Breaking News

ಪುನೀತ್ ಅಂದುಕೊಂಡಿದ್ದ ವೆಬ್ ಸೈಟ್ ಮೂಲಕ ಅಪ್ಪು ಕಂಡ ಕನಸು ನನಸಾಗಿಯೇ ಉಳಿದು ಹೋಯ್ತು. ಅಪ್ಪುಗಾಗಿ ಕಾಯುತ್ತೇನೆ ಎಂದ ಸಿಎಂ

Spread the love

ಪವರ್‌ಸ್ಟಾರ್ ಪುನೀತ್ ರಾಜ್‌ಕುಮಾರ್ ಅಗಲಿಕೆಯ ನೋವಿನಿಂದ ಚಿತ್ರರಂಗ ನಿಧಾನವಾಗಿ ಹೊರಬರಲು ಯತ್ನಿಸುತ್ತಿದೆ. ಚಿತ್ರರಂಗದ ಒಂದೊಂದೇ ಕಾರ್ಯಕ್ರಮಗಳು ಆರಂಭ ಆಗಿವೆ. ಇಂದು (ನವೆಂಬರ್ 19) ರೋರಿಂಗ್ ಸ್ಟಾರ್ ಶ್ರೀ ಮುರಳಿ ಅಭಿನಯದ ‘ಮದಗಜ’ ಸಿನಿಮಾದ ಟ್ರೈಲರ್ ಬಿಡುಗಡೆ ಮಾಡಲಾಗಿದೆ.

ಈ ಕಾರ್ಯಕ್ರಮಕ್ಕೆ ಸಿಎಂ ಬಸವರಾಜ ಬೊಮ್ಮಾಯಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು.

ಪುನೀತ್ ರಾಜ್‌ಕುಮಾರ್ ಅವರಿಗೆ ನಮಿಸಿ ಕಾರ್ಯಕ್ರಮವನ್ನು ಆರಂಭ ಮಾಡಲಾಯಿತು. ಈ ವೇಳೆ ಮತ್ತೆ ಬಸವರಾಜ್ ಬೊಮ್ಮಾಯಿ ಪುನೀತ್ ರಾಜ್‌ಕುಮಾರ್ ಅವರ ಒಡನಾಟವನ್ನು ಮತ್ತೆ ನೆನಪಿಸಿಕೊಂಡಿದ್ದಾರೆ. ಅಗಲಿಕೆಗೆ ಎರಡು ದಿನ ಮುನ್ನ ಪುನೀತ್ ಸಿ ಎಂ ಬಸವರಾಜ ಬೊಮ್ಮಾಯಿಗೆ ಪೋನ್ ಮಾಡಿದ್ದರು. ಅಂದು ಫೋನ್ ಮಾಡಿ ಏನು ಕೇಳಿದ್ದರು ಅನ್ನುವುದನ್ನು ಇಂದು(ನವೆಂಬರ್ 19) ರಿವೀಲ್ ಮಾಡಿದ್ದಾರೆ.

ಸಾಧಕನಿಗೆ ಸಾವು ಅಂತ್ಯವಲ್ಲ
 ಶ್ರೀಮುರಳಿ ನಟಿಸಿದ ಮದಗಜ ಚಿತ್ರದ ಟ್ರೈಲರ್ ಲಾಂಚ್ ಮಾಡಿದ ಬಳಿಕ ಸಿಎಂ ಬಸವರಾಜ್ ಬೊಮ್ಮಾಯಿ ಅಗಲಿದ ಅಪ್ಪು ಬಗ್ಗೆ ಮಾತಾಡಿದ್ರು. “ಅಪ್ಪು ನಮ್ಮನ್ನು ಬಿಟ್ಟು ಅಗಲಿಲ್ಲ. ಎಲ್ಲಿವರೆಗೆ ಕನ್ನಡಿಗರ ಹೃದಯ ಮಿಡಿಯುತ್ತೋ ಅಲ್ಲಿವರೆಗೂ ಅಪ್ಪು ನೆನಪಿರುತ್ತೆ. ಸಾಧಕನಿಗೆ ಸಾವು ಅಂತ್ಯವಲ್ಲ. ನಿಜವಾದ ಸಾಧಕನಿಗೆ ಸಾವಿನ ನಂತರವೂ ಹೇಗೆ ಬದುಕಬೇಕು ಅಂತ ಗೊತ್ತಿದೆ. ಅದನ್ನು ನಮ್ಮ ಅಪ್ಪು ಮಾಡಿ ತೋರಿಸಿದ್ದಾರೆ.” ಎಂದು ಪುನೀತ್ ಸಾಧನೆಯನ್ನು ಮತ್ತೆ ಪುನರುಚ್ಚರಿಸಿದರು. ಇದೇ ವೇಳೆ ಅಪ್ಪು ಪೋನ್ ಮಾಡಿ ಮಾತಾಡಿದ್ದರ ಬಗ್ಗೆ ಹೇಳಿದ್ದರು.

ಟೂರಿಸಂ ಬಗ್ಗೆ ಮಾತನಾಡಿದ್ದ ಅಪ್ಪು

ಪುನೀತ್ ರಾಜ್‌ಕುಮಾರ್ ಅಗಲಿದ ಎರಡು ದಿನ ಮುನ್ನವಷ್ಟೇ ಸಿ ಎಂ ಬಸವರಾಜ ಬೊಮ್ಮಾಯಿ ಅವರಿಗೆ ಕರೆ ಮಾಡಿದ್ದರು. ಸಿ ಎಂ ಬಳಿಕ ಒಂದು ಮನವಿಯನ್ನೂ ಮಾಡಿಕೊಂಡಿದ್ದರು. ಅದನ್ನೇ ಬಸವರಾಜ ಬೊಮ್ಮಾಯಿ ಮದಗಜ ವೇದಿಕೆ ಮೇಲೆ ರಿವೀಲ್ ಮಾಡಿದ್ದಾರೆ. “ಪುನೀತ್ ಸಾವಿಗೂ ನನಗೆ ಎರಡು ದಿನ ಮುಂಚೆ ಮಾಡಿದ್ರು. ಮಾಮಾ ಟೂರಿಸಂ ಬಗ್ಗೆ ವೆಬ್‌ ಸೈಟ್ ಮಾಡುತ್ತೇನೆ. ನೀವೇ ಬಂದು ಉದ್ಘಾಟನೆ ಮಾಡಬೇಕು ಅಂದಿದ್ದರು, ಮೊನ್ನೆ ತಾನೆ ಬಂದಿದ್ದೇನೆ. ಮತ್ತೆ ನಾನ್ಯಾಕೆ ಅಂದಿದ್ದೆ. ಇಲ್ಲಾ ನೀವೆ ಬರಬೇಕು. ಆ ಬಗ್ಗೆ ಮಾತಾಡುವುದಕ್ಕೆ ನೀವು ನನಗೆ ಟೈಮ್ ಕೊಡಬೇಕು ಅಂದಿದ್ದರು.” ಎಂದು ಸಿಎಂ ಬಸವರಾಜ್ ಬೊಮ್ಮಾಯಿ ನೆನಪಿಸಿಕೊಂಡಿದ್ದಾರೆ.

ಅಗಲಿದ ದಿನವೇ ಸಿ ಎಂ ಭೇಟಿಯಾಗಬೇಕಿತ್ತು

ಅಕ್ಟೋಬರ್ 29ರಂದೇ ಪುನೀತ್ ರಾಜ್‌ಕುಮಾರ್ ಹಾಗೂ ಸಿಎಂ ಬಸವರಾಜ ಬೊಮ್ಮಾಯಿಯವರನ್ನು ಭೇಟಿಯಾಗಬೇಕಿತ್ತು. ಅಂದೇ ಬಂದು ಟೂರಿಸಂ ವೆಬ್ ಸೈಟ್ ಬಗ್ಗೆ ಮಾತಾನಾಡುತ್ತೇನೆ ಅಂತ ಹೇಳಿದ್ದರು. ಅದರೇ ಅಂದೇ ಪುನೀತ್ ರಾಜ್‌ಕುಮಾರ್ ಎಲ್ಲರನ್ನೂ ಬಿಟ್ಟು ಹೋಗಿದ್ದಾರೆ. ಪುನೀತ್ ಅಂದುಕೊಂಡಿದ್ದ ವೆಬ್ ಸೈಟ್ ಮೂಲಕ ಅಪ್ಪು ಕಂಡ ಕನಸು ನನಸಾಗಿಯೇ ಉಳಿದು ಹೋಯ್ತು.

ಅಪ್ಪುಗಾಗಿ ಕಾಯುತ್ತೇನೆ ಎಂದ ಸಿಎಂ

ಅಕ್ಟೋಬರ್ 29ರಂದು ಸಿಎಂ ಬಸರಾಜ ಬೊಮ್ಮಾಯಿ ಅರ್ಧ ಗಂಟೆ ಅಪಾಯಿಂಟ್ಮೆಂಟ್ ಕೊಟ್ಟಿದ್ದರು. “ಅಂದು ಪುನೀತ್ ಸಿಎಂ ಭೇಟಿ ಮಾಡಿ ತನ್ನ ಟೂರಿಸಂ ವೆಬ್‌ ಸೈಟ್ ಬಗ್ಗೆ ಸಂಪೂರ್ಣ ಮಾಹಿತಿಯನ್ನು ನೀಡಬೇಕಿತ್ತು. ಆದರೆ, ಅಪ್ಪು ಅಂದು ಬರಲೇ ಇಲ್ಲ. ಅಂದು ಕೊಟ್ಟ ಅಪಾಯಿಂಟ್ಮೆಂಟ್‌ಗೆ ನಾನು ಕಾಯಲು ಸಿದ್ಧನಿದ್ದೇನೆ.” ಎಂದು ಸಿಎಂ ಹೇಳಿದ್ದಾರೆ.


Spread the love

About Laxminews 24x7

Check Also

ಹುದಲಿ ಹಾಗೂ ಸುತ್ತಮುತ್ತಲಿನ ಗ್ರಾಮಗಳ ವಿದ್ಯಾರ್ಥಿಗಳ ವಿದ್ಯಾಭ್ಯಾಸದ ಹಾದಿಯಲ್ಲಿ ಹೊಸ ಬೆಳಕು!

Spread the love ಹುದಲಿ ಹಾಗೂ ಸುತ್ತಮುತ್ತಲಿನ ಗ್ರಾಮಗಳ ವಿದ್ಯಾರ್ಥಿಗಳ ವಿದ್ಯಾಭ್ಯಾಸದ ಹಾದಿಯಲ್ಲಿ ಹೊಸ ಬೆಳಕು! ಯಮಕನಮರಡಿ ವಿಧಾನಸಭಾ ಕ್ಷೇತ್ರದ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ