Breaking News

ಕಚೇರಿಯಲ್ಲೇ ತಬ್ಕೊಂಡು ಪೀಡಿಸಿದ್ರೂ 9 ಮಹಿಳೆಯರಲ್ಲಿ ಯಾರೊಬ್ಬರೂ ಬಾಯ್ಬಿಟ್ಟಿಲ್ಲ ಏಕೆ?

Spread the love

ಮಂಗಳೂರು: ಆಯುಷ್​ ಇಲಾಖೆ ವೈದ್ಯಾಧಿಕಾರಿ ಡಾ.ರತ್ನಾಕರ್​ನ ಕಾಮಪುರಾಣದ ಅಸಹ್ಯ ಉಟ್ಟಿಸೋ ದೃಶ್ಯಗಳು ವೈರಲ್​ ಆಗಿದ್ದು, ಆರೋಗ್ಯ ಕಚೇರಿಯಲ್ಲೇ ಹಲವು ದಿನದಿಂದ ಚೆಲ್ಲಾಟ ನಡೆಸಿ ಮಹಿಳಾ ಸಿಬ್ಬಂದಿಗೆ ಲೈಂಗಿಕ ಕಿರುಕುಳ ಕೊಟ್ಟಿದ್ದರೂ ತಡವಾಗಿ ಪ್ರಕರಣ ಬೆಳಕಿಗೆ ಬಂದಿದ್ದೇಕೆ?

ಈ ಹಿಂದೆಯೇ ವೈದ್ಯ ಕಚೇರಿಯಲ್ಲಿ ಮಹಿಳಾ ಸಿಬ್ಬಂದಿ ಜತೆ ರತ್ನಾಕರ್​ ನಡೆದುಕೊಳ್ಳುತ್ತಿರುವ ರೀತಿಯ ವಿರುದ್ಧ ಅನಾಮಿಕ ಪತ್ರವೊಂದು ರಾಷ್ಟ್ರೀಯ ಮಹಿಳಾ ಆಯೋಗಕ್ಕೆ ಬಂದಿತ್ತು. ಆಗಲೂ ಸಂತ್ರಸ್ತ ಮಹಿಳೆಯರೂ ಬಾಯ್ಬಿಟ್ಟಿರಲಿಲ್ಲ ಏಕೆ? ರತ್ನಾಕರ್​ ಕಂಡರೆ ಸಂತ್ರಸ್ತೆಯರಿಗೆ ಅಷ್ಟೊಂದು ಭೀತಿ ಇತ್ತೇ? ಈತನ ಹಿಂದೆ ಪ್ರಭಾವಿಗಳ್ಯಾರಾದ್ರೂ ಇದ್ದಾರಾ? ಎಂಬಿತ್ಯಾದಿ ಪ್ರಶ್ನೆಗಳು ಮೂಡಿವೆ.

ವೈದ್ಯ ಕಚೇರಿಯಲ್ಲೇ ಮಹಿಳಾ ಸಿಬ್ಬಂದಿ ಜತೆ ರತ್ನಾಕರ್​ ಚಲ್ಲಾಟವಾಡುತ್ತಿರುವ ದೃಶ್ಯಗಳು ಮೊನ್ನೆ ವೈರಲ್​ ಆಗಿತ್ತು. ಮಹಿಳಾ ಸಿಬ್ಬಂದಿಯನ್ನ ಕಂಡಾಕ್ಷಣ ಹಾಡು ಹೇಳುತ್ತಾ.. ಹತ್ತಿರ ಬಂದು ಅವರನ್ನ ತಬ್ಬಿಕೊಂಡು ಲೈಂಗಿಕ ಕಿರುಕುಳ ಕೊಡುತ್ತಿದ್ದ. ಒಟ್ಟು 9 ಮಹಿಳಾ ಸಿಬ್ಬಂದಿ ಜತೆ ಚೆಲ್ಲಾಟ ನಡೆಸಿ ಲೈಂಗಿಕ ಕಿರುಕುಳ ನೀಡಿದ ಆರೋಪದಲ್ಲಿ ಡಾ.ರತ್ನಾಕರ್​ನನ್ನು ಪೊಲೀಸರು ಬಂಧಿಸಿದ್ದು, ಆತನ ಮೊಬೈಲ್​ ಹಾಗೂ ಇನ್ನಿತರ ದಾಖಲೆಗಳನ್ನು ವಶಪಡಿಸಿಕೊಂಡಿದ್ದಾರೆ. ಆರೋಪಿ ವಿರುದ್ಧ ನೇರ ದೂರು ನೀಡಲು ಸಂತ್ರಸ್ತ ಮಹಿಳೆಯರು ಹಿಂದೇಟು ಹಾಕುತ್ತಿದ್ದಾರಂತೆ. ಇದಕ್ಕೂ ಮುನ್ನ ವೈದ್ಯ ಕಚೇರಿಯಲ್ಲಿ ಮಹಿಳಾ ಸಿಬ್ಬಂದಿ ಜತೆ ನಡೆದುಕೊಳ್ಳುತ್ತಿರುವ ರೀತಿಯ ವಿರುದ್ಧ ಅನಾಮಿಕ ಪತ್ರವೊಂದು ರಾಷ್ಟ್ರೀಯ ಮಹಿಳಾ ಆಯೋಗಕ್ಕೆ ಹೋಗಿತ್ತು. ಅನಾಮಿಕ ಪತ್ರ ಬಂದಾಗಲೂ ಸಂತ್ರಸ್ತ ಮಹಿಳೆಯರೂ ಬಾಯ್ಬಿಟ್ಟಿರಲಿಲ್ಲವಂತೆ!

ಅನಾಮಿಕ ಪತ್ರ: ವೈದ್ಯ ಕಚೇರಿಯಲ್ಲಿ ಮಹಿಳಾ ಸಿಬ್ಬಂದಿ ಜತೆ ಡಾ.ರತ್ನಾಕರ್​ ನಡೆದುಕೊಳ್ಳುತ್ತಿರುವ ರೀತಿಯ ವಿರುದ್ಧ ಅನಾಮಿಕ ಪತ್ರವೊಂದು ರಾಷ್ಟ್ರೀಯ ಮಹಿಳಾ ಆಯೋಗಕ್ಕೆ ಬಂದಿತ್ತು ಎಂದು ಪೊಲೀಸ್​ ಕಮಿಷನರ್​ ಹೇಳಿದ್ದಾರೆ. ಅಲ್ಲಿನ ಸೂಚನೆ ಮೇರೆಗೆ ಪೊಲೀಸ್​ ಇಲಾಖೆಯೂ ತನಿಖೆ ನಡೆಸಿದೆ. ಆದರೆ ಯಾವುದೇ ದಾಖಲೆಗಳು ನಮಗೆ ಸಿಕ್ಕಿರಲಿಲ್ಲ. ಸಂತ್ರಸ್ತ ಮಹಿಳೆಯರೂ ಯಾವುದೇ ಹೇಳಿಕೆಯನ್ನು ಆ ಸಂದರ್ಭ ನೀಡಿರಲಿಲ್ಲ. ಕೌನ್ಸೆಲರ್​ನ್ನು ಕರೆಸಿ ಹೇಳಿಕೆ ಪಡೆಯಲು ಪ್ರಯತ್ನಿಸಲಾಗಿತ್ತು. ಆರೋಗ್ಯ ಇಲಾಖೆ ನಡೆಸಿದ ವಿಚಾರಣೆಯ ಮಾಹಿತಿ ನಮಗೆ ಬಂದಿಲ್ಲ. ಆದರೆ ಪೊಲೀಸ್​ ಇಲಾಖೆ ನಡೆಸಿದ ತನಿಖೆ ವೇಳೆ ಸಂತ್ರಸ್ತ ಮಹಿಳೆಯರು ದೂರು ನೀಡಲು ಮುಂದೆ ಬಂದಿಲ್ಲ. ಆದ್ದರಿಂದ ಆರೋಪಿಯನ್ನು ಇಲ್ಲಿಂದ ವರ್ಗಾವಣೆಗೊಳಿಸಿದರೆ ಮಾತ್ರ ಸಂತ್ರಸ್ತರು ದೂರು ನೀಡಲು ಮುಂದೆ ಬರಬಹುದು. ಇಲ್ಲಿ ಪೊಲೀಸರ ವೈಫಲ್ಯ ಆಗಿಲ್ಲ ಎಂಬುದನ್ನು ಮಹಿಳಾ ಆಯೋಗಕ್ಕೆ ಸಲ್ಲಿಸಿದ ವರದಿಯಲ್ಲಿ ಉಲ್ಲೇಖಿಸಲಾಗಿದೆ ಎಂದು ಕಮಿಷನರ್​ ಶಶಿಕುಮಾರ್​ ಸ್ಪಷ್ಟಪಡಿಸಿದ್ದಾರೆ.

ಆರೋಪಿ ವಿರುದ್ಧ ನೇರ ದೂರು ನೀಡಲು ಸಂತ್ರಸ್ತ ಮಹಿಳೆಯರು ಹಿಂದೇಟು ಹಾಕುತ್ತಿದ್ದಾರೆ. ಆದರೆ ವಿಚಾರಣೆಗೆ ಹಾಜರಾಗಿ ಹೇಳಿಕೆ ನೀಡುವುದಾಗಿ ತಿಳಿಸಿದ್ದಾರೆ. ಸಂತ್ರಸ್ತರಿಗೆ ನೋಟಿಸ್​ ನೀಡಲಾಗಿದ್ದು, ನಿನ್ನೆ(ಶನಿವಾರ) ನಾಲ್ಕೈದು ಸಂತ್ರಸ್ತ ಮಹಿಳೆಯರು ಹೇಳಿಕೆ ನೀಡುವುದಾಗಿ ತಿಳಿಸಿದ್ದಾರೆ. ಸಂತ್ರಸ್ತರ ಹೇಳಿಕೆ ಮತ್ತು ತನಿಖೆಯಲ್ಲಿ ಸಿಗುವ ಡಿಜಿಟಲ್​ ದಾಖಲೆ ಸಾಕ್ಷ್ಯ ಆಧರಿಸಿ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದಿದ್ದಾರೆ.


Spread the love

About Laxminews 24x7

Check Also

ಅಂಗನವಾಡಿ ನೇಮಕಾತಿ ಇನ್ನಷ್ಟು ಸರಳ ಪಾರದರ್ಶಕವಾಗಲು ಕ್ರಮಕೈಗೊಳ್ಳಿ: ಅಧಿಕಾರಿಗಳಿಗೆ ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಸೂಚನೆ

Spread the love ಅಂಗನವಾಡಿ ನೇಮಕಾತಿ ಇನ್ನಷ್ಟು ಸರಳ ಪಾರದರ್ಶಕವಾಗಲು ಕ್ರಮಕೈಗೊಳ್ಳಿ: ಅಧಿಕಾರಿಗಳಿಗೆ ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಸೂಚನೆ ಕಲಬುರಗಿ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ