Breaking News

ಸಾರ್.. ನಮ್ಮ ಹಳ್ಳಿಗೆ ನುಗ್ಗಿರೋ ಮೊಸಳೆಯಿಂದ ಪ್ರಾಣಾಪಾಯವಾದ್ರೇ., ನಿಮ್ಮೇಲೆ ಕೇಸ್ ಹಾಕ್ತೀನಿ – ಡಿಸಿಗೆ ಯುವಕ ವಾರ್ನಿಂಗ್.!

Spread the love

ಬಳ್ಳಾರಿ: ಸರ್ ನಮ್ಮ ಗ್ರಾಮಕ್ಕೆ ಮೊಸಳೆಯೊಂದು ನುಗ್ಗಿದೆ. ಅದರಿಂದ ಯಾರಿಗಾದ್ರೂ ಗ್ರಾಮದಲ್ಲಿ ಪ್ರಾಣಾಪಾಯವಾದ್ರೇ.. ಫಸ್ಟ್ ನಮ್ಮ ಜಿಲ್ಲೆಯ ದಂಡಾಧಿಕಾರಿಗಳಾದಂತ ನೀವು ಜವಾಬ್ದಾರಿ ಆಗ್ತೀರಿ. ನಿಮ್ಮ ಮೇಲೆ ಕೇಸ್ ಹಾಕಿಸೋದಾಗಿ ಬಳ್ಳಾರಿಯ ಜಿಲ್ಲಾಧಿಕಾರಿಗಳಿಗೆ ಯುವಕನೊಬ್ಬ ವಾಟ್ಸಾಪ್ ಸಂದೇಶ ಕಳುಹಿಸಿ ವಾರ್ನಿಂಗ್ ಮಾಡಿರೋ ಘಟನೆ ನಡೆದಿದೆ.

ಈ ಬಳಿಕ ಡಿಸಿ ಯುವಕನಿಗೆ ಕರೆ ಮಾಡಿ ತರಾಟೆಗೆ ತೆಗೆದುಕೊಂಡ ಆಡಿಯೋ ಕೂಡ ವೈರಲ್ ಆಗಿದ

ಬಳ್ಳಾರಿ ಜಿಲ್ಲೆಯ ತಾಳೂರು ಗ್ರಾಮಕ್ಕೆ ಆಹಾರ ಅರಸಿ ಮೊಸಳೆಯೊಂದು ನುಗ್ಗಿತ್ತು. ಇದರಿಂದ ಗ್ರಾಮಸ್ಥರು ಭಯ-ಭೀತಿಗೊಂಡಿದ್ದರು. ಇದರಿಂದ ಸಿಟ್ಟಾದಂತ ತಾಳೂರು ನಿವಾಸಿ ಅಮರೇಶ್ ಎಂಬಾತ ಸರ್ ನಮ್ಮ ಗ್ರಾಮಕ್ಕೆ ಮೊಸಳೆ ನುಗ್ಗಿದೆ. ಯಾರಿಗಾದ್ರೂ ಪ್ರಾಣಾಪಾಯ ಆದ್ರೇ.. ಫಸ್ಟ್ ನಮ್ಮ ಬಳ್ಳಾರಿ ಜಿಲ್ಲಾ ದಂಡಾಧಿಕಾರಿ ನೀವು ಆಗಿದ್ದೀರಿ. ನಿಮ್ಮ ಮೇಲೆ ಎಫ್‌ಐಆರ್ ಕೇಸ್ ಹಾಕಿಸ್ತೀನಿ ಎಂಬುದಾಗಿ ವಾಟ್ಸಾಪ್ ಮೂಲಕ ವೀಡಿಯೋ ಸಹಿತ ಸಂದೇಶ ( WhatsApp Message ) ಕಳುಹಿಸಿದ್ದಾನೆ.

ಮುಂದುವರೆದು ಡಿಸಿ ಬಳಿಕ ಎರಡನೇಯದಾಗಿ ತಹಶೀಲ್ದಾರ್, ಮೂರನೇಯದಾಗಿ ಆರ್ ಎಫ್ ಓ ಮೇಲೆ ಕೇಸ್ ಹಾಕಿಸ್ತೀನಿ. ಇದು ಮುನ್ಸೂಚನೆ ಹೇಳ್ತಾ ಇದ್ದೀನಿ ನಿಮಗೆ. ಅದರ ಬಗ್ಗೆ ನೀವು ಯಾವುದೇ ಕ್ರಮ ತೆಗೆದುಕೊಂಡಿಲ್ಲ ಇವತ್ತು. ಉತ್ತನೂರಿನಲ್ಲಿ ಕಂಡು ಬಂದಿರೋ ಮೊಸಳೆಗಳಿಂದ ಯಾರಿಗಾದ್ರೂ ಪ್ರಾಣಾಪಾಯವಾದ್ರೇ ನೀವೇ ಜವಾಬ್ದಾರರು ಎಂದಿದ್ದಾನ

ಇದಷ್ಟೇ ಅಲ್ಲದೇ ಸಾರ್ ನಾನು ನಿಮಗೆ ತಿಳಿಸಿ 8 ದಿನ ಆಯ್ತು. ಇವತ್ತಿಗೂ ಮೊಸಳೆ ಹಿಡಿಯೋದಕ್ಕೆ ಯಾವುದೇ ಕ್ರಮ ಕೈಗೊಂಡಿಲ್ಲ. ಅದರ ಬಗ್ಗೆ ಒಂದು ಸ್ಟೇಟ್ಮೆಂಟ್ ಕೊಡಿ. ಒಂದು ವೇಳೆ ನೀವೇ ಇಲ್ಲಿ ಇದ್ದಿದ್ದರೇ ಪರಿಸ್ಥಿತಿ ಹೇಗೆ ಇರುತ್ತಿತ್ತು ಯೋಚಿಸಿ ಎಂದು ಸಂದೇಶ ಕಳುಹಿಸಿದ್ದಾನೆ.

ವಾಟ್ಸಾಪ್ ಸಂದೇಶವನ್ನು ಕಂಡಂತ ಬಳ್ಳಾರಿ ಜಿಲ್ಲಾಧಿಕಾರಿ ಪವನ್ ಕುಮಾರ್ ( Bellary DC Pavan Kumar ), ಸಂದೇಶ ಕಳುಹಿಸಿದಂತ ಯುವಕನಿಗೆ ಕರೆ ಮಾಡಿ ತರಾಟೆಗೆ ತೆಗೆದುಕೊಂಡಿದ್ದಾರೆ. ಹೀಗೆ ತರಾಟೆಗೆ ತೆಗೆದುಕೊಂಡ ಆಡಿಯೋ ಈಗ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಕೂಡ ಆಗಿದೆ.


Spread the love

About Laxminews 24x7

Check Also

ಮೃತ ಸರ್ಕಾರಿ ವೈದ್ಯಾಧಿಕಾರಿ ಕೊಠಡಿಯಲ್ಲಿ ಮಾಟಮಂತ್ರ: ಸಾವಿನ ಸುತ್ತ ಅನುಮಾನದ ಹುತ್ತ

Spread the loveಕೋಲಾರ, ಜುಲೈ 07: ಜಿಲ್ಲೆ ಮಾಲೂರು ತಾಲ್ಲೂಕಿನ ಆಸ್ಪತ್ರೆಯ ವೈದ್ಯಾಧಿಕಾರಿ ಡಾ.ವಸಂತ್ ಕುಮಾರ್ ಅವರು ತಮ್ಮ ಉತ್ತಮ ಸೇವೆಯಿಂದಲೇ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ