ದಕ್ಷಿಣ ಭಾರತದಲ್ಲಿ ಹಲವು ದಿನಗಳಿಂದ ಸುರಿಯುತ್ತಿರುವ ಭಾರೀ ಮಳೆಗೆ ಚೆನ್ನೈನಲ್ಲಿ ಪ್ರತಿ ಕೆಜಿ ಟೊಮೊಟೋ ದರವನ್ನು 150 ರೂ..ಗೆ ಮುಟ್ಟಿದೆ.
ಇತ್ತ ಕರ್ನಾಟಕದಲ್ಲಿ ಟೊಮೆಟೋ ಆಗಮನ ಸ್ಥಗಿತವಾಗಿರುವುದು, ಕೃಷ್ಣಗಿರಿಯಲ್ಲಿ ಮಳೆಯಿಂದಾಗಿ ಬೆಳೆ ನಷ್ಟವಾದ ಕಾರಣ, ಬೇಡಿಕೆಗೆ ತಕ್ಕಂತೆ ಪೂರೈಕೆ ಆಗುತ್ತಿಲ್ಲ.
ಮಳೆ ಆರಂಭಕ್ಕಿಂತ ಮೊದಲು ಪ್ರತೀ ಕೆಜಿ ಟೊಮ್ಯಾಟೊಗೆ ೨೦ ರು. ನಂತೆ ಮಾರಾಟ ಮಾಡಲಾಗುತಿತ್ತು. ಏಕಾಏಕಿ ಆರಂಭವಾದ ಮಳೆ ತರಕಾರಿ ಬೆಲೆಗಳನ್ನು ಗಗನಕ್ಕೆ ಏರುವಂತೆ ಮಾಡಿತ್ತು. ಇದರಿಂದ ಗ್ರಾಹಕರಿಗೆ ಬಿಸಿ ತಟ್ಟಿದೆ.. ಇನ್ನು ಟೊಮೆಟೊ ಜೊತೆ ಈರುಳ್ಳಿ ಹಾಗು ಅಲೂಗಡ್ಡೆ ಬೆಲೆಯಲ್ಲಿಯೂ ಏರಿಕೆಯಾಗುತ್ತಿದೆ. 60 ರೂ..ಗಿಂತಲೂ ಹೆಚ್ಚು ಬೆಲೆಯಲ್ಲಿ ಪ್ರತೀ ಕೆಜಿಗೆ ಮಾರಾಟ ಮಾಡಲಾಗುತ್ತಿದೆ. ಇನ್ನು ಬೆಂಡೆ ಕಾಯಿ. ಸೌತೆಕಾಯಿ, ಮೆಣಸು, ಬಿಟ್ರೋಟ್, ಮೂಲಂಗಿ ಎಲ್ಲಾ ತರಕಾರಿಗಳ ಬೆಲೆಯೂ ಗಗನ ಮುಖಿಯಾಗಿಯೇ ಸಾಗುತ್ತಿದೆ.
ಮಾರುಕಟ್ಟೆಯಲ್ಲಿ ಪ್ರತಿ ಕೆಜಿ ಟೊಮೆಟೊ ಬೆಲೆ ೧೨೦ ರು.ತಲುಪಿದ್ದರೆ, ಚಿಲ್ಲರೆ ಮಾರುಕಟ್ಟೆಯಲ್ಲಿ ದರ ೧೫೦ ರು. ಮುಟ್ಟಿದೆ..
Laxmi News 24×7