Breaking News

ಮಕ್ಕಳಲ್ಲಿ ವೈರಲ್ ಸೋಂಕು: ಸಿಲಿಕಾನ್ ಸಿಟಿ ಆಸ್ಪತ್ರೆಗಳಲ್ಲಿ ಆಕ್ಸಿಜನ್ ಹಾಗೂ ಐಸಿಯೂ ಬೆಡ್ ಭರ್ತಿ

Spread the love

ಬೆಂಗಳೂರು: ಕೊರೊನಾ ಮೂರನೇ ಅಲೆಗೂ ಮುನ್ನವೇ ಸಿಲಿಕಾನ್ ಸಿಟಿಯ ಆಸ್ಪತ್ರೆಗಳಲ್ಲಿ ಆಕ್ಸಿಜನ್ ಹಾಗೂ ಐಸಿಯೂ ಬೆಡ್ಗಳು ಭರ್ತಿಯಾಗಿದ್ದು, ಕಳೆದ ಒಂದು ವಾರದಿಂದ ಮಕ್ಕಳಲ್ಲಿ ವೈರಲ್ ಸೋಂಕು ಕಾಣಿಸಿಕೊಳ್ಳುತ್ತಿದೆ. ಹೀಗಾಗಿ ಸರ್ಕಾರಿ ಆಸ್ಪತ್ರೆಯ ಬೆಡ್ಗಳು ಬಹುತೇಕ ಭರ್ತಿಯಾಗಿದೆ. ಕೆಸಿ ಜನರಲ್, ವಿಕ್ಟೋರಿಯಾ,

ಬೌರಿಂಗ್ ವಾಣಿ ವಿಲಾಸ್ ಸೇರದಂತೆ ಕೆಲ ಖಾಸಗಿ ಆಸ್ಪತ್ರೆಗಳಲ್ಲಿ ಮಕ್ಕಳು ಹೆಚ್ಚಿನ ಸಂಖ್ಯೆಯಲ್ಲಿ ದಾಖಲಾಗುತ್ತಿದ್ದಾರೆ. ಇನ್ನು ಕೆಸಿ ಜನರಲ್ ಆಸ್ಪತ್ರೆಗೆ ನಿತ್ಯ 140-150 ಮಕ್ಕಳು ದಾಖಲಾಗುತ್ತಿದ್ದು, ಮಕ್ಕಳಿಗಾಗಿ 36 ಬೆಡ್ಗಳನ್ನು ಮೀಸಲು ಇಡಲಾಗಿತ್ತು. ಈ ಪೈಕಿ 36 ಬೆಡ್ಗಳು ಸಹ ಭರ್ತಿಯಾಗಿದೆ. ಇನ್ನು ಐಸಿಯು 10 ಬೆಡ್ಗಳಲ್ಲಿ ಆರು ಭರ್ತಿಯಾಗಿದ್ದು, ಶೇಕಡಾ 50 ರಷ್ಟು ಮಕ್ಕಳಿಗೆ ಉಸಿರಾಟದ ಸಮಸ್ಯೆ ಕಂಡುಬಂದಿದೆ ಎಂದು ತಿಳಿದು ಬಂದಿದೆ.


Spread the love

About Laxminews 24x7

Check Also

2ನೇ ವಿಮಾನ ನಿಲ್ದಾಣದ ಕಾರ್ಯಸಾಧ್ಯತಾ ವರದಿಗೆ ಟೆಂಡರ್ ಆಹ್ವಾನ: ಸಚಿವ ಎಂ.ಬಿ.ಪಾಟೀಲ್

Spread the loveಬೆಂಗಳೂರು: ರಾಜಧಾನಿಯ ಸಮೀಪ 2ನೇ ಅಂತರಾಷ್ಟ್ರೀಯ ವಿಮಾನ ನಿಲ್ದಾಣ ನಿರ್ಮಿಸುವ ಸಂಬಂಧ ಸ್ಥಳದ ಅನುಕೂಲ ಮತ್ತು ತಾಂತ್ರಿಕ ಹಾಗೂ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ