Breaking News

ನಾನು ಬದುಕುಳಿಯುವ ಹಾಗೆ ಕಾಣುತ್ತಿಲ್ಲ, ತುಂಬಾ ನರಳುತ್ತಿದ್ದೇನೆ; ನಾನು ಸತ್ತರೆ ಕಲಾವಿದರೇ ಕಾರಣ: ನಟಿ ವಿಜಯಲಕ್ಷ್ಮಿ

Spread the love

ಆಗಾಗ್ಗೆ ವಿಡಿಯೋಗಳನ್ನು ರಿಲೀಸ್ ಮಾಡುವ ಮೂಲಕ ಸುದ್ದಿಯಲ್ಲಿರುವ ನಟಿ ವಿಜಯಲಕ್ಷ್ಮೀ ಈಗ ಮತ್ತೊಂದು ಹೊಸ ವಿಡಿಯೋ ಹಂಚಿಕೊಂಡಿದ್ದಾರೆ, ನಾನು ಇನ್ನು ಬದುಕುವುದು ಅನುಮಾನ ಎಂದು ನಟಿ ವಿಜಯ ಲಕ್ಷ್ಮಿ ಆತಂಕದ ವಿಡಿಯೋ ಮಾಡಿ ಸೋಶಿಯಲ್ ಮೀಡಿಯಾದಲ್ಲಿ ಶೇರ್ ಮಾಡಿದ್ದಾರೆ.

ನನಗೆ ಕೊರೊನಾ ಸೋಂಕು ಬಂದಿದೆ. ನಾನು ಉಳಿಯುವಂತೆ ಕಾಣುತ್ತಿಲ್ಲ. ದಯವಿಟ್ಟು ನನಗೆ ಸಹಾಯ ಮಾಡಿ ಎಂದು ಮನವಿ ಮಾಡಿಕೊಂಡಿದ್ದಾರೆ. ನನಗೆ ಕೋವಿಡ್ ಪಾಸಿಟಿವ್ ಆಗಿ ನ್ಯುಮೋನಿಯಾ ಆಗಿತ್ತು. ಆಸ್ಪತ್ರೆಯ ಖರ್ಚಿಗೂ ದುಡ್ಡಿಲ್ಲದೆ ಡಿಸ್ಚಾರ್ಜ್ ಮಾಡಿಕೊಂಡು ಬಂದಿದ್ದೇನೆ. ಜ್ವರ ಬಂದು ವಾಂತಿ ಮಾಡಿ ಸುಸ್ತಾಗಿದ್ದೇನೆ ಎಂದು ವಿಡಿಯೋದಲ್ಲಿ ಹೇಳಿದ್ದಾರೆ.

ನಾನು ಸಾಕಷ್ಟು ಸಮಸ್ಯೆಗಳಿಂದ ಬಳಲುತ್ತಿದ್ದೇನೆ. ಸಹಾಯಕ್ಕಾಗಿ ಕಲಾವಿದರ ಸಂಘಕ್ಕೆ ಸಹಾಯ ಕೇಳಿ ಕೇಳಿ ಸುಸ್ತಾಗಿ ಹೋಗಿದೆ. ದಯವಿಟ್ಟು ಇದನ್ನ ಗಂಭೀರವಾಗಿ ತೆಗೆದುಕೊಳ್ಳಿ. ಅಭಿಮಾನಿಗಳೇ ನೀವು ತಿಳಿದುಕೊಳ್ಳಬೇಕು ಎಲ್ಲರೂ ಸೇರಿ ನನ್ನನ್ನು ಮರ್ಡರ್ ಮಾಡಿದಂತೆ ನನ್ನ ಕಥೆ ಮುಗಿಸಿದ್ದಾರೆ ಎಂದು ಅಳಲು ತೊಡಿಕೊಂಡಿದ್ದಾರೆ.


Spread the love

About Laxminews 24x7

Check Also

‘ಗೃಹ ಲಕ್ಷ್ಮಿ’ ಬಾಕಿ ಗದ್ದಲ; ಸಚಿವೆ ಹೆಬ್ಬಾಳ್ಕರ್ ವಿಷಾದ, ವಿಪಕ್ಷಗಳಿಂದ ಸಭಾತ್ಯಾಗ

Spread the love ಬೆಳಗಾವಿ: ಫೆಬ್ರವರಿ, ಮಾರ್ಚ್ ತಿಂಗಳ ಗೃಹಲಕ್ಷ್ಮಿ ಹಣ ಬಾಕಿ ವಿಚಾರವು ವಿಧಾನಸಭೆಯಲ್ಲಿಂದು ಭಾರಿ ಗದ್ದಲ, ಕೋಲಾಹಲ ಸೃಷ್ಟಿಸಿ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ