Breaking News

ಕಲ್ಲಿದ್ದಲು ಕೊರತೆಯಿಂದ ಮಹಾರಾಷ್ಟ್ರದ 7 ಸ್ಥಾವರಗಳ 13 ಘಟಕಗಳು ಬಂದ್

Spread the love

ಮುಂಬೈ: ಕಲ್ಲಿದ್ದಲು ಕೊರತೆಯಿಂದ ಮಹಾರಾಷ್ಟ್ರ ರಾಜ್ಯ ವಿದ್ಯುತ್ ವಿತರಣಾ ಕಂಪೆನಿ ನಿಯಮಿತ ಇದಕ್ಕೆ ವಿದ್ಯುತ್ ಪೂರೈಸುವ ಏಳು ಕಲ್ಲಿದ್ದಲು ಸ್ಥಾವರಗಳ 13 ಘಟಕಗಳು ಮುಚ್ಚಿವೆ.

ರಾಜ್ಯದಲ್ಲಿ 3,300 ಮೆವಾ ವಿದ್ಯುತ್ ಕೊರತೆಯಿದೆಯೆನ್ನಲಾಗಿದ್ದು, ರವಿವಾರ ಮುಂಬೈ ನಗರವೊಂದರ ವಿದ್ಯುತ್ ಬೇಡಿಕೆಯೇ 18,000 ಮೆವಾ ಆಗಿದೆ.

ಸದ್ಯ ಕಲ್ಲಿದ್ದಲು ಕೊರತೆಯಿಂದ ಚಂದ್ರಾಪುರ, ನಾಸಿಕ್ ಹಾಗೂ ಭುಸವಲ್ ಇಲ್ಲಿನ ಘಟಕಗಳು ಕಾರ್ಯಾಚರಿಸುತ್ತಿಲ್ಲ. ಇದೊಂದು ರಾಷ್ಟ್ರೀಯ ಸಮಸ್ಯೆಯಾಗಿದೆ, ಆದರೆ ಯಾವುದೇ ವಿದ್ಯುತ್ ಕಡಿತವಿಲ್ಲದೆ ಸಮಸ್ಯೆ ನಿಭಾಯಿಸಲು ತಮ್ಮ ಸಂಸ್ಥೆ ಪ್ರಯತ್ನಿಸುತ್ತಿದೆ ಎಂದು ಮಹಾರಾಷ್ಟ್ರ ವಿದ್ಯುತ್ ವಿತರಣಾ ಕಂಪೆನಿಯ ಆಡಳಿತ ನಿರ್ದೇಶಕ ವಿಜಯ್ ಸಿಂಘಾಲ್ ಹೇಳಿದ್ದಾರೆ.

“ರಾಜ್ಯದಲ್ಲಿ ಕಲ್ಲಿದ್ದಲು ಘಟಕಗಳು 14,000 ಮೆವಾ ವಿದ್ಯುತ್ ಒದಗಿಸುತ್ತಿವೆ. ಈಗಿನ ಕೊರತೆಯಿಂದ ವಿದ್ಯುತ್ ವಿನಿಮಯ ಕೇಂದ್ರದಿಂದ ತಲಾ ಯುನಿಟ್‍ಗೆ ರೂ 20ರಷ್ಟು ಹೆಚ್ಚಿನ ದರದಲ್ಲಿ ಖರೀದಿಸುವಂತಾಗಿದೆ” ಎಂದು ಸಿಂಘಾಲ್ ಹೇಳಿದ್ದಾರೆ.

ಮಹಾರಾಷ್ಟ್ರದ ಕಲ್ಲಿದ್ದಲು ಸಂಗ್ರಹಣೆ ಕೇವಲ ಒಂದೂವರೆ ದಿನಗಳಿಗಷ್ಟೇ ಸಾಕು, ಕಲ್ಲಿದ್ದಲು ಪೂರೈಸುವಂತೆ ಕೇಂದ್ರಕ್ಕೆ ಸತತ ಮನವಿ ಸಲ್ಲಿಸುತ್ತಿದ್ದೇವೆ. ನಮಗೆ ಪೂರೈಸಲಾಗುವ ಕಲ್ಲಿದ್ದಲು ಸಾಕಾಗುತ್ತಿಲ್ಲ, ನಮಗೆ ಲೋಡ್ ಶೆಡ್ಡಿಂಗ್ ಅನಿವಾರ್ಯತೆ ಎದುರಾಗಬಹುದು,” ಎಂದು ರಾಜ್ಯದ ಇಂಧನ ಕಾರ್ಯದರ್ಶಿ ದಿನೇಶ್ ವಾಗ್ಮೋರೆ ಹೇಳಿದ್ದಾರೆ.


Spread the love

About Laxminews 24x7

Check Also

ಕ್ಯಾಂಟರ್-ಬೈಕ್ ಡಿಕ್ಕಿ: ಧಾರವಾಡ ಮೂಲದ ಯುವಕನ ದುರ್ಮರಣ

Spread the love ಕ್ಯಾಂಟರ್-ಬೈಕ್ ಡಿಕ್ಕಿ: ಧಾರವಾಡ ಮೂಲದ ಯುವಕನ ದುರ್ಮರಣ ಜಾಂಬೋಟಿ-ಚೋರ್ಲಾ ರಸ್ತೆಯ ಹಬ್ಬನಹಟ್ಟಿ ಕ್ರಾಸ್ ಬಳಿ ಇರುವ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ