ಬೆಂಗಳೂರು: ತಮಿಳಿನ ಖ್ಯಾತ ನಟ ಸೂರ್ಯ ( Tamil Actor Surya ), ಇಂದು ನಟ ಪುನೀತ್ ರಾಜ್ ಕುಮಾರ್ ( Puneet Rajkumar ) ಸಮಾಧಿ ಸ್ಥಳ ಕಂಠೀರವ ಸ್ಟುಡಿಯೋಗೆ ಭೇಟಿ ನೀಡಿದರು. ರಾಜಕುಮಾರನನ್ನು ನೆನೆದು ಸಮಾಧಿ ಬಳಿಯಲ್ಲಿ ಕಣ್ಣೀರಿಟ್ಟರು.
ನಟ ಪುನೀತ್ ರಾಜ್ ಕುಮಾರ್ ನಮ್ಮನ್ನು ಅಗಲಿ ಇಂದಿಗೆ ಎಂಟು ದಿನಗಳಾಗುತ್ತಿವೆ. ಅಪ್ಪು ನಮ್ಮನ್ನು ಅಗಲಿದ್ದರೂ, ಅವರ ಅಭಿಮಾನಿಗಳ ಹೃದಯದಲ್ಲಿ ಜೀವಂತವಾಗಿದ್ದಾರೆ. ಇಂತಹ ನಟ ಪುನೀತ್ ರಾಜ್ ಕುಮಾರ್ ಸಮಾಧಿ ಸ್ಥಳ ಕಂಠೀರವ ಸ್ಟುಡಿಯೋಗೆ ತಮಿಳು ನಟ ಸೂರ್ಯ ಭೇಟಿ ನೀಡಿ, ಸಮಾಧಿ ದರ್ಶನ ಪಡೆದರು.
ಈ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದಂತ ಅವರು, ಪುನೀತ್ ಅಗಲಿಕೆ ನೋವನ್ನು ಸಹಿಸೋದಕ್ಕೆ ಆಗ್ತಾ ಇಲ್ಲ. ಅಣ್ಣಾವ್ರ ಕುಟುಂಬದೊಂದಿಗೆ ನಮ್ಮ ಒಡನಾಟವಿತ್ತು. ಅಪ್ಪು ಅಗಲಿಕೆ ನೋವಿನಿಂದ ನಮ್ಮ ಕುಟುಂಬ ಇನ್ನೂ ಹೊರಬಂದಿಲ್ಲ. ಸದಾ ನಗುನಗುತ್ತಲೇ ಇದ್ದಂತ ಅಪ್ಪು ಮುಖ ರಾಚಿ ಕಟ್ಟಿದಂತೆ ಇದೆ ಎಂದು ಕಣ್ಣೀರಿಟ್ಟರು