Breaking News

ಅಪ್ಪು ಅಂತ್ಯಸಂಸ್ಕಾರ ರಾಜ್ ಸಮಾಧಿ ಪಕ್ಕದಲ್ಲೇ

Spread the love

ಪವರ್ ಸ್ಟಾರ್ ಪುನೀತ್ ರಾಜಕುಮಾರ ಅವರ ಅಂತ್ಯಕ್ರಿಯೆಯನ್ನು ಕಂಠೀರವ ಸ್ಟುಡಿಯೋ ಆವರಣದಲ್ಲಿರುವ ಡಾ||ರಾಜ್‌ಕುಮಾರ್ ಪ್ರತಿಷ್ಠಾನದಲ್ಲಿನ ಡಾ|| ರಾಜ್‌ಕುಮಾರ್ ಸಮಾಧಿ ಸಮೀಪ ನೆರವೇರಿಸಲು ಸರಕಾರಿ ಒಪ್ಪಿಗೆ ನೀಡಿದೆ.

 ಕನ್ನಡ ಚಿತ್ರರಂಗದ ನಾಯಕನಟ  ಪುನೀತ್ ರಾಜ್‌ಕುಮಾರ್  ಶುಕ್ರವಾರ ಅಪರಾಹ್ನ ನಿಧನರಾಗಿದ್ದು, ಅವರ ಅಂತ್ಯ ಸಂಸ್ಕಾರವನ್ನು ಸಕಲ ಸರ್ಕಾರಿ ಗೌರವಗಳೊಂದಿಗೆ ಕಂಠೀರವ ಸ್ಟುಡಿಯೋ ಆವರಣದಲ್ಲಿರುವ ಡಾ||ರಾಜ್‌ಕುಮಾರ್ ಪ್ರತಿಷ್ಠಾನದಲ್ಲಿನ ಡಾ|| ರಾಜ್‌ಕುಮಾರ್ ಸಮಾಧಿ ಸಮೀಪ ನೆರವೇರಿಸಲು ಅಗತ್ಯ ಕ್ರಮ ಕೈಗೊಳ್ಳುವಂತೆ ಮುಖ್ಯಮಂತ್ರಿಯವರು ಸೂಚಿಸಿರುತ್ತಾರೆ. ಆದ ಕಾರಣ, ಡಾ|| ರಾಜ್‌ಕುಮಾರ್ ಪ್ರತಿಷ್ಠಾನದ ಸ್ವಾಮ್ಯದಲ್ಲಿರುವ ಜಮೀನಿನಲ್ಲಿ ಶ್ರೀ ಪುನೀತ್ ರಾಜ್‌ಕುಮಾರ್ ರವರ ಅಂತ್ಯ ಸಂಸ್ಕಾರವನ್ನು ನೇರವೇರಿಸಲು ಅನುಕೂಲವಾಗುವಂತೆ ಅನುಮತಿ ನೀಡಿ ಸರ್ಕಾರಿ ಆದೇಶ ಹೊರಡಿಸಲು ಕೋರಿರುತ್ತಾರೆ.
ಈ ವಿಷಯವನ್ನು  ಮುಖ್ಯಮಂತ್ರಿಯವರೊಂದಿಗೆ ಚರ್ಚಿಸಿ, ಸಹಮತಿ ಪಡೆಯಲಾಗಿದೆ. ಡಾ|| ರಾಜ್‌ಕುಮಾರ್ ಪ್ರತಿಷ್ಠಾನದ ಸ್ವಾಮ್ಯದಲ್ಲಿರುವ ಜಮೀನಿನಲ್ಲಿ ಶ್ರೀ ಪುನೀತ್ ರಾಜ್‌ಕುಮಾರ್ ರವರ ಅಂತ್ಯ ಸಂಸ್ಕಾರವನ್ನು ನೇರವೇರಿಸಲು ಅನುಕೂಲವಾಗುವಂತೆ ಅನುಮತಿ ನೀಡಿದೆ ಎಂದು ವಾರ್ತಾ ಮತ್ತು ಸಂಪರ್ಕ ಇಲಾಖೆ ಪ್ರಧಾನ ಕಾರ್ಯದರ್ಶಿಗಳೂ, ಮುಖ್ಯಮಂತ್ರಿಗಳ ಪ್ರಧಾನ ಕಾರ್ಯದರ್ಶಿಗಳೂ ಆಗಿರುವ ಎನ್. ಮಂಜುನಾಥ ಪ್ರಸಾದ ಆದೇಶ ಹೊರಡಿಸಿದ್ದಾರೆ.
ಭಾನುವಾರ ಅಂತ್ಯಸಂಸ್ಕಾರ ನಡೆಯಲಿದೆ. ಶನಿವಾರ ಕಂಠೀರವ ಕ್ರೀಡಾಂಗಣದಲ್ಲೇ ಸಾರ್ವಜನಿಕ ದರ್ಶನ ಮುಂದುವರಿಯಲಿದೆ.

Spread the love

About Laxminews 24x7

Check Also

ಜನರಲ್ಲಿ ವೈಚಾರಿಕತೆ, ವೈಜ್ಞಾನಿಕತೆ ಬೆಳೆಯದಿದ್ದರೆ, ಕೇವಲ ಮೌಢ್ಯ ನಿಷೇಧ ಕಾನೂನಿನ ಮೂಲಕ ನಿರೀಕ್ಷಿತ ಬದಲಾವಣೆ ಸಾಧ್ಯವಿಲ್ಲ ಎಂದ ಸಿಎಂ

Spread the loveಬೆಂಗಳೂರು: ”ದ್ವಿಭಾಷಾ ಸೂತ್ರ ನನ್ನ ಅಭಿಪ್ರಾಯವಾಗಿದೆ. ಅದನ್ನು ಸರ್ಕಾರದ ಅಭಿಪ್ರಾಯ ಮಾಡುವ ದಿಕ್ಕಿನಲ್ಲಿ ಪ್ರಯತ್ನಿಸುತ್ತೇನೆ” ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ