Breaking News

ಕನ್ನಡಿಗರನ್ನು ಕೆಣಕುವ ಮಹಾರಾಷ್ಟ್ರ ಏಕೀಕರಣ ಸಮಿತಿ ಫುಡರಿಗೆ ಭಾನುವಾರ ಮಧ್ಯರಾತ್ರಿ ಮಹಾನಗರ ಪಾಲಿಕೆಯ ಅಧಿಕಾರಿಯೊಬ್ಬರು ಪಾಠ ಕಲಿಸಿದ್ದಾರೆ.

Spread the love

ಬೆಳಗಾವಿ – ಸದಾ ಕಿರಿಕ್ ಮಾಡುತ್ತ ಕನ್ನಡಿಗರನ್ನು ಕೆಣಕುವ ಮಹಾರಾಷ್ಟ್ರ ಏಕೀಕರಣ ಸಮಿತಿ ಫುಡರಿಗೆ ಭಾನುವಾರ ಮಧ್ಯರಾತ್ರಿ ಮಹಾನಗರ ಪಾಲಿಕೆಯ ಅಧಿಕಾರಿಯೊಬ್ಬರು ಪಾಠ ಕಲಿಸಿದ್ದಾರೆ.

ಗಣೇಶ ವಿಸರ್ಜನೆ ಸ್ಥಳದಲ್ಲಿ ಕನ್ನಡದಲ್ಲಿ ಮಾತ್ರ ಬ್ಯಾನರ್ ಹಾಕಿದ್ದರಿಂದ ಎಇಎಸ್ ಫುಂಡರು ಗಲಾಟೆ ಶುರು ಮಾಡಿದರು. ಈ ವೇಳೆ ಅವರನ್ನು ಶಾಂತವಾಗಿಯೇ  ಸಮಾಧಾನಪಡಿಸಲು ಪಾಲಿಕೆಯ ಉಪಾಯುಕ್ತೆ ಲಕ್ಷ್ಮಿ ನಿಪ್ಪಾಣಿಕರ್ (ಸುಳಗೆಕರ್) ಪ್ರಯತ್ನಿಸಿದರು. ಆದರೆ ಇದರಿಂದ ಅವರ ಪುಂಡಾಟಿಕೆ ನಿಲ್ಲುವ ಬದಲು ಮತ್ತಷ್ಟು ಜೋರಾಯಿತು. ಅಧಿಕಾರಿಗೆ ಬೆದರಿಕೆ ಹಾಕುವ ಹಂತಕ್ಕೂ ಹೋದರು.

ಇದರಿಂದಾಗಿ ಕೆಂಡಾಮಂಡಲವಾದ ಲಕ್ಷ್ಮಿ ನಿಪ್ಪಾಣಿಕರ್ ರೌದ್ರಾವತಾರವನ್ನೇ ತಾಳಿದರು. ಯಾರು ಬರುತ್ತೀರೋ ಬನ್ನಿ ನೋಡೇ ಬಿಡುವೆ ಎಂದು ಕೆರಳಿ ಕೆಂಡವಾದರು. ತಮ್ಮತ್ತ ನುಗ್ಗಿ ಬರುತ್ತಿದ್ದ ಗೂಂಡಾಗಳ ಮೇಲೆಯೇ ಏರಿ ಹೋದರು. ಮಹಿಳಾ ಅಧಿಕಾರಿ ಗರಂ ಆಗಿದ್ದನ್ನು ಕಂಡ ಗೂಂಡಾಗಳು ತಂಡಾದರು.

ಅಧಿಕಾರಿಯೊಬ್ಬರು,. ಅದರಲ್ಲೂ ಮಹಿಳಾ ಅಧಿಕಾರಿಯೊಬ್ಬರು ಸದಾ ಕಿರಿಕ್ ಮಾಡುವ ಪುಂಡರಿಗೆ ಸರಿಯಾಗಿಯೇ ಪಾಠ ಕಲಿಸಿದರು.

ಎಸಿಪಿ ನಾರಾಯಣ ಬರಮನಿ ನೇತೃತ್ವದ ಪೊಲೀಸರ ತಂಡ ಎಂಇಎಸ್  ಪುಂಡರನ್ನು ಅಲ್ಲಿಂದ ಹಿಮ್ಮೆಟ್ಟಿದರು.


Spread the love

About Laxminews 24x7

Check Also

ಸಹಾಯವಾಣಿಗೆ ಕರೆ ಮಾಡಿ ತನ್ನ ಬಾಲ್ಯ ವಿವಾಹ ತಡೆದ ಬಾಲಕಿ: ವಿದ್ಯಾಭ್ಯಾಸಕ್ಕೆ ಬೆಳಕಾದ ತಹಶೀಲ್ದಾರ್

Spread the loveವಿಜಯನಗರ: ಬಾಲಕಿಯೊಬ್ಬಳು ಮಕ್ಕಳ ಸಹಾಯವಾಣಿಗೆ ಕರೆ ಮಾಡಿ ತನ್ನ ಬಾಲ್ಯ ವಿವಾಹವನ್ನು ತಾನೇ ತಡೆದ ಘಟನೆ ಜಿಲ್ಲೆಯ ಹಗರಿಬೊಮ್ಮನ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ