ಹುಣಸೂರು: ರಸ್ತೆ ಪಕ್ಕದಲ್ಲಿ ನಿಂತಿದ್ದ ಮರದ ದಿಮ್ಮಿಗಳನ್ನು ತುಂಬಿದ್ದ ಲಾರಿಗೆ ಕೆಎಸ್‌ಆರ್‌ಟಿಸಿ ಬಸ್ ಡಿಕ್ಕಿ ಹೊಡೆದಿದ್ದು, ಬಸ್ ಚಾಲಕ ತೀವ್ರವಾಗಿ ಗಾಯಗೊಂಡಿರುವ ಘಟನೆ ಕಲ್ಬೆಟ್ಟ ಬಳಿ ನಡೆದಿದೆ.
ಬಸ್ ಚಾಲಕ ಎಚ್.ಬಿ.ಮಹದೇವ ತೀವ್ರವಾಗಿ ಗಾಯಗೊಂಡಿದ್ದು, ಅವರನ್ನು ಮೈಸೂರಿನ ಖಾಸಗಿ ಆಸ್ಪತ್ರೆಗೆ ಚಿಕಿತ್ಸೆಗೆ ದಾಖಲಿಸಲಾಗಿದೆ.
ಮರದ ದಿಮ್ಮಿಗಳನ್ನು ತುಂಬಿದ್ದ ಲಾರಿ ಹುಣಸೂರಿನ ಕಡೆ ಹೊರಟಿತ್ತು. ಈ ವೇಳೆ ಕಲ್ಬೆಟ್ಟದ ಬಳಿ ನಿಂತಿತ್ತು. ಲಾರಿಗೆ ಹಿಂಬದಿಯಿಂದ ವೇಗವಾಗಿ ಬಂದ ಕೆಎಸ್‌ಆರ್‌ಟಿಸಿ ಬಸ್ ಡಿಕ್ಕಿ ಹೊಡೆದ ಪರಿಣಾಮ, ಬಸ್ ಮುಂಭಾಗ ಜಖಂಗೊಂಡಿದೆ.
ಹುಣಸೂರು ಗ್ರಾಮಾಂತರ ಪೋಲೀಸರು ಲಾರಿ ಮತ್ತು ಸಾರಿಗೆ ಬಸ್ ಅನ್ನು ವಶಕ್ಕೆ ಪಡೆದು ಕ್ರಮಜರುಗಿಸಿದ್ದಾರೆ.
Laxmi News 24×7