ರಿಯಾಲಿಟಿ ಶೋ ಮೂಲಕ ಜನರನ್ನು ನಗೆಗಡಲಲ್ಲಿ ತೇಲಿಸುವ ಕಪಿಲ್ ಶರ್ಮಾಗೆ ಇದೀಗ ಸಂಕಷ್ಟ ಎದುರಾಗಿದೆ. ಕಪಿಲ್ ಶರ್ಮಾ ವಿರುದ್ಧ ಎಫ್ಐಆರ್ ದಾಖಲಾಗಿದೆ. ತನ್ನ ರಿಯಾಲಿಟಿ ಶೋನ ಶೂಟ್ ಒಂದರಲ್ಲಿ ಕೋರ್ಟ್ ಸೀನ್ ಶೂಟ್ ಮಾಡುವಾಗ ಮದ್ಯ ಸೇವಿಸಿದ್ದಾರೆ ಎಂದು ಮಧ್ಯಪ್ರದೇಶದಲ್ಲಿ ದೂರು ನೀಡಲಾಗಿದ್ದು ಎಫ್ಐಆರ್ ದಾಖಲಾಗಿದೆ.
ಮಧ್ಯಪ್ರದೇಶದ ವಕೀಲರೊಬ್ಬರು ಸಿಜೆಎಂ ಕೋರ್ಟ್ನಲ್ಲಿ ಈ ಎಫ್ಐಆರ್ ದಾಖಲಿಸಿದ್ದಾರೆ. ಅಕ್ಟೋಬರ್ 1 ರಂದು ಪ್ರಕರಣದ ವಿಚಾರಣೆ ನಡೆಯಲಿದೆ ಎನ್ನಲಾಗಿದೆ. ದೂರು ನೀಡಿರುವ ವಕೀಲರು.. ಕಪಿಲ್ ಶರ್ಮಾ ಶೋನಲ್ಲಿ ಮಹಿಳೆಯರನ್ನೂ ಅವಹೇಳನ ಮಾಡಲಾಗಿದೆ. ಒಂದು ಎಪಿಸೋಡ್ನಲ್ಲಿ ಕೋರ್ಟ್ ಸೀನ್ ಹಾಕಲಾಗಿದ್ದು ಅದರಲ್ಲಿ ನಟರು ಆಲ್ಕೋಹಾಲ್ ಸೇವಿಸಿದ್ದಾರೆ. ಇದು ನ್ಯಾಯಾಂಗ ನಿಂದನೆ. ಹೀಗಾಗಿ ಎಫ್ಐಆರ್ ದಾಖಲಿಸಲು ಒತ್ತಾಯಿಸಿದ್ದೇನೆ. ಇಂಥದ್ದಕ್ಕೆಲ್ಲ ಕಡಿವಾಣ ಹಾಕಬೇಕೆಂದು ಹೇಳಿದ್ದಾರೆ.
Laxmi News 24×7