ನವದೆಹಲಿ: ದೇಶದಾದ್ಯಂತ ಬಾರಿ ಚರ್ಚೆಗೆ ಗ್ರಾಸವಾಗಿದ್ದ ಅಖಿಲ ಭಾರತೀಯ ಅಖಾಡ ಪರಿಷದ್ ಅಧ್ಯಕ್ಷ ನರೇಂದ್ರಗಿರಿ ಅಸಹಜ ಸಾವಿನ ತನಿಖೆಯನ್ನ ಇಂದಿನಿಂದ ಸಿಬಿಐ ಅಧಿಕೃತವಾಗಿ ವಹಿಸಿಕೊಂಡಿದೆ.
ತನಿಖೆ ಹಿನ್ನೆಲೆಯಲ್ಲಿ 6 ಅಧಿಕಾರಿಗಳ ನೇತೃತ್ವದ ತಂಡ ಪ್ರಯಾಗ್ರಾಜ್ ನಗರಕ್ಕೆ ಆಗಮಿಸಿದ್ದು, ಪ್ರಕರಣ ಸಂಬಂಧ ಎಫ್ಐಆರ್ ದಾಖಲಿಸಿಕೊಂಡಿದೆ. ಕಳೆದ ಸೋಮವಾರ ಬಘಮಬರಿ ಗದ್ದಿ ಮಠದಲ್ಲಿರುವ ರೂಮಿನಲ್ಲಿ ನರೇಂದ್ರ ಗಿರಿಯ ಶವ ಪತ್ತೆಯಾಗಿತ್ತು. ನರೇಂದ್ರ ಗಿರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನಲಾಗುತ್ತಿದ್ದು, ಡೆತ್ನೋಟ್ ಕೂಡ ಸಿಕ್ಕಿದೆ.
ಇನ್ನು ಉತ್ತರ ಪ್ರದೇಶದ ಪೊಲೀಸರು ಈಗಾಗಲೇ ಅಸಹಜ ಸಾವು ಪ್ರಕರಣ ಸಂಬಂಧ ಓರ್ವ ಆರೋಪಿ ಆನಂದ್ ಗಿರಿ ಎಂಬಾತನ್ನ ಬಂಧಿಸಿದ್ದಾರೆ. ಇನ್ನು ಈ ಪ್ರಕರಣವನ್ನ ಸಿಎಂ ಯೋಗಿ ಆದಿತ್ಯನಾಥ್ ಗಂಭೀರವಾಗಿ ಪರಿಗಣಿಸಿದ್ದು, ಸೆಪ್ಟೆಂಬರ್ 23 ರಂದು ಸಿಬಿಐ ತನಿಖೆಗೆ ನೀಡಿತ್ತು.
Laxmi News 24×7