Breaking News

70ನೇ ವಯಸ್ಸಲ್ಲಿ ಮಗುವನ್ನು ಹೆತ್ತಳಾ ಈ ತಾಯಿ! ಮುದ್ದು ಕಂದನ ಕಂಡು ಕುಣಿದುಕುಪ್ಪಳಿಸಿದ ದಂಪತಿ

Spread the love

ಗಾಂಧಿನಗರ (ಗುಜರಾತ್‌): ಕೆಲ ತಿಂಗಳ ಹಿಂದಷ್ಟೇ ಪಂಜಾಬ್‌ನ 70 ವರ್ಷದ ಆಸುಪಾಸಿನ ಮಹಿಳೆಯೊಬ್ಬರು ಮಗುವನ್ನು ಹೆತ್ತು ಭಾರಿ ಸುದ್ದಿಮಾಡಿದ್ದರು. ಇದೀಗ ಅದೇ ವಯಸ್ಸಿನ ಇನ್ನೋರ್ವ ಮಹಿಳೆ ಮೊದಲ ಕಂದನನ್ನು ಪಡೆದಿದ್ದಾರೆ. ಮುದ್ದು ಕಂದನನ್ನು ನೋಡಿ ಈ ದಂಪತಿ ಕುಣಿದು ಕುಪ್ಪಳಿಸಿದ್ದಾರೆ.

ಗುಜರಾತ್‍ನ ಕಛ್‍ನ ಜೀವುಬೆನ್ ವಾಲಾಭಾಯಿ ರಬರಿ ಅವರು ಮಗುವನ್ನು ಹೆತ್ತವರು. ರಾಪರ್ ತಾಲ್ಲೂಕಿನ ಮೋರಾ ಗ್ರಾಮದ ನಿವಾಸಿಯಾಗಿರುವ ಈ ದಂಪತಿಗೆ ಮದುವೆಯಾಗಿ 45ನೇ ವಯಸ್ಸಿಗೆ ಈ ಮಗು ಜನಿಸಿದೆ. ಜೀವುಬೆನ್‌ ಅವರಿಗೆ ತಮ್ಮ ವಯಸ್ಸಿನ ಬಗ್ಗೆ ಸರಿಯಾದ ಆಧಾರವಿಲ್ಲವಂತೆ. ಅದಕ್ಕೆ ಅವರು ಹೇಳುವುದು ಏನೆಂದರೆ, ‘ನಾನು ಸುಮಾರು 65 ರಿಂದ 70 ಬೇಸಿಗೆಕಾಲವನ್ನು ನೋಡಿದ್ದೇನೆ. ವಯಸ್ಸಿನ ಬಗ್ಗೆ ಹೆಚ್ಚಿನ ಆಧಾರವಿಲ್ಲ. ಮಗುವನ್ನು ಪಡೆಯಲು ತುಂಬಾ ಪ್ರಯತ್ನಿಸಿ ಈಗ ಯಶಸ್ವಿಯಾಗಿದ್ದೇವೆ’ ಎಂದಿದ್ದಾರೆ.

‘ಮಗುವಿಗೆ ಜನ್ಮ ನೀಡಲೇಬೇಕು ಎಂದು ದಂಪತಿ ಹೇಳಿಕೊಂಡಾಗ ಮೊದಲು ನಾವು ನಿರಾಕರಿಸಿದೆವು. ಈ ವಯಸ್ಸಿನಲ್ಲಿ ಗರ್ಭಧಾರಣೆ ತುಂಬಾ ಅಪಾಯ ಎಂದೂ ಹೇಳಿದ್ದೆವು. ಆದರೆ ಅವರು ಮಗು ಬೇಕೆಂದು ಪಟ್ಟು ಹಿಡಿದರು. ಅದಕ್ಕೆ ನಾವು ಮಣಿಯಲೇಬೇಕಾಯಿತು ಎಂದಿದ್ದಾರೆ ಸ್ತ್ರೀರೋಗ ತಜ್ಞ ಡಾ. ನರೇಶ್ ಭಾನುಶಾಲಿ. ನಾವು ಮೊದಲು ಔಷಧಿಗಳನ್ನು ನೀಡಿ ಈ ಮೂಲಕ ಋತುಚಕ್ರವನ್ನು ನಿಯಮಿತವಾಗಿ ಆಗುವಂತೆ ಮಾಡಿದ್ದೇವೆ. ಎರಡು ವಾರಗಳ ನಂತರ ಸೋನೋಗ್ರಫಿ ಮಾಡಿದಾಗ ಭ್ರೂಣ ಬೆಳೆಯುತ್ತಿರುವುದು ಕಂಡಿತು. ಮಗುವಿನ ಹೃದಯ ಬಡಿತ ಕೂಡ ಶುರುವಾಯ್ತು. ಮಗುವಿನ ಬೆಳವಣಿಗೆಯಲ್ಲಿ ಯಾವುದೇ ದೋಷ ಕಾಣಲಿಲ್ಲ, ಆದ್ದರಿಂದ ಗರ್ಭಧಾರಣೆಯೊಂದಿಗೆ ಮುಂದುವರೆಸಿದೆವು. ಈಗ ಮಗು ಹಾಗೂ ತಾಯಿ ಸಂಪೂರ್ಣವಾಗಿ ಆರೋಗ್ಯವಾಗಿದ್ದಾರೆ. ಇದು ದೊಡ್ಡ ಸವಾಲಿನ ಕೆಲಸವಾಗಿತ್ತು. ನಮ್ಮ ಸರ್ವಿಸ್‌ನಲ್ಲಿ ಇಂಥ ಶಸ್ತ್ರಚಿಕಿತ್ಸೆ ಮಾಡಿದ್ದು ಇದೇ ಮೊದಲು ಎಂದು ಅವರು ತಿಳಿಸಿದರು.


Spread the love

About Laxminews 24x7

Check Also

ಚಾತುರ್ಮಾಸ ಹಿನ್ನೆಲೆ ಜೈನ ಮುನಿ ಶಿಷ್ಯೆಯರ ಪುರಪ್ರವೇಶ ಬೆಳಗಾವಿ ಜೈನ ಸಮಾಜದಿಂದ ಭವ್ಯ ಮೆರವಣಿಗೆಯೊಂದಿಗೆ ಸ್ವಾಗತ

Spread the love ಚಾತುರ್ಮಾಸ ಹಿನ್ನೆಲೆ ಜೈನ ಮುನಿ ಶಿಷ್ಯೆಯರ ಪುರಪ್ರವೇಶ ಬೆಳಗಾವಿ ಜೈನ ಸಮಾಜದಿಂದ ಭವ್ಯ ಮೆರವಣಿಗೆಯೊಂದಿಗೆ ಸ್ವಾಗತ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ