Breaking News

ದೇಶದಲ್ಲಿ ಕೋವಿಡ್ ದಿಂದಾಗಿ ಕಡಿಮೆಯಾಗಿದ್ದ ವಾಹನ ಮಾರಾಟ ಪ್ರಮಾಣ ಇದೀಗ ಮತ್ತೆ ಏರಿಕೆ

Spread the love

ನವದೆಹಲಿ: ದೇಶದಲ್ಲಿ ಕೋವಿಡ್ ದಿಂದಾಗಿ ಕಡಿಮೆಯಾಗಿದ್ದ ವಾಹನ ಮಾರಾಟ ಪ್ರಮಾಣ ಇದೀಗ ಮತ್ತೆ ಏರಿಕೆಯಾಗಿದೆ.

ಕಳೆದ ವರ್ಷಕ್ಕೆ ಹೋಲಿಸಿದರೆ ಈ ವರ್ಷದ ಆಗಸ್ಟ್‌ನಲ್ಲಿ ಪ್ರಯಾಣಿಕ ವಾಹನಗಳ ಮಾರಾಟ ಶೇ.39 ಏರಿಕೆಯಾಗಿದೆ ಎಂದು ಆಟೋಮೊಬೈಲ್‌ ವಿತರಕ ಸಂಘಗಳ ಒಕ್ಕೂಟ (ಎಫ್‌ಎಡಿಎ) ತಿಳಿಸಿದೆ.

ಕಳೆದ ವರ್ಷ ಆಗಸ್ಟ್‌ನಲ್ಲಿ 1,82,651 ವಾಹನ ಮಾರಾಟ ವಾಗಿತ್ತು, ಈ ವರ್ಷ ಆಗಸ್ಟ್‌ಗೆ ಅದು 2,53,363ಕ್ಕೆ ಏರಿಕೆಯಾಗಿದೆ. ಕಳೆದ ಆಗಸ್ಟ್‌ ಗೆ 9,15,126 ಬೈಕುಗಳು ಮಾರಾಟವಾಗಿದ್ದು, ಈ ವರ್ಷ 9,76,051ಕ್ಕೆ ಏರಿದೆ.

ವಾಣಿಜ್ಯ ವಾಹನಗಳ ಮಾರಾಟದಲ್ಲಿ ಶೇ.98 ಏರಿಕೆಯಾಗಿದೆ. ಹಾಗೆಯೇ 3 ಚಕ್ರದ ವಾಹನಗಳ ಮಾರಾಟ ಶೇ.80 ಏರಿಕೆಯಾಗಿದೆ. ಒಟ್ಟಾರೆಯಾಗಿ ಕಳೆದ ಆಗಸ್ಟ್‌ನಲ್ಲಿ 12,09,550 ವಾಹನಗಳು ಮಾರಾಟವಾಗಿದ್ದರೆ, ಈ ವರ್ಷ 13,84,711 ವಾಹನ ಮಾರಾಟವಾಗಿದೆ (ಶೇ. 14 ಏರಿಕೆ) ಎಂದು ಎಫ್ ಎ ಡಿಎ ತಿಳಿಸಿದೆ.


Spread the love

About Laxminews 24x7

Check Also

ಇನ್ಮುಂದೆ ಆನ್​ಲೈನ್ ಬೆಟ್ಟಿಂಗ್ ನಿಷೇಧ:

Spread the loveಬೆಂಗಳೂರು: ಆನ್​ಲೈನ್ ಬೆಟ್ಟಿಂಗ್ ಹಾಗೂ ಗ್ಯಾಂಬ್ಲಿಂಗ್​ಗೆ ಅಂಕುಶ ಹಾಕಲು ರಾಜ್ಯ ಸರ್ಕಾರ ಹೊಸ ಮಸೂದೆಯನ್ನು ರೂಪಿಸಿದೆ.‌ ಕರ್ನಾಟಕ ಪೊಲೀಸ್ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ