Breaking News

ಪಂಚಮಸಾಲಿ ಸಮುದಾಯಕ್ಕೆ 2ಎ ಮೀಸಲಾತಿನೀಡದಿದ್ದರೆ ಬಸವರಾಜ ಬೊಮ್ಮಾಯಿಸಹ ಅಧಿಕಾರ ಕಳೆದುಕೊಳ್ಳುತ್ತಾರೆ:ವಿಜಯಾನಂದ ಕಾಶಪ್ಪನವರ

Spread the love

ಬಾಗಲಕೋಟೆ: ಪಂಚಮಸಾಲಿ ಸಮುದಾಯಕ್ಕೆ 2ಎ ಮೀಸಲಾತಿನೀಡದಿದ್ದರೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಸಹ ಅಧಿಕಾರ ಕಳೆದುಕೊಳ್ಳುತ್ತಾರೆ ಎಂದು ಮಾಜಿ ಶಾಸಕ ವಿಜಯಾನಂದ ಕಾಶಪ್ಪನವರಭವಿಷ್ಯ ನುಡಿದಿದ್ದಾರೆ.

ಅವರು ಇಲ್ಲಿನ ಕಳ್ಳಿಗುಡ್ಡ ಗ್ರಾಮದಲ್ಲಿ ಮಾತನಾಡಿ, ಮೀಸಲಾತಿ ನೀಡದ್ದಕ್ಕೆ ಮಾಜಿ ಮುಖ್ಯಮಂತ್ರಿ ಬಿ.ಎಸ್​. ಯಡಿಯೂರಪ್ಪ ಅವರು ಅಧಿಕಾರ ಕಳೆದುಕೊಂಡರು. ಮೀಸಲಾತಿ ನೀಡದೇ ಹೋದರೆ ಈಗ ಬೊಮ್ಮಾಯಿ ಸಹ ಅಧಿಕಾರ ಕಳೆದುಕೊಳ್ಳಲಿದ್ದಾರೆ ಎಂದು ಗುಡುಗಿದ್ದಾರೆ.

ಸಮುದಾಯದಿಂದ ಒಗ್ಗಟ್ಟಿನ ಹೋರಾಟ ನಡೆದಿದ್ದರೆ ಇಷ್ಟೊತ್ತಿಗಾಗಲೇ ನಮ್ಮ ಮಕ್ಕಳ ಕೈಯಲ್ಲಿ ಸಟಿ೯ಫಿಕೆಟ್ ಇರಬೇಕಾಗಿತ್ತು. ಸಮಾಜವನ್ನು ಕೆಲವರು ತಮ್ಮ ಅಧಿಕಾರಕ್ಕಾಗಿ ಲಾಭಕ್ಕಾಗಿ ಬಳಸಿಕೊಂಡಿದ್ದಾರೆ ಎಂದು ಆರೋಪಿಸಿದರು.

‌ಹೋರಾಟಕ್ಕೆ ಹಿಂದೇಟು ಹಾಕಿದ್ದಾರೆ. ಜಯ ಮೃತ್ಯುಂಜಯ ಸ್ವಾಮೀಜಿಯವರ ನೇತೃತ್ವದ ನಮ್ಮ ಹೋರಾಟ ತಾಕಿ೯ಕ ಅಂತ್ಯಕ್ಕೆ ಬಂದು ನಿಂತಿದೆ. ಸಿಎಂ ಬೊಮ್ಮಾಯಿ ಅವರು 3 ತಿಂಗಳ ಭರವಸೆ ನೀಡಿದ್ದಾರೆ. ಈಗಾಗಲೇ 1 ತಿಂಗಳು ಕಳೆದಿದೆ. ಯಡಿಯೂರಪ್ಪ ಅವರು ಈ ಹಿಂದೆ ಕೊಟ್ಟ ಗಡುವಿನಲ್ಲಿ ಮೀಸಲಾತಿ ನೀಡದೇ ಇದ್ದುದಕ್ಕೆ ಸಮಾಜದ ಶಾಪ ತಟ್ಟಿ ಅಧಿಕಾರ ಕಳೆದುಕೊಂಡರು. ಈಗ ಸಿಎಂ ಬೊಮ್ಮಾಯಿ ಮಾತು ಉಳಿಸಿಕೊಳ್ಳದಿದ್ದರೆ ಸ್ವಾಮೀಜಿ ಮತ್ತು ಸಮಾಜದ ಶಾಪ ತಟ್ಟದೇ ಇರುವುದಿಲ್ಲ ಎಂದಿದ್ದಾರೆ.

ವೀರ ಸಾವರ್ಕರ್​ ಅವಹೇಳನ ಹೇಳಿಕೆಯನ್ನು ಸಮಥಿ೯ಸಿಕೊಂಡ ವಿಜಯಾನಂದ, ದಾಖಲೆ ಇಟ್ಟುಕೊಂಡೇ ನಾನು ಮಾತನಾಡಿದ್ದೀನಿ. ವೀರ ಸಾವರ್ಕರ್​ ಸ್ವಾತಂತ್ರ್ಯ ಹೋರಾಟಗಾರ ಅಲ್ಲ. ಸಾವರ್ಕರ್​ ಬ್ರಿಟಿಷರ ಜೊತೆ ಹೊಂದಾಣಿಕೆ ಮಾಡಿಕೊಂಡಿದ್ದ ಬಗ್ಗೆ ಸಕಾ೯ರದ ಬಳಿ ದಾಖಲೆ ಇದೆ. ಸದಾ೯ರ್​ ವಲ್ಲಭಭಾಯಿ ಪಟೇಲರು ತಮ್ಮ ಪುಸ್ತಕದಲ್ಲಿ ಈ ಬಗ್ಗೆ ಉಲ್ಲೇಖಿಸಿದ್ದಾರೆ. ಗಾಂಧೀಜಿ ಹತ್ಯೆಗೆ ಗೋಡ್ಸೆ ಮುಖಾಂತರ ಸಾವರ್ಕರ್​ ಕೈವಾಡ ನಡೆಸಿದ್ದರು ಎಂದು ಗಂಭೀರ ಆರೋಪ ಮಾಡಿದರು.

ಶಾಸಕ ದೊಡ್ಡನಗೌಡ ಮತ್ತು ನನ್ನನ್ನು ಹೋಲಿಸಲಿಕ್ಕೆ ಆಗುತ್ತಾ ಎಂದು ಪ್ರಶ್ನಿಸಿದ ಕಾಶಪ್ಪನವರ್​, ದೊಡ್ಡನಗೌಡರು ಹೇಡಿ, ನಾನೊಬ್ಬ ಶೂರ, ವೀರ ಎಂದು ಏಕವಚನದಲ್ಲಿ ವಾಗ್ದಾಳಿ ನಡೆಸಿದರು.

ರಾಜ್ಯದಲ್ಲಿ ಪಂಚಮಸಾಲಿ 3ನೇ ಪೀಠಕ್ಕಾಗಿ ರಚನೆಯಾದ ಸ್ವಾಮೀಜಿಗಳ ಒಕ್ಕೂಟದ ವಿರುದ್ಧ ಗುಡುಗಿದ ಕಾಶಪ್ಪನವರ್​, ಯಾವುದೇ ಪಯಾ೯ಯ ಪೀಠ ರಚನೆಯಾಗಲ್ಲ. ಇರುವುದೊಂದೇ ಕೂಡಲಸಂಗಮ ಪೀಠ ಎಂದರು.


Spread the love

About Laxminews 24x7

Check Also

ಬೈಕ್ – ಹಾಲಿನ ವಾಹನ ನಡುವೆ ಡಿಕ್ಕಿ; ಇಬ್ಬರು ವೈದ್ಯಕೀಯ ವಿದ್ಯಾರ್ಥಿಗಳು ಸಾವು

Spread the loveಶಿವಮೊಗ್ಗ: ಹಾಲಿನ ವಾಹನ ಹಾಗೂ ಬೈಕ್ ನಡುವೆ ಸಂಭವಿಸಿದ ಭೀಕರ ಅಪಘಾತದಲ್ಲಿ ಇಬ್ಬರು ವೈದ್ಯಕೀಯ ವಿದ್ಯಾರ್ಥಿಗಳು ಸಾವನ್ನಪ್ಪಿದ್ದಾರೆ. ಶಿವಮೊಗ್ಗದ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ