ಬೆಳಗಾವಿ: ಮೈತ್ರಿ ಸರ್ಕಾರವನ್ನು ಅಪವಿತ್ರ ಮಾಡಿದ್ದು ಕಾಂಗ್ರೆಸ್ ಎಂದು ಸಿಎಂ ಬಸವರಾಜ ಬೊಮ್ಮಾಯಿ ತಿರುಗೇಟು ನೀಡಿದರು.
ಸಿಂದಗಿ ಉಪಚುನಾವಣೆ ಆಲಮೇಲ ಗ್ರಾಮದ ಸಮಾವೇಶದಲ್ಲಿ ಭಾಷಣ ಮಾಡಿದ ಸಿಎಂ, ಕಾಂಗ್ರೆಸ್ ಸರ್ಕಾರದ ಭಾಗ್ಯ ಯಾರ ಮನೆಗೂ ಸಹ ಬರಲಿಲ್ಲ. ಕಾಂಗ್ರೆಸ್ ಅವರು ಬಂದಿದ್ದೇ ನಮಗೆ ದೌರ್ಭಾಗ್ಯ. ಕಾಂಗ್ರೆಸ್ ಅಧಿಕಾರ ಬಿಟ್ಟು ಇರಲ್ಲ. ಅಧಿಕಾರ ಇದ್ದಾಗ ಕಾಂಗ್ರೆಸ್ ಕಬ್ಬಿನಂತೆ ಇರ್ತಾರೆ, ಅಧಿಕಾರ ಇಲ್ಲದಿದ್ದಾಗ ಹತ್ತಿಯಂತೆ ಇರ್ತಾರೆ. ಮೈತ್ರಿ ಸರ್ಕಾರವನ್ನು ಅಪವಿತ್ರ ಮಾಡಿದವರು ಕಾಂಗ್ರೆಸ್ ನವರು ಎಂದು ಕಿಡಿಕಾರಿದರು.
ಮೈತ್ರಿ ಸರ್ಕಾರ ಜನರ ಸರ್ಕಾರ ಅಲ್ಲ, ಕೆಲವರು ಅಲ್ಲಿಂದ ಬಂದು ಬಿಜೆಪಿ ಸೇರಿದ್ದರು. ಕಾಂಗ್ರೆಸ್ ಬಹಳ ತ್ಯಾಗ ಮಾಡಿದೆ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಹೇಳ್ತಾರೆ. ಹೌದು. ಕಾಂಗ್ರೆಸ್ ಬಹಳ ತ್ಯಾಗ ಮಾಡಿದೆ, ಆದರೆ ಸುಭಾಷ್ ಚಂದ್ರ ಬೋಸ್, ಲೋಕಮಾನ್ ತಿಲಕ್, ಭಗತ್‍ಸಿಂಗ್, ಚಂದ್ರಶೇಖರ್ ಆಜಾದ್, ವೀರಸಾವರ್ಕರ್ ಇವರೆಲ್ಲ ಏನು ಕಾಂಗ್ರೆಸ್ಸಿನವರಾ ಎಂದು ಪ್ರಶ್ನಿಸಿದರು.