ದೇವನಹಳ್ಳಿ: ಎಚ್.ಡಿ.ಕುಮಾರಸ್ವಾಮಿ ಅವರಿಗೆ ಅಲ್ಪಸಂಖ್ಯಾತರ ಬಗ್ಗೆ ಕಾಳಜಿ ಇಲ್ಲ. ಉಪಚುನಾವಣೆಯಲ್ಲಿ ಬಿಜೆಪಿ ಜೊತೆ ಕೈಜೋಡಿಸಿದ್ದು ಅಲ್ಪಸಂಖ್ಯಾತರ ಮತಗಳು ನಿರ್ಣಯವಾಗಿರುವುದರಿಂದ, ಅಲ್ಪಸಂಖ್ಯಾತರ ಬಗ್ಗೆ ಮೃದುಧೋರಣೆ ತೋರಿಸುತ್ತಿದ್ದಾರೆ ಎಂದು ಶಾಸಕ ಜಮೀರ್ ಅಹ್ಮದ್ ಹೇಳಿದರು.
ತಾಲೂಕಿನ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಮಾತನಾಡಿದ ಅವರು, 2004 ರಿಂದ ರಾಜಕೀಯಕ್ಕೆ ಬಂದ ಎಚ್.ಡಿ.ಕುಮಾರಸ್ವಾಮಿ ಅವರು ಮುಸಲ್ಮಾನರಿಗೆ ಏನು ಮಾಡಿದ್ದಾರೆ. ಅಲ್ಪ ಸಂಖ್ಯಾತರಿಗೆ ಸಿದ್ದರಾಮಯ್ಯ ಮಾಡಿದಷ್ಟು ಯಾರು ಮಾಡಲಿಲ್ಲ.
ಜಾಫರ್ ಷರೀಫ್ ಅವರ ಮೊಮ್ಮಗನ ಮೇಲೆ ಅಷ್ಟೊಂದು ಪ್ರೀತಿ ಇದ್ರೆ, ಮಂಡ್ಯದಲ್ಲಿ ಮಗನ ಬದಲಾಗಿ ಜಾಫರ್ ಷರೀಫ್ ಅವರ ಮೊಮ್ಮಗನಿಗೆ ಟಿಕೆಟ್ ಕೊಡಬೇಕಿತ್ತು. ದೇವೆಗೌಡರಿಗೆ ಈಗಲೂ ಅಲ್ಪ ಅಸಂಖ್ಯಾತರ ಬಗ್ಗೆ ಕಾಳಜಿಯಿದೆ, ಆದ್ರೆ ಅದರಲ್ಲಿ ಒಂದು ಪರ್ಸೆಂಟ್ ಸಹ ಕುಮಾರಸ್ವಾಮಿಗೆ ಇಲ್ಲ.
ಪಾರೂಕ್ ಅವರು ಕುಮಾರಸ್ವಾಮಿ ಬಳಿ ಕೇಳಿಕೊಂಡ್ರು ಒಂದು ದಿನ ಆದ್ರು ಸಚಿವರನ್ನ ಮಾಡಿ ಅಂತ ಆದ್ರೆ ಮಾಡಲಿಲ್ಲ ಯಾರು ಮುಸಲ್ಮಾನರ ವಿರೋಧಿ? ಅಲ್ಪಸಂಖ್ಯಾತರಿಗೆ ಸಿದ್ದರಾಮಯ್ಯ ಏನು ಮಾಡಿದ್ದಾರೆ, ಕುಮಾರಸ್ವಾಮಿ ಏನು ಮಾಡಿದ್ದಾರೆ ಎನ್ನುವ ಬಗ್ಗೆ ಬಹಿರಂಗವಾಗಿ ಚರ್ಚೆಗೆ ಬರಲಿ, ಆಗ ಕುಮಾರಸ್ವಾಮಿ ಬಂಡವಾಳ ಗೊತ್ತಾಗುತ್ತೆ.
Laxmi News 24×7