯಕ್ಷದರ್ಶಿ ಕೃಷ್ಣಸ್ವಾಮಿ ವಿವರಿಸಿದ್ದಾರೆ.

 

ಮಧ್ಯಾಹ್ನ 12:20ರ ಸುಮಾರಿಗೆ ಹೆಲಿಕಾಪ್ಟರ್ ವೊಂದು ಮರಕ್ಕೆ ಅಪ್ಪಳಿಸಿದ್ದು, ಭಯಂಕರ ಶಬ್ಧದೊಂದಿಗೆ ಬೆಂಕಿ ಹೊತ್ತಿಕೊಂಡಿದೆ. ಹೆಲಿಕಾಪ್ಟರ್ ನಲ್ಲಿದ್ದವರು ಬೆಂಕಿ ತಗುಲಿ ಉರಿಯುತ್ತಲೇ ಕೆಳಗೆ ಬೀಳಲಾರಂಭಿಸಿದ್ದಾರೆ. ಭಯಂಕರ ಶಬ್ಧ ಕೇಳುತ್ತಲೇ ಸುತ್ತಮುತ್ತಲು ಜನ ಸೇರಿದ್ದಾರೆ. ಘಟನೆ ಬಗ್ಗೆ ತಕ್ಷಣ ಪೊಲೀಸರಿಗೆ ಮಾಹಿತಿ ನೀಡಿದ್ದಾಗಿ ತಿಳಿಸಿದ್ದಾರೆ.

 

ಹೆಲಿಕಾಫ್ಟರ್‌ ಬೆಂಕಿ ಹೊತ್ತಿ ಉರಿಯುತ್ತಿರುವಂತೆಯೇ ಸ್ಥಳೀಯ ಯುವಕ ಕುಮಾರ್‌ ಎಂಬಾತ ಪೊಲೀಸರು ಹಾಗೂ ಅಗ್ನಿಶಾಮಕ ದಳಕ್ಕೆ ಕೂಡಲೇ ಕರೆ ಮಾಡಿದ. ಸ್ಥಳೀಯರು ಬಹಳಷ್ಟು ಜನ ಸೇರಿದರಾದರೂ ಬೆಂಕಿಯ ತೀವ್ರತೆ ನೋಡಿ ಭಯದಿಂದ ಯಾರೂ ಹತ್ತಿರಕ್ಕೆ ಹೋಗಲಿಲ್ಲ ಎಂದು ಕೃಷ್ಣಸ್ವಾಮಿ ವಿವರಿಸಿದ್ದಾರೆ.


Spread the love

About Laxminews 24x7

Check Also

ಅನಾರೋಗ್ಯದಿಂದ ತಾಯಮ್ಮ ಹುಲಿ ಸಾವು

Spread the loveಮೈಸೂರು: ಚಾಮರಾಜೇಂದ್ರ ಮೃಗಾಲಯದಲ್ಲಿ ಅನಾರೋಗ್ಯದಿಂದ ಬಳಲುತ್ತಿದ್ದ ಹೆಣ್ಣು ಹುಲಿ ತಾಯಮ್ಮ ಚಿಕಿತ್ಸೆಗೆ ಸ್ಪಂದಿಸದೆ ಬುಧವಾರ ಮುಂಜಾನೆ 3.45ರ ಸಮಯದಲ್ಲಿ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ