Breaking News

ಕುಮಾರಸ್ವಾಮಿ ಬ್ರದರ್, ಬ್ರದರ್ ಅಂತಾನೇ ಕತ್ತು ಕೊಯ್ಯುತ್ತಾರೆ, ನಮ್ಮ ನಾಯಕ ಸಿದ್ಧರಾಮಯ್ಯ ಹುಲಿ ಇದ್ದಂಗೆ – ಶಾಸಕ ಜಮೀರ್ ಅಹ್ಮಾದ್ ಕಿಡಿ

Spread the love

ಕಲಬುರ್ಗಿ: ಕುಮಾರಸ್ವಾಮಿ ( HD Kumaraswamy ) ಬ್ರದರ್, ಬ್ರದರ್ ಅಂತಾನೇ ಕತ್ತು ಕೊಯ್ಯುತ್ತಾರೆ. ಕುಮಾರಸ್ವಾಮಿ ಯಾವತ್ತೂ ಯಾವುದೇ ಲಾಭ ಇಲ್ಲದೇ ಯಾವುದೇ ಕೆಲಸವನ್ನು ಮಾಡೋದಿಲ್ಲ. ಕುಮಾರಸ್ವಾಮಿ ಹಣಧಾಹಕ್ಕಾಗಿ ಅಲ್ಪಸಂಖ್ಯಾತರನ್ನು ಬಲಿಕೊಡುತ್ತಿದ್ದಾರೆ. ಬಸವಕಲ್ಯಾಣದಲ್ಲಿ ಅಲ್ಪಸಂಖ್ಯಾತ ಅಭ್ಯರ್ಥಿಗೆ ಟಿಕೆಟ್ ಕೊಟ್ಟಿದ್ದೆ 10 ಕೋಟಿ ಹಣ ಪಡೆದು ಎಂಬುದಾಗಿ ಶಾಸಕ ಜಮೀರ್ ಅಹ್ಮದ್ ಖಾನ್ ( MLA Zameer Ahmed ) ಹೊಸ ಬಾಂಬ್ ಸಿಡಿಸಿದ್ದಾರೆ.

ಈ ಕುರಿತಂತೆ ಸಿಂದಗಿ ಪಟ್ಟಣದಲ್ಲಿ ಇಂದು ಸುದ್ದಿಗಾರರೊಂದಿಗೆ ಮಾತನಾಡಿದಂತ ಅವರು, ಕುಮಾರಸ್ವಾಮಿ ಯಾರನ್ನೂ ಬೆಳೆಯೋದಕ್ಕೆ ಬಿಡೋದಿಲ್ಲ. ಬೆಳೆಯೋದನ್ನು ಸಹಿಸೋದೂ ಇಲ್ಲ. ಅಲ್ಪಸಂಖ್ಯಾತರೇಗೆ ಒಕ್ಕಲಿಗರನ್ನು ಕೂಡ ಬಳೆಯೋದಕ್ಕೆ ಸಹಿಸೋದಿಲ್ಲ. ಉಪ ಚುನಾವಣೆಯಲ್ಲಿ ಜೆಡಿಎಸ್ ಪಕ್ಷವು ಬಿಜೆಪಿ ಜೊತೆಗೆ ಮ್ಯಾಚ್ ಪಿಕ್ಸಿಂಗ್ ಮಾಡಿಕೊಂಡಿದೆ ಎಂದು ಆರೋಪಿಸಿದರು.

ನಮ್ಮ ನಾಯಕ ಸಿದ್ಧರಾಮಯಯ್ಯ ಹುಲಿ ಇದ್ದಂಗೆ, ಕುಮಾರಸ್ವಾಮಿ ಬ್ರದರ್, ಬ್ರದರ್ ಅಂತಾನೇ ಕತ್ತು ಕೊಯ್ಯುತ್ತಾರೆ. ಕುಮಾರಸ್ವಾಮಿ ಯಾವತ್ತೂ ಯಾವುದೇ ಲಾಭ ಇಲ್ಲದೇ ಯಾವುದೇ ಕೆಲಸವನ್ನು ಮಾಡೋದಿಲ್ಲ. ಕುಮಾರಸ್ವಾಮಿ ಹಣಧಾಹಕ್ಕಾಗಿ ಅಲ್ಪಸಂಖ್ಯಾತರನ್ನು ಬಲಿಕೊಡುತ್ತಿದ್ದಾರೆ. ಬಸವಕಲ್ಯಾಣದಲ್ಲಿ ಅಲ್ಪಸಂಖ್ಯಾತ ಅಭ್ಯರ್ಥಿಗೆ ಟಿಕೆಟ್ ಕೊಟ್ಟಿದ್ದೆ 10 ಕೋಟಿ ಹಣ ಪಡೆದು ಎಂಬುದಾಗಿ ಸ್ಪೋಟಕ ಬಾಂಬ್ ಸಿಡಿಸಿದರು.


Spread the love

About Laxminews 24x7

Check Also

ಸಕ್ಕರೆ ಕಾರ್ಖಾನೆಯ ಕ್ರಷರ್ ಬೆಲ್ಟ್ ಗೆ ಸಿಲುಕಿ ಕಾರ್ಮಿಕನೊಬ್ಬ ಸಾವ

Spread the love ಬೆಳಗಾವಿ: ಸಕ್ಕರೆ ಕಾರ್ಖಾನೆಯ ಕ್ರಷರ್ ಬೆಲ್ಟ್ ಗೆ ಸಿಲುಕಿ ಕಾರ್ಮಿಕನೊಬ್ಬ ಸಾವನ್ನಪ್ಪಿರುವ ಘಟನೆ ಹುಕ್ಕೇರಿ ತಾಲೂಕಿನ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ