Breaking News
Home / Uncategorized / ಮುಂದಿನ ಆವೃತ್ತಿಯಲ್ಲಿ 74 ಪಂದ್ಯಗಳು ಇರಲಿವೆ ಎಂದು ತಿಳಿದುಬಂದಿದೆ.

ಮುಂದಿನ ಆವೃತ್ತಿಯಲ್ಲಿ 74 ಪಂದ್ಯಗಳು ಇರಲಿವೆ ಎಂದು ತಿಳಿದುಬಂದಿದೆ.

Spread the love

ಮುಂಬೈ(ಸೆ.01) ಮುಂಬರುವ 2022ರ ಇಂಡಿಯನ್‌ ಪ್ರೀಮಿಯರ್‌ ಲೀಗ್‌ (ಐಪಿಎಲ್‌)ಗೆ 2 ಹೊಸ ಫ್ರಾಂಚೈಸಿಗಳು ಸೇರ್ಪಡೆಗೊಳ್ಳುವ ಸಾಧ್ಯತೆಯಿದ್ದು, ಇದರಿಂದ ಬಿಸಿಸಿಐ 5,000 ಕೋಟಿ ರುಪಾಯಿ ಆದಾಯ ಗಳಿಸುವ ನಿರೀಕ್ಷೆಯಲ್ಲಿದೆ. ಒಂದೊಮ್ಮೆ ಹೊಸ ಫ್ರಾಂಚೈಸಿಗಳು ಅಸ್ತಿತ್ವಕ್ಕೆ ಬಂದಲ್ಲಿ, ಮುಂದಿನ ಆವೃತ್ತಿಯಲ್ಲಿ 10 ತಂಡಗಳು ಪಂದ್ಯಾವಳಿ ಸ್ಪರ್ಧೆಗಿಳಿಯಲಿವೆ.

15ನೇ ಆವೃತ್ತಿಯ ಐಪಿಎಲ್‌ಗೆ ಪಾಲ್ಗೊಳ್ಳಲು ಇಚ್ಚಿಸುವವರು 10 ಲಕ್ಷ ಪಾವತಿ ಮಾಡಿ ಯಾವುದೇ ಕಂಪನಿ ಬಿಡ್‌ನ ದಾಖಲೆಗಳನ್ನು ಖರೀದಿಸಬಹುದಾಗಿದೆ. ಈ ಮೊದಲು ಹೊಸ ತಂಡಗಳಿಗೆ 1,700 ಕೋಟಿ ರುಪಾಯಿ ಮೂಲ ಬೆಲೆ ನಿಗದಿ ಪಡಿಸಲು ಯೋಚಿಸಲಾಗಿತ್ತು. ಬಳಿಕ 2,000 ಕೋಟಿ ರುಪಾಯಿ ನಿಗದಿ ಪಡಿಸಲು ನಿರ್ಧರಿಸಲಾಯಿತು ಎಂದು ಬಿಸಿಸಿಐನ ಮೂಲಗಳು ತಿಳಿಸಿವೆ.

 

ಐಪಿಎಲ್‌ ಭಾಗ-2 ಟೂರ್ನಿಯಿಂದ ಹೊರಬಿದ್ದ ಆರ್‌ಸಿಬಿ ಸ್ಟಾರ್ ಆಲ್ರೌಂಡರ್ ವಾಷಿಂಗ್ಟನ್ ಸುಂದರ್

 

ದೊಡ್ಡ ಉದ್ಯಮ ಸಂಸ್ಥೆಗಳು ಫ್ರಾಂಚೈಸಿ ಖರೀದಿಸಿದರೆ ಕನಿಷ್ಠ 5,000 ಕೋಟಿ ರುಪಾಯಿ ಆದಾಯದ ನಿರೀಕ್ಷೆಯಲ್ಲಿ ಬಿಸಿಸಿಐ ಇದೆ. ವಾರ್ಷಿಕ 3000 ಕೋಟಿ ರುಪಾಯಿ ಆದಾಯ ಇರುವ ಕಂಪನಿಗಳಿಗೆ ಮಾತ್ರ ಬಿಡ್‌ ಪ್ರಕ್ರಿಯೆಯಲ್ಲಿ ಭಾಗವಹಿಸಲು ಅವಕಾಶ ನೀಡಲು ತೀರ್ಮಾನಿಸಲಾಗಿದೆ ಎಂದು ಹೇಳಲಾಗಿದೆ.

 

ಹೊಸ ತಂಡಗಳಿಗೆ ಅಹಮದಾಬಾದ್‌, ಲಖನೌ ಮತ್ತು ಪುಣೆಯಲ್ಲಿ ಸ್ಥಾನ ಕಲ್ಪಿಸುವ ಸಾಧ್ಯತೆ ಇದೆ. ಮುಂದಿನ ಆವೃತ್ತಿಯಲ್ಲಿ 74 ಪಂದ್ಯಗಳು ಇರಲಿವೆ ಎಂದು ತಿಳಿದುಬಂದಿದೆ. ಅದಾನಿ ಗ್ರೂಪ್‌, ಆರ್‌ಪಿಜಿ ಸಂಜೀವ್‌ ಗೋಯಾಂಕ್‌ ಗ್ರೂಪ್‌, ಟೊರೆಂಟ್‌ ಕಂಪನಿಗಳು ತಂಡಗಳ ಖರೀದಿಗೆ ಆಸಕ್ತಿ ಹೊಂದಿವೆ ಎಂದು ಹೇಳಲಾಗಿದೆ.


Spread the love

About Laxminews 24x7

Check Also

3ನೇ ಬಾರಿ ಬಿಜೆಪಿ ಅಧಿಕಾರಕ್ಕೆ ಬಂದ್ರೆ ಅಲ್ಪಸಂಖ್ಯಾತರನ್ನು ಮುಗಿಸುತ್ತಾರೆ: ಸಚಿವ ಜಮೀರ್ ಅಹ್ಮದ್‌

Spread the loveಇದು ದೇಶ ಬಚಾವ್ ಎಲೆಕ್ಷನ್. ಬಿಜೆಪಿ ಒಳಗೆ ಒಂದು ರೋಗ ಇದೆ, ಬಿಜೆಪಿ ಎಂದರೆ ಕ್ಯಾನ್ಸರ್ ಇದ್ದಂತೆ. …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ