Breaking News

ಬೈ ಎಲೆಕ್ಷನ್ ಸೋಲು ; ಬಿಜೆಪಿ ರಾಜ್ಯಾಧ್ಯಕ್ಷ ಸ್ಥಾನದಿಂದ ಕಟೀಲ್ಗೆ ಕೊಕ್ ; ಮುಂದಿನ ಸಾರಥಿ ಯಾರು?

Spread the love

ಉಪಕದನದ ಸೋಲು ಗೆಲುವಿನ ಬಳಿಕ, ಕಮಲ ಪಡೆಯ ಕಣ್ಣು ಇದೀಗ 2023ರ ಚುನಾವಣೆಯತ್ತ ನೆಟ್ಟಿದೆ. ಕೇಸರಿ ಪಡೆಯ ಸಾರಥಿಯ ಬದಲಾವಣೆಯೊಂದಿಗೆ ಚುನಾವಣೆ ಎದುರಿಸ್ತಾರಾ ಅನ್ನೋ ಮಾತುಗಳು ಕೂಡ ಮುನ್ನೆಲೆಗೆ ಬಂದಿವೆ.

ಬೈ-ಎಲೆಕ್ಷನ್ ಸೋಲು ಗೆಲುವಿನ ಲೆಕ್ಕಾಚಾರದ ಬಳಿಕ ರಾಜ್ಯ ಬಿಜೆಪಿಯ ಕಣ್ಣು 2023ರ ಚುನಾವಣೆಯತ್ತ ನೆಟ್ಟಿದೆ.

ಈಗಿನಿಂದ್ಲೆ ಚುನಾವಣೆಯ ಗೆಲುವಿಗಾಗಿ ಪ್ಲಾನ್ಗಳನ್ನ ರೂಪಿಸಲಾಗ್ತಿದೆ. ಈ ಮಧ್ಯ ರಾಜ್ಯ ಬಿಜೆಪಿ ಅಧ್ಯಕ್ಷರ ಬದಲಾವಣೆಯ ಮಾತುಗಳು ಪಿಸುಗುಡುತ್ತಿವೆ.

ರಾಜ್ಯದಲ್ಲಿ ಎದುರಾಗಲಿರೋ 2023ರ ವಿಧಾನಸಭಾ ಚುನಾವಣೆಗೆ ಬಿಜೆಪಿ ತಯಾರಿ ನಡೆಸುತ್ತಿದೆ. ಈ ಹಿನ್ನೆಲೆ ಪಕ್ಷದಲ್ಲಿ ಮಹತ್ವದ ಬದಲಾವಣೆಗೆ ತೆರೆಮರೆಯ ಸಿದ್ಧತೆ ಶುರುವಾಗಿದ್ದು, ಬಿಜೆಪಿ ರಾಜ್ಯಾಧ್ಯಕ್ಷರ ಬದಲಾವಣೆಗೆ ವರಿಷ್ಠರಿಂದ ಚಿಂತನೆ? ನಡೆದಿದೆ ಎನ್ನಲಾಗಿದೆ.

ರಾಷ್ಟ್ರೀಯ ಕಾರ್ಯಕಾರಣಿ ಬಳಿಕ ಈ ಕುರಿತಾಗಿ ಚರ್ಚಿಸಲಿದ್ದು, ಕಟೀಲ್ ಬದಲಿಗೆ ಹೊಸ ಅಭ್ಯರ್ಥಿ ಆಯ್ಕೆಗೆ ಚಿಂತನೆ ನಡೆದಿದೆ ಎನ್ನಲಾಗಿದೆ. ಇದಲ್ಲದೆ ಬಿಜೆಪಿಯಲ್ಲಿ ಮಂದಿನ ಸಾರಥಿ ಯಾರೆಂಬ ಚರ್ಚೆ ಶುರುವಾಗಿದ್ದು, ಮೂರು ಪ್ರಬಲ ನಾಯಕರುಗಳ ಹೆಸರು ಕೂಡ ರೇಸ್ನಲ್ಲಿವೆ.

 ಅಂದುಕೊಂಡಂತೆ ಕಟೀಲ್ಗೆ ಕೊಕ್ ನೀಡಿದ್ದೆ ಆದಲ್ಲಿ, ಆ ಸ್ಥಾನವನ್ನ ಯಾರು ಅಲಂಕರಿಸ್ತಾರೆ ಅನ್ನೊದಕ್ಕೂ ಈಗಾಗ್ಲೆ ಮೂವರ ಹೆಸರು ಕೇಳಿ ಬರ್ತಿವೆ. ಒಕ್ಕಲಿಗ ಸಮುದಾಯ ಪ್ರತಿನಿಧಿಸುವ ನಾಯಕ ಆರ್. ಅಶೋಕ್, ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಮತ್ತು ಸಂಘ ಪರಿವಾರದೊಂದಿಗೆ ಉತ್ತಮ ನಂಟು ಹೊಂದಿರುವ ಸಿ.ಟಿ. ರವಿ, ರಾಜ್ಯ ಬಿಜೆಪಿ ಉಪಾಧ್ಯಕ್ಷ ಮತ್ತು ದಲಿತ ಸಮುದಾಯ ಪ್ರತಿನಿಧಿಸುವ ನಾಯಕ ಅರವಿಂದ ಲಿಂಬಾವಳಿ ಹೆಸರು ಕೇಳಿ ಬರುತ್ತಿದೆ.

ಇನ್ನು ರಾಜ್ಯ ಬಿಜೆಪಿಯಲ್ಲಿನ ಈ ಎಲ್ಲ ಬೆಳವಣಿಗೆಯ ಕುರಿತು ಸಚಿವ ಈಶ್ವರಪ್ಪ ಪ್ರತಿಕ್ರಿಯಿಸಿದ್ದಾರೆ. ಪಕ್ಷದ ರಾಜ್ಯಾಧ್ಯಕ್ಷರ ಬದಲಾವಣೆ ಸುದ್ದಿಯನ್ನ ತಳ್ಳಿ ಹಾಕಿದ್ದಾರೆ. ಒಂದೆಡೆ ರಾಜ್ಯ ಬಿಜೆಪಿ ನಾಯಕತ್ವ ಬದಲಾವಣೆಯ ಮಾತು ಪ್ರಭಲವಾಗಿ ಕೇಳಿ ಬರ್ತಿದೆ. ಇನ್ನೊಂದೆಡೆ ನಳಿನ್ ಕುಮಾರ್ ಕಟೀಲ್ರೆ ಅಧ್ಯಕ್ಷರಾಗಿ ಮುಂದುವರಿತಾರೆ ಎಂಬ ಮಾತು ಕೇಳುತ್ತಿದೆ. ಆದ್ರೆ ಇದೆಲ್ಲವೂ ಬಿಜೆಪಿ ಹೈಕಮಾಂಡ್ ನಿರ್ಧಾರದ ಮೇಲೆ ಅಡಗಿದೆ.


Spread the love

About Laxminews 24x7

Check Also

ದಸರಾ ಉದ್ಘಾಟನೆಗೆ ಬಾನು ಮುಷ್ತಾಕ್‌ ಆಹ್ವಾನ ವಿರೋಧಿಸಿ ಮತ್ತೆರಡು ಪಿಐಎಲ್ ಸಲ್ಲಿಕೆ

Spread the loveನಾಡಹಬ್ಬ ಐತಿಹಾಸಿಕ ಮೈಸೂರು ದಸರಾ ಉದ್ಘಾಟನೆಗೆ ಬೂಕರ್‌ ಪ್ರಶಸ್ತಿ ಪುರಸ್ಕೃತ ಲೇಖಕಿ ಬಾನು ಮುಷ್ತಾಕ್‌ರನ್ನು ಮುಖ್ಯ ಅತಿಥಿಯಾಗಿ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ