Breaking News

ಕನ್ನಡ ಚಿತ್ರರಂಗದ ಕಲಾವಿದರಿಗೆ ಶಾಪವಾಯಿತೇ ನಂಬರ್ 17..?

Spread the love

ಬೆಂಗಳೂರು,ಅ.30- ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರ ನಿಧನದಿಂದ ಗಂಧದ ಗುಡಿ ಖಾಲಿ ಖಾಲಿಯಾಗಿದೆ ಎಂದೆನಿಸುತ್ತದೆ. ಈ ಮಾತು ಅಕ್ಷರಶಃ ಸತ್ಯ. ಚಿಕ್ಕ ವಯಸ್ಸಿನಿಂದಲೂ ಬಣ್ಣದ ಲೋಕದೊಂದಿಗೆ ಬೆಳೆದು ಬಂದ ಅಪ್ಪು ಇಂದು ಕಲಾರಂಗವನ್ನು ಅಗಲಿರುವುದು ಅಭಿಮಾನಿಗಳನ್ನು ಮಾತ್ರವಲ್ಲ ಇಡೀ ಭಾರತೀಯ ಚಿತ್ರರಂಗವನ್ನೇ ದುಃಖದ ಮಡುವಿಗೆ ನೂಕಿದೆ.ಪುನೀತ್ ರಾಜಕುಮಾರ್‍ಅವರು ಜನ್ಮ ದಿನಾಂಕಕ್ಕೂ ಕನ್ನಡ ಚಿತ್ರರಂಗದಲ್ಲಿ ಆಗಸದೆತ್ತರಕ್ಕೆ ಬೆಳೆಯಬೇಕೆಂಬ ಕನಸು ಹೊತ್ತಿದ್ದ ಚಿರಂಜೀವಿ ಸರ್ಜಾ ಗೂ ಸಂಚಾರಿ ವಿಜಯ್ ಅವರ ಜನ್ಮ ದಿನಾಂಕು ನಂಟಿದೆ. ಏಕೆಂದರೆ ಈ ಮೂವರು ನಟರು ಜನಿಸಿದ್ದು ಕೂಡ 17 ನೆ ತಾರೀಖಿನಂದೇ.ಆಂಜನೇಯನ ಪರಮ ಭಕ್ತನಾಗಿದ್ದ ಚಿರಂಜೀವಿ ಸಜರ್ ವಾಯುಪುತ್ರ ಚಿತ್ರದ ಮೂಲಕ ಬೆಳ್ಳಿತೆರೆಗೆ ಪಾದಾರ್ಪಣೆ ಮಾಡಿ ನಂತರ ಚಿರು, ಗಂಡೆದೆ, ರಾಮಲೀಲಾ ಮುಂತಾದ ಚಿತ್ರಗಳಲ್ಲಿ ನಟಿಸಿ ಅಭಿಮಾನಿಗಳ ನೆಚ್ಚಿನ ತಾರೆಯಾಗಿದ್ದ ಅವರು ಜನಿಸಿದ್ದು 17 ಅಕ್ಟೋಬರ್ 1984ರಲ್ಲಿ.

ಪುನೀತ್ ರಾಜ್ ಕುಮಾರ್ ರಂತೆ ತಮ್ಮ ನಟನೆಗೆ ರಾಷ್ಟ್ರ ಹಾಗೂ ರಾಜ್ಯ ಪ್ರಶಸ್ತಿ ಪಡೆದಿದ್ದ ಸಂಚಾರಿ ವಿಜಯ್ ಅವರು ಜನಿಸಿದ್ದು ಕೂಡ 17 ಜುಲೈ 1983 ರಂದು. ರಂಗಪ್ಪ ಹೋಗ್ಬುಟ್ಟ ಎಂಬ ಸಿನಿಮಾದ ಮೂಲಕ ಚಿತ್ರರಂಗಕ್ಕೆ ಬಂದ ವಿಜಯ್ ನಾನುಅವನಲ್ಲ ಅವಳು ಎಂಬ ಚಿತ್ರಕ್ಕೆ ರಾಷ್ಟ್ರ ಹಾಗೂ ರಾಜ್ಯ ಪ್ರಶಸ್ತಿ ಪಡೆದುಕೊಂಡಿದ್ದರು.

ಚಿತ್ರರಂಗದಲ್ಲಿ ಆಗಸದೆತ್ತರಕ್ಕೆ ಏರುತ್ತಿರುವಾಗಲೇ 15 ಜೂನ್ 2021 ರಂದು ಔಷ ತರಲು ಹೋಗುತ್ತಿದ್ದಾಗ ನಡೆದ ಬೈಕ್ ಅಪಘಾತದಲ್ಲಿ ಸಂಚಾರಿ ವಿಜಯ್ ರ ಮೆದುಳು ನಿಷ್ಕ್ರಿಯಗೊಂಡಿದ್ದರಿಂದ ಇಹಲೋಕ ತ್ಯಜಿಸುವ ಮುನ್ನ ತಮ್ಮ ಕಣ್ಣು ಸೇರಿದಂತೆ ದೇಹದ ಭಾಗಗಳನ್ನು ದಾನ ಮಾಡಿ ಸಾರ್ಥಕತೆ ಮೆರೆದಿದ್ದರು.


Spread the love

About Laxminews 24x7

Check Also

ಕ್ಯಾಂಟರ್-ಬೈಕ್ ಡಿಕ್ಕಿ: ಧಾರವಾಡ ಮೂಲದ ಯುವಕನ ದುರ್ಮರಣ

Spread the love ಕ್ಯಾಂಟರ್-ಬೈಕ್ ಡಿಕ್ಕಿ: ಧಾರವಾಡ ಮೂಲದ ಯುವಕನ ದುರ್ಮರಣ ಜಾಂಬೋಟಿ-ಚೋರ್ಲಾ ರಸ್ತೆಯ ಹಬ್ಬನಹಟ್ಟಿ ಕ್ರಾಸ್ ಬಳಿ ಇರುವ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ