Breaking News

ಬೆಳಗಾವಿಯಲ್ಲಿ ಎಂಇಎಸ್‌ನಿಂದ ದಿನಕ್ಕೊಂದು ನಾಟಕ; ಭಾಷಾ ರಾಜಕಾರಣದ ಹೆಸರಲ್ಲಿ ವಿಷಬೀಜ ಬಿತ್ತಲು ಪ್ರಯತ್ನ

Spread the love

ಬೆಳಗಾವಿ: ಜಿಲ್ಲೆಯಲ್ಲಿ ಎಂಇಎಸ್‌ನಿಂದ (Maharashtra Ekikaran Samiti -MES) ದಿನಕ್ಕೊಂದು ವಿಚಾರದಲ್ಲಿ ಗೊಂದಲ ಸೃಷ್ಟಿಯಾಗುತ್ತಿದೆ. ಬೆಳಗಾವಿ ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಹೀನಾಯವಾಗಿ ಸೋತ ಬಳಿಕವೂ ಪದೇಪದೇ ಸಾಮಾಜದ ಸ್ವಾತ್ಯವನ್ನು ಹಾಳು ಮಾಡುವ ಪ್ರಯತ್ನಗಳು ನಡೆಯುತ್ತಿದೆ ಎಂದು ಆರೋಪಗಳು ಕೇಳಿ ಬಂದಿವೆ.

ಭಾಷಾ ರಾಜಕಾರಣದ ಹೆಸರಲ್ಲಿ ವಿಷಬೀಜ ಬಿತ್ತಲು ಪ್ರಯತ್ನ
ಗಣೇಶ ವಿಸರ್ಜನೆ ವೇದಿಕೆ ಮೇಲೆ ಕನ್ನಡ ನಾಮಫಲಕವಷ್ಟೇ ಇದ್ದಿದ್ದಕ್ಕೆ ಎಂಇಎಸ್ ಖ್ಯಾತೆ ತೆಗೆದಿದೆ. ಇಷ್ಟೇ ಅಲ್ಲದೆ ಎಂಇಎಸ್ ಪುಂಡರ ವಿರುದ್ಧ ಕಿಡಿಕಾರಿದ್ದ ಮಹಾನಗರ ಪಾಲಿಕೆ ಅಧಿಕಾರಿಗಳ ವಿರುದ್ಧ ಸಾಮಾಜಿಕ ಜಾಲತಾಣಗಳಲ್ಲಿ ಪೊಸ್ಟ್ ಮಾಡಿ ಮರಾಠಿ ಭಾಷಿಕರ ಪ್ರಚೋದನೆಗೆ ಯತ್ನಿಸಲಾಗಿದೆ ಎಂದು ಕನ್ನಡ ಸಂಘಟನೆಗಳ ಪರ ಮುಖಂಡರು ಆರೋಪಿಸಿದ್ದಾರೆ.

ಮೊನ್ನೆ ರಾತ್ರಿ ಬೆಳಗಾವಿಯಲ್ಲಿ ಗಣೇಶ ಮೂರ್ತಿಗಳ ವಿಸರ್ಜನೆ ಕಾರ್ಯಕ್ರಮ ನಡೆದಿತ್ತು. ಈ ವೇಳೆ ಕಾರ್ಯಕ್ರಮ ನಡೆಯುತ್ತಿದ್ದ ವೇದಿಕೆ ಮೇಲೆ ಕನ್ನಡದ ಬೋರ್ಡ್ ಮಾತ್ರ ಇದ್ದಿದ್ದಕ್ಕೆ ಆವಾಜ್ ಹಾಕಿದ್ದ ಎಂಇಎಸ್ ಪುಂಡರು, ಮಹಾನಗರ ಪಾಲಿಕೆ ಉಪ ಆಯುಕ್ತೆ ಲಕ್ಷ್ಮೀ ನಿಪ್ಪಾಣಿಕರ್‌ಗೆ ಗದರಿದ್ದಾರೆ. ಅಷ್ಟೇ ಅಲ್ಲದೆ ಮರಾಠಿ ಭಾಷಿಕರ ಮೇಲೆ ಮಹಾನಗರ ಪಾಲಿಕೆ ಅಧಿಕಾರಿಗಳು ಧಮ್ಕಿ ಹಾಕಿದ್ದಾರೆಂದು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದಾರೆ.

ಎಂಇಎಸ್ ಪುಂಡರನ್ನು ತರಾಟೆಗೆ ತಗೆದುಕೊಂಡಿದ್ದ ಲಕ್ಷ್ಮೀ ನಿಪ್ಪಾಣಿಕರ್
ಎಂಇಎಸ್ ಅಭ್ಯರ್ಥಿಗಳ ಚುನಾವಣಾ ಪ್ರಚಾರ ನಾಮಫಲಕ ತೆರವುಗೊಳಿಸಿದ್ದಕ್ಕೂ ಕಿಡಿಕಾರಿದ್ದು, ಭಾಷೆಯ ಹೆಸರಿನಲ್ಲಿ ಸಾಮಾಜಿಕ ನೆಮ್ಮದಿ ಹದಗೆಡಿಸುತ್ತಿರುವವರನ್ನು ಲಕ್ಷ್ಮೀ ನಿಪ್ಪಾಣಿಕರ್ ತರಾಟೆಗೆ ತೆಗೆದುಕೊಂಡಿದ್ದಾರೆ.

ವಾರ್ಡ್ ನಂಬರ್ 15ರ ಎಂಇಎಸ್ ಅಭ್ಯರ್ಥಿ ಚುನಾವಣಾ ಪ್ರಚಾರದ ನಾಮಫಲಕ ತೆರವು ವಿಚಾರಕ್ಕೆ ಸಂಬಂಧಪಟ್ಟಂತೆಯೂ ಎಂಇಎಸ್ ಯುವ ಸಮಿತಿ ಫೇಸ್‌ಬುಕ್‌ ಪೇಜ್​ನಲ್ಲಿ ಪೋಸ್ಟ್ ಹಾಕಿದ್ದು, ಅಂದು ಮರಾಠಿ ಬೋರ್ಡ್ ಇಂದು ಮರಾಠಿ ಬೋರ್ಡ್ ತೆರವು ಎಂದು ಹೇಳಿದ್ದಾರೆ. ಹೀಗಾಗಿ ಪದೇಪದೇ ಭಾಷಾ ರಾಜಕಾರಣ ವಿಷಬೀಜ ಬಿತ್ತಿ ಮರಾಠಿಗರನ್ನು ಒಕ್ಕಲೆಬ್ಬಿಸುವ ಎಂಇಎಸ್ ವಿರುದ್ಧ ಕ್ರಮ ತೆಗೆದುಕೊಳ್ಳುವಂತೆ ಕನ್ನಡ ಸಂಘಟನೆಗಳ ಮುಖಂಡರು ಆಗ್ರಹಿಸಿದ್ದಾರೆ.


Spread the love

About Laxminews 24x7

Check Also

ಪರಿಸರ ದಿನಾಚರಣೆ ಮುನ್ನಾ ದಿನ ಅರಣ್ಯ ಪ್ರದೇಶದಲ್ಲಿ ಮಕ್ಕಳ ಸಂಭ್ರಮ ವಿಶ್ವ ಪರಿಸರ ದಿನಾಚರಣೆ ಹಿನ್ನೆಲೆ ಸಸಿ ನೆಟ್ಟ ಮಕ್ಕಳು

Spread the love ಪರಿಸರ ದಿನಾಚರಣೆ ಮುನ್ನಾ ದಿನ ಅರಣ್ಯ ಪ್ರದೇಶದಲ್ಲಿ ಮಕ್ಕಳ ಸಂಭ್ರಮ ವಿಶ್ವ ಪರಿಸರ ದಿನಾಚರಣೆ ಹಿನ್ನೆಲೆ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ