Breaking News

ವಿವಾಹಿತ ಅಕ್ಕನ ಜೊತೆ ಡಿಂಗ್​ಡಾಂಗ್.. ಎಗ್​ ರೈಸ್ ತಿನ್ನಿಸಿ ಖಲ್ಲಾಸ್

Spread the love

ಬೆಂಗಳೂರು: ವ್ಯಕ್ತಿಯೊರ್ವನನ್ನು ಕೊಲೆ ಮಾಡಿ ಮೃತದೇಹವನ್ನು ಪೊಲಿಸ್​ ಠಾಣೆಗೆ ತಂದ ಪ್ರಕರಣಕ್ಕೆ ಸಂಬಂಧಿಸಿದಂತೆ ಹೆಚ್ಚಿನ ಮಾಹಿತಿ ಲಭ್ಯವಾಗಿದ್ದು, ತನ್ನ ಅಕ್ಕ ಅಪರಿಚತರೊಡನೆ ಸಂಬಂಧ ಹೊಂದಿದ್ದಕ್ಕಾಗಿ ಕೆರಳಿದ ತಮ್ಮ ವ್ಯಕ್ತಿಯನ್ನು ಬರ್ಬರವಾಗಿ ಕೊಂದಿದ್ದಾನೆ ಎಂಬ ಆರೋಪ ಕೇಳಿ ಬಂದಿದೆ.

ಎಗ್​ರೈಸ್​ ತಿನ್ನಿಸಿ ಪ್ರಾಣ ತೆಗೆದ ಹಂತಕರು..!

ಆರೋಪಿಯ ಅಕ್ಕ ಮೃತ ಭಾಸ್ಕರ್​ ನ ಜೊತೆ ಬೇರೆ ಮನೆ ಮಾಡಲು ಅಣಿಯಾಗುವ ಸುದ್ದಿ ಕೇಳಿ ಕೆರಳಿದ್ದ ಆರೋಪಿ ಮುನಿರಾಜು ಕೆಲ ಸಹಚರರೊಂದಿಗೆ ಅಕ್ಕನ ಮನೆಗೆ ಬಂದು ಗಲಾಟೆ ಮಾಡಿದ್ದಾನೆ. ಈ ವೇಳೆ ಮುನಿರಾಜು ಌಂಡ್ ಗ್ಯಾಂಗ್ ಭಾಸ್ಕರ್ ನನ್ನು ಕೇಬೆಹಳ್ಳಿ ನಿರ್ಜನ ಪ್ರದೇಶಕ್ಕೆ ಕರೆದೊಯ್ದ ಅಲ್ಲಿ ಸತತ 2 ಗಂಟೆಗಳ ಕಾಲ ಹಲ್ಲೆ ಮಾಡಿದ್ದರಂತೆ. ಆಗ ಮೃತ ಭಾಸ್ಕರ್​ ಹೊಟ್ಟೆ ಹಸಿವು ಎಂದಾಗ ಎಗ್​ರೈಸ್ ತಂದು ತಿನ್ನಿಸಿದ್ದಾರಂತೆ. ಮೃತ ಭಾಸ್ಕರ್​ ಎಗ್​ರೈಸ್ ತಿಂದು ಮುಗಿಸುತ್ತಿದ್ದಂತೆ ಮತ್ತೆ ಹಲ್ಲೆ ಮಾಡಿದ್ದಾರೆ.

 

 

ಗಂಭೀರ ಹಲ್ಲೆಯಿಂದ ನಲುಗಿದ್ದ ಭಾಸ್ಕರ್​ ಕೆಳಗೆ ಬಿದ್ದಿದ್ದಾನೆ. ಅಷ್ಟರಲ್ಲೇ ಭಾಸ್ಕರ್ ಪ್ರಾಣಪಕ್ಷಿ ಹಾರಿ ಹೋಗಿದೆ. ನಂತರ ಆರೋಪಿ ತನ್ನ ತಾಯಿಗೆ ಕರೆ ಮಾಡಿ ಮಾಹಿತಿ ತಿಳಿಸಿದ್ದಾನಂತೆ. ಈ ವೇಳೆ ದಿಕ್ಕು ತೋಚದೆ ಮೃತದೇಹವನ್ನು ಆಟೋದಲ್ಲಿ ಹೇರಿಕೊಂಡು ಪೊಲೀಸ್​ ಠಾಣೆಗೆ ಆಗಮಿಸಿದ್ದಾರೆ ಎನ್ನಲಾಗಿದೆ.

ಅನ್ನಪೂರ್ಣೇಶ್ವರಿ ನಗರ ಠಾಣೆ ಬಳಿ ಆಟೋದಲ್ಲಿ ಮೃತದೇಹ ತಂದ ಹಂತಕರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಕೊಲೆಯಾಗಿರೋದನ್ನು ದೃಢಪಡಿಸಿಕೊಂಡ ಪೊಲೀಸರು ಆರೋಪಿಗಳಾದ ಮುನಿರಾಜು, ಐರನ್ ಅಂಗಡಿ ಮಾರುತಿ, ಕ್ಯಾಬ್ ಡ್ರೈವರ್ ನಾಗೇಶ್ ಎಂಬುವವರನ್ನು ಬಂಧಿಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಇನ್ನು ಪ್ರಕರಣ ಕುರಿತು ಡಿಸಿಪಿ ಸಂದೇಶ್​ ಪಾಟೀಲ್​ ಮಾತನಾಡಿದ್ದು ಮೃತ ವ್ಯಕ್ತಿ ಮತ್ತು ಆರೋಪಿಯ ಅಕ್ಕ ಆಟೋದಲ್ಲಿ ಹೋಗುವಾಗ ಆಟೋ ಅಡ್ಡಗಟ್ಟಿ ನಿರ್ಜನ ಪ್ರದೇಶಕ್ಕೆ ಮೃತ ವ್ಯಕ್ತಿಯನ್ನ ಕರೆದೊಯ್ದು ಹಸಿ ಕಟ್ಟಿಗೆಗಳಿಂದ ಹಲ್ಲೆ ಮಾಡಿ ಕೊಂದಿದ್ದಾರೆ. ವ್ಯಕ್ತಿ ಉಸಿರು ಚೆಲ್ಲಿದ ಬಳಿಕ ಮೃತ ದೇಹವನ್ನು ಪೊಲೀಸ್​ ಠಾಣೆಗೆ ತಂದು ಶರಣಾಗಿದ್ದಾರೆ ಎಂದು ಮಾಹಿತಿ ನೀಡಿದ್ದಾರೆ.


Spread the love

About Laxminews 24x7

Check Also

ಬೈಕ್ – ಹಾಲಿನ ವಾಹನ ನಡುವೆ ಡಿಕ್ಕಿ; ಇಬ್ಬರು ವೈದ್ಯಕೀಯ ವಿದ್ಯಾರ್ಥಿಗಳು ಸಾವು

Spread the loveಶಿವಮೊಗ್ಗ: ಹಾಲಿನ ವಾಹನ ಹಾಗೂ ಬೈಕ್ ನಡುವೆ ಸಂಭವಿಸಿದ ಭೀಕರ ಅಪಘಾತದಲ್ಲಿ ಇಬ್ಬರು ವೈದ್ಯಕೀಯ ವಿದ್ಯಾರ್ಥಿಗಳು ಸಾವನ್ನಪ್ಪಿದ್ದಾರೆ. ಶಿವಮೊಗ್ಗದ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ