Breaking News

ಅಕ್ರಮಗಳ ಸರದಾರರಾದ ನೀವು ಬಿಟ್ ಕಾಯಿನ್ ಹಗರಣದಲ್ಲಿ ಪಾಲು ಪಡೆದಿರುವಿರೆ? ಎಷ್ಟು ದಿನ ಸಿದ್ದರಾಮಯ್ಯಗೆ ರಾಜಕೀಯ ದಾಳವಾಗುತ್ತೀರಿ?

Spread the love

ಬೆಂಗಳೂರು: ಬಿಟ್ ಕಾಯಿನ್ ಹಗರಣ ಸಂಬಂಧ ಭಾರತೀಯ ಜನತಾ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಅವರ ವಿರುದ್ಧ ವಾಗ್ದಾಳಿ ನಡೆಸಿದೆ.

ಈ ಸಂಬಂಧ ಟ್ವೀಟ್ ಮಾಡಿರು ಬಿಜೆಪಿ, ಅಂದು ಕೇಂದ್ರೀಯ ತನಿಖಾ ಸಂಸ್ಥೆಗಳು ಅಕ್ರಮ ಆದಾಯ ಸಂಬಂಧಿತವಾಗಿ ನಿಮ್ಮ ಮೇಲೆ ದಾಳಿ ನಡೆಸಿದಾಗ ಈ ಲೋಕಜ್ಞಾನ ಎಲ್ಲಿ ಹೋಗಿತ್ತು, ಅಕ್ರಮಗಳ ಸರದಾರರಾದ ನೀವು ಬಿಟ್ ಕಾಯಿನ್ ಹಗರಣದಲ್ಲೂ ಬೆಂಬಲಿಗರ ಮೂಲಕ ಪಾಲು ಪಡೆದಿರುವ ಬಗ್ಗೆ ರಾಜ್ಯದ ಜನತೆಗೆ ಅನುಮಾನವಿದೆ, ನಿಜವೇ?

ಎಂದು ಡಿಕೆ ಶಿವಕುಮಾರ್ ಅವರಿಗೆ ಪ್ರಶ್ನಿಸಿದೆ.

ಇನ್ನೂ ಮಾಜಿ ಸಿಎಂ ಸಿದ್ದರಾಮಯ್ಯ ವಿರುದ್ಧವೂ ಹರಿಹಾಯ್ದಿರುವ ಬಿಜೆಪಿ, ವೀರಶೈವ ಲಿಂಗಾಯತ ವಿಭಜನೆಗೆ ಸಿದ್ದರಾಮಯ್ಯ ಅವರು ಎಂಬಿ ಪಾಟೀಲ್ ಅವರನ್ನು ದಾಳವಾಗಿ ಬಳಸಿಕೊಂಡರು,ಇದರ ಪರಿಣಾಮವಾಗಿ ಕಾಂಗ್ರೆಸ್ ಸರ್ವನಾಶವಾಯಿತು. ನಾನೂ ದಲಿತ ಎನ್ನುತ್ತಲೇ ದಲಿತ ನಾಯಕರನ್ನು ಹತ್ತಿಕ್ಕಿ, ದಲಿತರನ್ನೇ ಅವಮಾನ ಮಾಡಿದರು ಎಂದು ಬಿಜೆಪಿ ಆರೋಪಿಸಿದೆ.

ಸಿದ್ದರಾಮಯ್ಯರನ್ನು ಸಮರ್ಥಿಸಿಕೊಂಡು ನೀವು ಬಲಿಪಶುವಾಗಲು ಹೊರಟಿದ್ದೀರಾ ಪಾಟೀಲರೇ? ದಲಿತ ನಾಯಕರ ವಿರುದ್ಧ ಸಿದ್ದರಾಮಯ್ಯ ಅವರು ಆಡಿರುವ ಮಾತುಗಳು ದಲಿತ ಸಮುದಾಯದ ಭಾವನೆಯನ್ನು ಕೆರಳಿಸಿದೆ. ಇದರಿಂದ ಬಚಾವ್ ಆಗುವುದಕ್ಕೆ ಸಿದ್ದರಾಮಯ್ಯ ಅವರು ಬಿಟ್ ಕಾಯಿನ್ ವಿಚಾರ ಪ್ರಸ್ತಾಪಿಸುತ್ತಿದ್ದಾರೆ. ಎಂ.ಬಿ. ಪಾಟೀಲರೇ, ಎಷ್ಟು ದಿನ ದಲಿತ ವಿರೋದಿ ಸಿದ್ದರಾಮಯ್ಯನವರಿಗೆ ರಾಜಕೀಯ ದಾಳವಾಗುತ್ತೀರಿ? ಎಂದು ಲೇವಡಿ ಮಾಡಿದೆ.

ಸಿದ್ದರಾಮಯ್ಯ ಅವರು ದಲಿತ ಶಬ್ದ ಬಳಸಿಯೇ ಇಲ್ಲ ಎಂದು ವಾದಿಸುವ ಎಂಬಿ ಪಾಟೀಲ್ ಅವರೇ ಇದು ನಿಮ್ಮ ನಾಯಕ ಸಿದ್ದರಾಮಯ್ಯನವರ ಭಾಷಣ, ಸರಿಯಾಗಿ ಕೇಳಿಸಿಕೊಳ್ಳಿ. ಇಲ್ಲಿ ದಲಿತ ನಾಯಕರ ಬಗ್ಗೆ ಆಡಿರುವ ಅವಹೇಳನಕಾರಿ ಮಾತುಗಳು ಅರ್ಥವಾಗುತ್ತವೆ ಎಂದಿರುವ ಬಿಜೆಪಿ ಸಿದ್ದರಾಮಯ್ಯ ಅವರು ದಲಿತ ನಾಯಕರ ಬಗ್ಗೆ ಮಾತನಾಡಿರುವ ವಿಡಿಯೋವನ್ನು ಟ್ಯಾಗ್ ಮಾಡಿದೆ


Spread the love

About Laxminews 24x7

Check Also

ಬೈಕ್ – ಹಾಲಿನ ವಾಹನ ನಡುವೆ ಡಿಕ್ಕಿ; ಇಬ್ಬರು ವೈದ್ಯಕೀಯ ವಿದ್ಯಾರ್ಥಿಗಳು ಸಾವು

Spread the loveಶಿವಮೊಗ್ಗ: ಹಾಲಿನ ವಾಹನ ಹಾಗೂ ಬೈಕ್ ನಡುವೆ ಸಂಭವಿಸಿದ ಭೀಕರ ಅಪಘಾತದಲ್ಲಿ ಇಬ್ಬರು ವೈದ್ಯಕೀಯ ವಿದ್ಯಾರ್ಥಿಗಳು ಸಾವನ್ನಪ್ಪಿದ್ದಾರೆ. ಶಿವಮೊಗ್ಗದ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ