ಭಾರತೀಯ ಜನತಾ ಪಕ್ಷದ ಪರಿಷತ್ ಅಭ್ಯರ್ಥಿಯಾದ ಮಹಾಂತೇಶ್ ಕವಟಗಿಮಠ ಪ್ರಥಮ ಮತಗಳಿಂದ ಜಯಭೇರಿ ಸಾಧಿಸಿಲಿದ್ದಾರೆ. ಇದರಲ್ಲಿ ಯಾವುದೇ ಸಂಶಯವಿಲ್ಲ ಎಂದು ಕಾಗವಾಡ ಶಾಸಕ ಶ್ರೀಮಂತ ಪಾಟೀಲ್ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಮಾಧ್ಯಮಗಳೊಂದಿಗೆ ಮಾತನಾಡಿದ ಶಾಸಕ ಶ್ರೀಮಂತ ಪಾಟೀಲ್, ಬಿಜೆಪಿ ಪಕ್ಷದ ರಾಜ್ಯದ ಮುಖಂಡರು ಮಹಾಂತೇಶ್ ಕವಟಗಿಮಠ ಇವರಿಗೆ ಟಿಕೆಟ್ ನೀಡಿದ್ದು, ಪಕ್ಷದ ವತಿಯಿಂದ ಅವರ ಪರ ಮತಚಲಾಯಿಸಿ. ಪ್ರಥಮ ಪ್ರಾಶಸ್ತ್ಯದ ಮತಪಡೆದು ಆಯ್ಕೆಯಾಗಲಿದ್ದಾರೆ. ಭಾರತೀಯ ಜನತಾ ಪಕ್ಷದ ಅಭ್ಯರ್ಥಿ ಇದ್ದರೂ, ಮತ್ತೊಬ್ಬ ಪಕ್ಷೇತರ ಅಭ್ಯರ್ಥಿ ಕಣಕ್ಕೆ ಇಳಿಸಿದ್ದಾರೆ. ಹಾಗಾಗಿ ಪ್ರತಿಯೊಬ್ಬ ಗ್ರಾಮ ಪಂಚಾಯಿತಿ ಸದಸ್ಯರು ಎರಡು ಮತ ಚಲಾಯಿಸಬೇಕಾಗಿದೆ. ಎರಡನೇ ಮತ ಯಾರಿಗೆ ನೀಡಬೇಕು. ಎಂದು ಕೇಳಿದಾಗ ಈ ಬಗ್ಗೆ ಪಕ್ಷದ ಮುಖಂಡರು ಇನ್ನೂ ನಿರ್ಣಯ ಕೈಗೊಂಡಿಲ್ಲ. ಕಾರಣ ಬಿಜೆಪಿ ಪಕ್ಷದ ಏಕೈಕ ಅಭ್ಯರ್ಥಿ ಮಹಾಂತೇಶ್ ಕವಟಗಿಮಠ ಇದ್ದಾರೆ. ಎಂದು ಶ್ರೀಮಂತ ಪಾಟೀಲರು ಸ್ಪಷ್ಟಪಡಿಸಿದರು.
ಇನ್ನು ಈಗಾಗಲೇ ಎಲ್ಲಾ ನಾಯಕರು ಪರಿಷತ್ ಚುನಾವಣಾ ಕಣಕ್ಕೆ ಕಾಲಿಟ್ಟಿದ್ದು ಅಬ್ಬರದ ಪ್ರಚಾರ ಮಾಡಿತ್ತಿದ್ದಾರೆ. ಬಿಜೆಪಿ ಎಲ್ಲಾ ನಾಯಕರು ತಮ್ಮ ಪಕ್ಷದ ಅಭ್ಯರ್ಥಿ ಮಹಾಂತೇಶ್ ಕವಟಗಿಮಠ ರವರಿಗೆ ಪ್ರಥಮ ಪ್ರಾಶಸ್ಥ್ಯದ ಮತವನ್ನು ನೀಡಬೇಕೆಂದು ಮತದಾರರಲ್ಲಿ ಮನವಿ ಮಾಡಿದ್ದಾರೆ. ಆದರೆ ಮತದಾರ ಯಾರಿಗೆ ವಿಜಯದ ಮಾಲೆಯನ್ನು ತೊಡಿಸಲಿದ್ದಾನೆ ಎಂದು ಕಾದು ನೋಡಬೇಕಿದೆ.