ಬೆಳಗಾವಿ: ಬೆಂಗಳೂರು ಸೇರಿ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ದಾಳಿ ನಡೆಸುತ್ತಿರುವ ಐಟಿ ಅಧಿಕಾರಿಗಳು ಇಂದು ಕೂಡ ಹಲವು ಭಾಗಗಳಲ್ಲಿ ದಾಳಿಯನ್ನ ಮುಂದುವರಿಸಿದ್ದಾರೆ. ಅದರಂತೆ ಇಂದು ಕೂಡ ದಾಳಿ ಕಂಟಿನ್ಯೂ ಆಗಿದ್ದು ಜಿಲ್ಲೆಯ ಉದ್ಯಮಿ ಹಾಗೂ ನೀರಾವರಿ ಇಲಾಖೆ ಗುತ್ತಿಗೆದಾರ ಜಯಶೀಲ ಶೆಟ್ಟಿ ಮನೆ ಮೇಲೆ ಐಟಿ ಅಧಿಕಾರಿಗಳು ದಾಳಿ ನಡೆಸಿ ಶಾಕ್ ನೀಡಿದ್ದಾರೆ.
ಜಿಲ್ಲೆಯ ಘಟಪ್ರಭಾದಲ್ಲಿರುವ ಉದ್ಯಮಿ ಜಯಶೀಲ ಶೆಟ್ಟಿ ಮನೆ ಮೇಲೆ 16 ಜನ ಆದಾಯ ತೆರಿಗೆ ಅಧಿಕಾರಿಗಳ ತಂಡ ಇಂದು ಕೂಡ ಉದ್ಯಮಿಗೆ ಸಂಬಂಧಿಸಿದ ವ್ಯವಹಾರ, ಆಸ್ತಿ, ಆದಾಯಕ್ಕೆ ಸಂಬಂಧ ಪಟ್ಟ ದಾಖಲೆ ಪರಿಶೀಲನೆ ನಡೆಸಿದ್ದಾರೆ. ನಿನ್ನೆ ಬೆಳ್ಳಗ್ಗೆಯಿಂದ ಸಂಜೆಯವರೆಗೆ ಪರಿಶೀಲನೆ ನಡೆಸಿರುವ ಅಧಿಕಾರಿಗಳು ಇಂದು ಕೂಡ ತೀವ್ರ ತಪಾಸಣೆ ನಡೆಸಿದ್ದು ಶೋಧಕಾರ್ಯ ಮುಂದುವರೆದಿದೆ.