Breaking News

ಪ್ರೇಮಿಗಳೆ ಟಾರ್ಗೆಟ್| ಮೈಸೂರು ವಿದ್ಯಾರ್ಥಿನಿ ಅತ್ಯಾಚಾರಿಗಳಿಂದ ಸ್ಫೋಟಕ ಮಾಹಿತಿ ಬಹಿರಂಗ

Spread the love

ಮೈಸೂರು: ಮೈಸೂರು ವಿದ್ಯಾರ್ಥಿನಿ ಅತ್ಯಾಚಾರ ಪ್ರಕರಣದಲ್ಲಿ ಬಂಧಿತರಾಗಿರುವ ಕಾಮುಕರ ವಿಚಾರಣೆ ವೇಳೆ ಮತ್ತೊಂದು ಸ್ಫೋಟಕ ಮಾಹಿತಿ ಬಹಿರಂಗವಾಗಿದೆ.

ಮೈಸೂರಿಗೆ ತರಕಾರಿ ಹೊತ್ತು ಬರುತ್ತಿದ್ದ ರೇಪಿಸ್ಟ್ ಗಳಲ್ಲಿ ಇಬ್ಬರು ಮಾತ್ರ ಗೂಡ್ಸ್ ವಾಹನದಲ್ಲಿ ಬರುತ್ತಿದ್ದರು. ಉಳಿದವರು ಬಸ್ಸಿನಲ್ಲಿ ಬರುತ್ತಿದ್ದರು. ತರಕಾರಿ ಲೋಡ್ ಇಳಿಸಿದ ಮೇಲೆ ಖಾಲಿ ಗಾಡಿಯಲ್ಲಿ ಕುಳಿತು ಎಲ್ಲರೂ ಪಾರ್ಟಿ ಮಾಡಲು ಸವಾರಿ ಹೊರಡುತ್ತಿದ್ದರು.

ನಿರ್ಜನ ಸ್ಥಳಗಳಲ್ಲಿ ಕೂರುವ ಪ್ರೇಮಿಗಳೆ ಈ ಕೀಚಕರ ಟಾರ್ಗೆಟ್ ಆಗಿರುತ್ತಿತ್ತು. ಯುವತಿ ಮೇಲೆ ಗ್ಯಾಂಗ್ ರೇಪ್ ಮಾಡಿ ಬೆತ್ತಲೆ ವಿಡಿಯೋ ತೆಗೆದು ಬ್ಲ್ಯಾಕ್ ಮೇಲೆ ಮಾಡುತ್ತಿದ್ದರು. ಯುವಕ ಮತ್ತು ಯುವತಿ ಬಳಿ ಇರುವ ಹಣ ಮತ್ತು ಅವರು ಧರಿಸಿರುವ ಚಿನ್ನಾಭರಣ ಕಸಿದುಕೊಂಡು ಪೇರಿ ಕೀಳುತ್ತಿದ್ದರು.

ನಿರ್ಜನ ಸ್ಥಳದಲ್ಲಿ ನಡೆಯುವ ಈ ಕೃತ್ಯ ಯಾರಿಗೂ ತಿಳಿಯದ ಕಾರಣ ಪ್ರೇಮಿಗಳು ಮಾನ ಮರ್ಯಾದೆಗೆ ಅಂಜಿ ಪೊಲೀಸರಿಗೆ ಕಂಪ್ಲೆಂಟ್ ಕೊಡದೆ ಹೋಗುತ್ತಿದ್ದರು. ಹೀಗೆ ನಿರ್ಜನ ಪ್ರದೇಶಗಳೆ ಇವರ ಟಾರ್ಗೆಟ್ ಆಗಿತ್ತು. ಹೀಗೆ ಊರಿಗೆ ವಾಪಸ್ ಆಗುವ ಮುನ್ನ ಮತ್ತೆ ರೋಡ್ ರಾಬರಿ ಮಾಡಿಕೊಂಡು ಹೋಗುತ್ತಿದ್ದರು. ಕೈ ಸೇರಿದ ಹಣವನ್ನು ಕಂಠ ಪೂರ್ತಿ ಕುಡಿದು ಮೋಜು ಮಸ್ತಿ ಮಾಡುತ್ತಿದ್ದರು ಎನ್ನುವ ವಿಚಾರ ವಿಚಾರಣೆ ವೇಳೆ ಬೆಳಕಿಗೆ ಬಂದಿದೆ.


Spread the love

About Laxminews 24x7

Check Also

ಆಟೊ ಬುಕ್ ಮಾಡಿ ಬಳಿಕ ರದ್ದು ಮಾಡಿದಕ್ಕೆ ಯುವತಿ ಹಿಂಬಾಲಿಸಿ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದ ಚಾಲಕ: ಬಂಧನ

Spread the love ಬೆಂಗಳೂರು: ಆ್ಯಪ್​ನಲ್ಲಿ ಆಟೋ ಬುಕ್ ಮಾಡಿ ಬಳಿಕ ರದ್ದು ಮಾಡಿದ್ದಕ್ಕೆ ಅಸಮಾಧಾನಗೊಂಡು ಯುವತಿಯನ್ನ ಹಿಂಬಾಲಿಸಿ ಅವಾಚ್ಯ ಶಬ್ಧಗಳಿಂದ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ