Breaking News

ʼಬಿಗ್‌ ಬಾಸ್‌ 13ʼ ರ ವಿಜೇತ ಸಿದ್ದಾರ್ಥ್‌ ಶುಕ್ಲಾ ಇನ್ನಿಲ್ಲ

Spread the love

ಜನಪ್ರಿಯ ರಿಯಾಲಿಟಿ ಶೋ ʼಬಿಗ್‌ ಬಾಸ್‌ 13ʼ ರ ವಿಜೇತರಾಗಿದ್ದ ಸಿದ್ದಾರ್ಥ್‌ ಶುಕ್ಲಾ ವಿಧಿವಶರಾಗಿದ್ದಾರೆ. 40 ವರ್ಷದ ಸಿದ್ದಾರ್ಥ್‌ ಶುಕ್ಲಾ ಸೋಮವಾರ ರಾತ್ರಿ ತಮ್ಮ ನಿವಾಸದಲ್ಲಿ ಕೊನೆಯುಸಿರೆಳೆದಿದ್ದಾರೆಂದು ತಿಳಿದುಬಂದಿದೆ.

ಡ್ಯಾನ್ಸ್‌ ದಿವಾನೆ 3 ರಲ್ಲೂ ತಮ್ಮ ಗೆಳತಿ ಶೆಹನಾಜ್‌ ಗಿಲ್‌ ಜೊತೆ ಸಿದ್ದಾರ್ಥ್‌ ಶುಕ್ಲಾ ಕಾಣಿಸಿಕೊಂಡಿದ್ದರು. ಸಣ್ಣ ವಯಸ್ಸಿನಲ್ಲಿಯೇ ಸಿದ್ದಾರ್ಥ್‌ ಶುಕ್ಲಾ ಇಹಲೋಕ ತ್ಯಜಿಸಿರುವುದು ಚಿತ್ರರಂಗದವರನ್ನು ದಿಗ್ಬ್ರಮೆಗೊಳಿಸಿದೆ.

ಡಿಸೆಂಬರ್‌ 12, 1980 ರಂದು ಮುಂಬೈನಲ್ಲಿ ಸಿದ್ದಾರ್ಥ್‌ ಶುಕ್ಲಾ ಜನಿಸಿದ್ದು, ಮೂಲತಃ ಉತ್ತರ ಪ್ರದೇಶದ ಪ್ರಯಾಗ್‌ ರಾಜ್‌ ನವರೆಂದು ತಿಳಿದುಬಂದಿದೆ. ಬಾಲಿವುಡ್‌ ಚಿತ್ರಗಳಲ್ಲೂ ಸಿದ್ದಾರ್ಥ್‌ ಶುಕ್ಲಾ ಕಾಣಿಸಿಕೊಂಡಿದ್ದರು.


Spread the love

About Laxminews 24x7

Check Also

ಡಾ.ಪುನೀತ್ ರಾಜ್ ಕುಮಾರ್ ಹೃದಯ ಜ್ಯೋತಿ ಯೋಜನೆ ಈ ವರ್ಷ ರಾಜ್ಯಾದ್ಯಂತ ವಿಸ್ತರಣೆ: ಸಚಿವ ದಿನೇಶ್ ಗುಂಡೂರಾವ್

Spread the loveಬೆಂಗಳೂರು: ಹೃದಯಾಘಾತದಿಂದ ಮರಣವಾಗುವವರ ಸಂಖ್ಯೆ ಅಧಿಕವಾಗುತ್ತಿದ್ದು, ಇದನ್ನ ನಿಯಂತ್ರಿಸಲು ಈ ವರ್ಷದಿಂದಲೇ ಡಾ.ಪುನೀತ್ ರಾಜ್ ಕುಮಾರ್ ಹೃದಯ ಜ್ಯೋತಿ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ