Breaking News

ಮತ್ತೆ ಗಾಳಿಪಟ-2 ಹಾರಾಟ.. ಸೆ. 18ರಿಂದ ಚಿತ್ರೀಕರಣ

Spread the love

ನ‌ಟ ಗೋಲ್ಡನ್‌ ಸ್ಟಾರ್‌ ಗಣೇಶ್‌ ಮತ್ತು ನಿರ್ದೇಶಕ ಯೋಗರಾಜ ಭ‌ಟ್‌ ಕಾಂಬಿನೇಶನ್‌ ನಲ್ಲಿ ಮೂಡಿ ಬರುತ್ತಿರುವ “ಗಾಳಿಪಟ-2′ ಚಿತ್ರದ ಚಿತ್ರೀಕರಣಕ್ಕೆ ಮತ್ತೆ ಚಾಲನೆ ಸಿಕ್ಕಿದೆ.

ಕೋವಿಡ್‌ ಎರಡನೇ ಅಲೆಯ ಲಾಕ್‌ಡೌನ್‌ನಿಂದ ‌ “ಗಾಳಿಪಟ-2′ ಚಿತ್ರದ‌ ಚಿತ್ರೀಕರಣ ಚಟುವಟಿಕೆಗಳು ‌ಸ್ಥಗಿತಗೊಂಡಿದ್ದು, ಈಗ ಪರಿಸ್ಥಿತಿ ನಿಧಾನ‌ವಾಗಿ ಸುಧಾರಿಸುತ್ತಿರುವುದರಿಂದ ಮತ್ತೆ ಶೂಟಿಂಗ್‌ ಶುರು ಮಾಡ‌ಲು ಚಿತ್ರತಂಡ ಪ್ಲಾನ್‌ ಮಾಡಿಕೊಂಡಿದೆ.

ಈ ಬಗ್ಗೆ ಮಾತನಾಡುವ ನಿರ್ದೇಶಕ ಯೋಗ‌ರಾಜ್‌ ಭಟ್‌, “ಈಗಾಗಲೇ ಮುಕ್ಕಾಲು ಭಾಗ ಶೂಟಿಂಗ್‌ ಪೂರ್ಣಗೊಂಡಿದೆ. ಬಾಕಿಯಿರುವ ಶೂಟಿಂಗ್‌ ಮಾಡಬೇಕು ಎನ್ನುವಷ್ಟರಲ್ಲಿ ಕೊರೊನಾ ಎರಡನೇ ಅಲೆಯ ಭಯ, ಲಾಕ್‌ಡೌನ್‌ ಜೋರಾಗಿದ್ದರಿಂದ ಕೆಲಕಾಲದ‌ ಮಟ್ಟಿಗೆ ಶೂಟಿಂಗ್‌ ಪ್ಲಾನಿಂಗ್‌ ಮುಂದಕ್ಕೆ ಹಾಕಿಕೊಂಡಿದ್ದೆವು. ಈಗ ‌ ಮತ್ತೆ ಎಲ್ಲವೂ ಮೊದಲಿನಂತಾಗುತ್ತಿದ್ದು, ಬಾಕಿಯಿರುವ ಶೂಟಿಂಗ್‌ ಪೂರ್ಣಗೊಳಿಸ‌ಲು ಪ್ಲಾನ್‌ ಮಾಡಿಕೊಳ್ಳಲಾಗಿದೆ. ಇದೇ ವಾರದಲ್ಲಿ “ಗಾಳಿಪಟ-2′ ಶೂಟಿಂಗ್‌ ಮತ್ತೆ ಶುರುವಾಗಲಿದೆ’ ಎಂದಿದ್ದಾರೆ.


Spread the love

About Laxminews 24x7

Check Also

ಮೈಕ್ರೋ ಫೈನಾನ್ಸ್ ಕಿರುಕುಳದಿಂದ ಮೃತಪಟ್ಟ ಕುಟುಂಬಗಳಿಗೆ ₹5 ಲಕ್ಷ ಪರಿಹಾರ

Spread the love ಬೆಂಗಳೂರು: ಮೈಕ್ರೋ ಫೈನಾನ್ಸಿಯರ್​ಗಳ ಕಿರುಕುಳಕ್ಕೊಳಗಾಗಿ ಆತ್ಮಹತ್ಯೆ ಮಾಡಿಕೊಂಡ ಜನರ ಕುಟುಂಬಕ್ಕೆ 5 ಲಕ್ಷ ರೂ.ಪರಿಹಾರ ನೀಡಲಾಗುವುದು ಎಂದು …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ