ಆನ್ ಲೈನ್ ಶಾಪಿಂಗ್ ಮಾಡುವಾಗ ಒಮ್ಮೊಮ್ಮೆ ಮೋಸಗಳು ಆಗುತ್ತದೆ. ನಾವು ಆರ್ಡರ್ ಮಾಡಿದ್ದೇ ಒಂದು..ಬಂದಿರೋದೇ ಒಂದು ಆಗಿರುತ್ತದೆ. ಆದರೆ ಈ ಸುದ್ದಿ ಕೇಳಿದ್ರೆ ಮಾತ್ರ ನೀವು ಬೆಚ್ಚಿ ಬೀಳ್ತೀರಾ..!
ಹೌದು, ಮಹಿಳೆಯೊಬ್ಬರು ಆರ್ಡರ್ ಮಾಡಿದ ಬರ್ಗರ್ನಲ್ಲಿ ಮನುಷ್ಯನ ಬೆರಳು ಸಿಕ್ಕು ಬೆಚ್ಚಿಬೀಳಿಸಿದ ಘಟನೆ ಬೊಲಿವಿಯಾದಲ್ಲಿ ವರದಿಯಾಗಿದೆ.
ಮಹಿಳೆಯೊಬ್ಬರು ರೆಸ್ಟೋರೆಂಟ್ ನಿಂದ ಬರ್ಗರ್ ಆರ್ಡರ್ ಮಾಡಿದ್ದಾರೆ, ಆದರೆ ಮನೆಗೆ ಬಂದ ಪಾರ್ಸೆಲ್ ತೆಗೆದುನೋಡಿದಾಗ ಮಹಿಳೆ ಹೌ ಹಾರಿದ್ದಾಳೆ. ಆರ್ಡರ್ ಮಾಡಿದ ಬರ್ಗರ್ ಏನೋ ಬಂತು.ಆದರೆ ಬರ್ಗರ್ ನಲ್ಲಿ ಮನುಷ್ಯನ ಕೈ ಬೆರಳು ಪತ್ತೆಯಾಗಿದೆ. ಇದನ್ನು ಮಹಿಳೆ ಸೋಶಿಯಲ್ ಮೀಡಿಯಾದಲ್ಲಿ ಹರಿಬಿಟ್ಟಿದ್ದಾಳೆ.
ಮೂಲಗಳ ಪ್ರಕಾರ ಬರ್ಗರ್ ಶಾಪ್ ನಲ್ಲಿ ಕೆಲಸ ಮಾಡುವ ಕೆಲಸಗಾರ ಬೆರಳನ್ನು ಕತ್ತರಿಸಿಕೊಂಡಿದ್ದಾನೆ. ಆತನ ಎರಡು ಬೆರಳು ತುಂಡಾಗಿವೆ. ರುಬ್ಬುವ ಯಂತ್ರವನ್ನು ನಿರ್ವಹಿಸುತ್ತಿದ್ದ ಕೆಲಸಗಾರ ತನ್ನ ಎರಡು ಬೆರಳುಗಳನ್ನು ಕಳೆದುಕೊಂಡಿದ್ದಾನೆ ಎನ್ನಲಾಗಿದೆ. ಆತನ ಬೆರಳು ಬರ್ಗರ್ ನಲ್ಲಿ ಬಂದಿದ ಎನ್ನಲಾಗಿದೆ. ಆದರೆ ಕೆಲಸಗಾರನನ್ನು ತಕ್ಷಣವೇ ಆಸ್ಪತ್ರೆಗೆ ಕರೆದೊಯ್ಯಲಾಗಿದೆ. ಆದರೆ ಆತ ಇನ್ನೂ ಗುಣಮುಖನಾಗಿಲ್ಲ ಎಂಬುದು ತಿಳಿದು ಬಂದಿದೆ.
Laxmi News 24×7