Breaking News

ಅಫ್ಘಾನಿಸ್ತಾನದ ರಕ್ಷಣೆಗೆ ನೀಡಿದ್ದ ಉಪಕರಣಗಳು ಉಗ್ರರ ಕೈವಶವಾಗದಂತೆ ನೋಡಿಕೊಂಡಿದೆ.

Spread the love

ವಾಷಿಂಗ್ಟನ್‌(ಸೆ.01): ತಾಲಿಬಾನ್‌ ಉಗ್ರರ ಜತೆ ಮಾಡಿಕೊಂಡಿದ್ದ ಒಪ್ಪಂದಕ್ಕೆ ಅನುಗುಣವಾಗಿ ನಿಗದಿತ ಗಡುವಿನೊಳಗೆ ಅಫ್ಘಾನಿಸ್ತಾನವನ್ನು ತೊರೆದಿರುವ ಅಮೆರಿಕ, ಅದಕ್ಕೂ ಮುನ್ನ ಹಲವು ಮಿಲಿಟರಿ ಉಪಕರಣಗಳನ್ನು ನಾಶ ಮಾಡಿ ಜಾಗ ಖಾಲಿ ಮಾಡಿರುವ ಸಂಗತಿ ಬೆಳಕಿಗೆ ಬಂದಿದೆ.

ತನ್ಮೂಲಕ ತಾನು ಅಫ್ಘಾನಿಸ್ತಾನದ ರಕ್ಷಣೆಗೆ ನೀಡಿದ್ದ ಉಪಕರಣಗಳು ಉಗ್ರರ ಕೈವಶವಾಗದಂತೆ ನೋಡಿಕೊಂಡಿದೆ. ಇದರಿಂದ ತಾಲಿಬಾನ್‌ಗೆ ಭಾರಿ ಹಿನ್ನಡೆಯಾಗಿದೆ.

 

ಕಾಬೂಲ್‌ನ ಹಮೀದ್‌ ಕರ್ಜೈ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ 73 ವಿಮಾನಗಳನ್ನು ಅಮೆರಿಕ ಸಿಬ್ಬಂದಿ ನಿಷ್ಕಿರಯಗೊಳಿಸಿದ್ದಾರೆ. ಅಂದರೆ ಈ ವಿಮಾನಗಳನ್ನು ನಿಶ್ಶಸ್ತ್ರೀಕರಣಗೊಳಿಸಲಾಗಿದೆ ಅಥವಾ ಬಳಕೆಗೆ ಸಿಗದಂತೆ ಮಾಡಲಾಗಿದೆ. ವಿಮಾನದ ಕಾಕ್‌ಪಿಟ್‌ ಕಿಟಕಿಗಳನ್ನು ಧ್ವಂಸ ಮಾಡಲಾಗಿದೆ. ಟೈರ್‌ಗಳಿಗೆ ಗುಂಡು ಹಾರಿಸಿ ಹಾಳು ಮಾಡಲಾಗಿದೆ.

 

ಮತ್ತೊಂದೆಡೆ, ರಾಕೆಟ್‌, ಆರ್ಟಿಲರಿ ಹಾಗೂ ಮೊರ್ಟರ್‌ ದಾಳಿಯಿಂದ ಕಾಬೂಲ್‌ ವಿಮಾನ ನಿಲ್ದಾಣಕ್ಕೆ ರಕ್ಷಣೆ ಒದಗಿಸಲು ಅಳವಡಿಸಲಾಗಿದ್ದ ಹೈಟೆಕ್‌ ರಾಕೆಟ್‌ ನಿರೋಧಕ ವ್ಯವಸ್ಥೆಯನ್ನೂ ನಿಷ್ಕಿರಯ ಮಾಡಲಾಗಿದೆ. ಈ ವ್ಯವಸ್ಥೆಯೇ ಸೋಮವಾರ ಐಸಿಸ್‌ ನಡೆಸಿದ ಐದು ರಾಕೆಟ್‌ಗಳನ್ನು ಹಿಮ್ಮೆಟ್ಟಿಸಿತ್ತು ಎಂಬುದು ಗಮನಾರ್ಹ.

 

ಕಾಬೂಲ್‌ ವಿಮಾನ ನಿಲ್ದಾಣದಲ್ಲಿದ್ದ ವಿಮಾನಗಳು ಇನ್ನು ಮುಂದೆ ಹಾರುವುದಿಲ್ಲ. ಯಾರಿಂದಲೂ ಅವನ್ನು ಹಾರಿಸುವುದಕ್ಕೆ ಆಗುವುದಿಲ್ಲ ಎಂದು ಅಮೆರಿಕದ ಕೇಂದ್ರ ಕಮಾಂಡ್‌ ಮುಖ್ಯಸ್ಥ ಜನರಲ್‌ ಕೆನ್ನೆಥ್‌ ಮೆಕ್‌ಕೆಂಜಿ ಅವರು ತಿಳಿಸಿದ್ದಾರೆ.

 

ಇದೇ ವೇಳೆ ಕಾಬೂಲ್‌ನಲ್ಲಿ ಅಮೆರಿಕದ 70 ಎಂಆರ್‌ಎಪಿ ಎಂಬ ಸೇನಾ ಉದ್ದೇಶದ ವಾಹನಗಳು ಇದ್ದವು. ತಲಾ 7.25 ಕೋಟಿ ರು. ಬೆಲೆ ಬಾಳುವ ಈ ಎಲ್ಲ ವಾಹನಗಳನ್ನೂ ನಿಷ್ಕಿರಯಗೊಳಿಸಲಾಗಿದೆ. ಇದೇ ವೇಳೆ ಹಮ್‌ವೀ ಎಂಬ 27 ಸೇನಾ ಬಳಕೆ ವಾಹನಗಳನ್ನೂ ನಿರುಪಯುಕ್ತ ಮಾಡಲಾಗಿದೆ.

 

ಶಸ್ತ್ರಾಸ್ತ್ರದ ಮುಂದಿನ ಕಥೆ?

 

– ವಿಮಾನ, ಕಾಪ್ಟರ್‌, ಸೇನಾ ವಾಹನ ಚಲಾಯಿಸುವಂತೆ ಮಾಜಿ ಆಫ್ಘನ್‌ ಯೋಧರಿಗೆ ಸೂಚಿಸಬಹುದು

 

– ಮಿತ್ರ ದೇಶಗಳ ನೆರವಿನೊಂದಿಗೆ ಉಪಕರಣ ದುರಸ್ತಿಗೊಳಿಸಲು ಮಿತ್ರರ ನೆರವು ಕೋರಬಹುದು

 

– ಸೂಕ್ಷ್ಮ ಉಪಕರಣ, ಶಸ್ತ್ರ್ಸಾಸ್ತ್ರಗಳನ್ನು ಕಳಚಿ ಪಾಕ್‌ ಸೇರಿದಂತೆ ಮಿತ್ರ ದೇಶಗಳಿಗೆ ನೀಡಬಹುದು

 

– ಈ ಉಪಕರಣ ಇರುವ ಸ್ಥಳದ ಮೇಲೆ ಅಮೆರಿಕ ವೈಮಾನಿಕ ದಾಳಿ ನಡೆಸಿ ನಾಶ ಮಾಡಬಹುದು

 

ಅಮೆರಿಕ ಬಿಟ್ಟು ಹೋಗಿದ್ದು

 

150 – ಯುದ್ಧ ವಿಮಾನಗಳು

 

4 – ಸಿ130 ಸರಕು ಸಾಗಣೆ ವಿಮಾನ

 

45 – ಯುಎಚ್‌60 ಬ್ಲಾಕ್‌ಹಾಕ್‌ ಕಾಪ್ಟರ್‌

 

21 – ಎ29 ಟರ್ಬೊಟ್ರೂಪ್‌ ಹೆಲಿಕಾಪ್ಟರ್‌

 

50 – ಎಂಡಿ530 ಹೆಲಿಕಾಪ್ಟರ್‌ಗಳು

 

30- ಇತರೆ ವಿಮಾನಗಳು

 

3,50,000 – ರೈಫಲ್‌ಗಳು

 

64,000 – ಮಶೀನ್‌ ಗನ್‌ಗಳು

 

25,000 – ಗ್ರೆನೇಡ್‌ಗಳು

 

22,174 – ಮಿಲಿಟರಿ ವಾಹನಗಳು


Spread the love

About Laxminews 24x7

Check Also

ಬುಲೆಟ್ ರೈಡ್ ಮಾಡಿ ‘ಪ್ರಜಾಪ್ರಭುತ್ವ ದಿನ’ದ ಜಾಗೃತಿ ಮೂಡಿಸಿದ ಹಾಸನದ ಲೇಡಿ ಡಿಸಿ

Spread the loveಹಾಸನ: ಸೆಪ್ಟಂಬರ್ 15ರಂದು ಅಂದರೆ ನಾಳೆ ಬೆಂಗಳೂರಿನ ವಿಧಾನಸೌಧದಲ್ಲಿ ನಡೆಯುವ ಅಂತಾರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ಹಾಸನದಲ್ಲಿ ಇಂದು …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ