ಬೆಂಗಳೂರು : ಬಸ್‍ಗಳ ಟಿಕೆಟ್ ದರ ಹೆಚ್ಚಿಸುವವರಿಗೆ ಜನರ ಬವಣೆ ಗೊತ್ತಿಲ್ಲ. ವಿಮಾನದ ಟಿಕೆಟ್‍ಗಿಂತ ಈ ಬಸ್‍ಗಳ ಟಿಕೆಟ್ ದರ ಜಾಸ್ತಿ ಇದೆ ಎಂದು ಮಾಜಿ ಸ್ಪೀಕರ್ ರಮೇಶ್ ಕುಮಾರ್ ಬೆಲೆ ಏರಿಕೆ ವಿರುದ್ಧ ಧ್ವನಿ ಎತ್ತಿದ್ದಾರೆ. ವಿಧಾನಸಭಾ ಅಧಿವೇಶನದಲ್ಲಿ ಮಾತನಾಡಿದ ಅವರು, ಯಡಿಯೂರಪ್ಪ, ಸಿದ್ದರಾಮಯ್ಯ ಕಾಲದಿಂದಲೂ ಬಸ್ ಟಿಕೆಟ್ ದರ ಹೆಚ್ಚು ಮಾಡಿಕೊಂಡು ಬರುತ್ತಿದ್ದಾರೆ. ಟಿಕೆಟ್ ದರ ಹೆಚ್ಚಿಸೋರಿಗೆ ಜನರ ಬವಣೆ ಗೊತ್ತಿಲ್ಲ.
ಹಬ್ಬದ ವೇಳೆ ಜನ ಊರುಗಳಿಗೆ ಹೋಗುತ್ತಾರೆ. ಈ ಸಂದರ್ಭದಲ್ಲಿ ಸರ್ಕಾರಿ ಬಸ್‍ಗಳು ಸಾಲೋದಿಲ್ಲ. ಹಾಗಾಗಿ ಜನ ಖಾಸಗಿ ಬಸ್‍ಗಳ ಮೊರೆ ಹೋಗುತ್ತಾರೆ. ಆಗ ಖಾಸಗಿ ಬಸ್ ಮಾಲೀಕರು ಬಸ್ ದರ ಏರಿಕೆ ಮಾಡುತ್ತಾರೆ ಎಂದು ಬೆಲೆ ಏರಿಕೆ ವಿರುದ್ಧ ಪರೋಕ್ಷವಾಗಿ ಆಕ್ರೋಶ ವ್ಯಕ್ತಪಡಿಸಿದರು. ಮೌರ್ಯ ಸರ್ಕಲ್ ಬಳಿ ನೂರಾರು ಬಸ್ ಗಳಿವೆ ಆದರೂ ಕೂಡ ಅದರ ಟಿಕೆಟ್ ಬೆಲೆ ವಿಮಾನದ ಟಿಕೆಟ್ ಗಿಂತಲೂ ಜಾಸ್ತಿ ಆಗಿತ್ತು.
ಗೌರಿ, ಗಣೇಶ ಹಬ್ಬದ ಸಂದರ್ಭದಲ್ಲಿ ಮನಸ್ಸಿಗೆ ಬಂದ ಹಾಗೆ ಬೆಲೆ ಏರಿಕೆ ಮಾಡುವವರಿಗೂ ನಮಗೂ ಸಂಬಂಧ ಇಲ್ಲದಂತಾಗಿದೆ. ಸಾರಿಗೆ ಇಲಾಖೆ ಎಲ್ಲಿ ಹೋಯಿತು? ಕೋವಿಡ್ ಸಂದರ್ಭದಲ್ಲಿ ಆಸ್ಪತ್ರೆಯಲ್ಲಿ ಒಂದೊಂದು ದರ ಇತ್ತು ಕೆಲವು ಕಡೆ ಹೆಣವೂ ಕೊಡಲಿಲ್ಲ. ಅವರಿಗೆ ಶಾಸನದ ಭಯ ಇಲ್ಲದಂತಾಗಿದೆ, ಜನರ ಭಯ ನಮಗೆ ಇಲ್ಲದಂತಾಗಿದೆ ಎಂದು ಕಿಡಿಕಾರಿದರು.
Laxmi News 24×7