Breaking News

BSNL 3G ನೇ ಸರಿಯಾಗಿ ಕೆಲಸ ಮಾಡುತ್ತಿಲ್ಲ, ಇನ್ನು 4G ಎಲ್ಲಿಂದ ಬರಬೇಕು: ಜಿಎಂ ಸಿದ್ದೇಶ್ವರ್​ ವಾಗ್ದಾಳಿ

Spread the love

ದಾವಣಗೆರೆ: ಜಿಲ್ಲೆಯಲ್ಲಿ BSNL 3G ನೇ ಸರಿಯಾಗಿ ಕೆಲಸ ಮಾಡುತ್ತಿಲ್ಲ. ಇನ್ನು 4G ಎಲ್ಲಿಂದ ಬರಬೇಕು ಎಂದು BSNL ವಿರುದ್ಧ ಸಂಸದ ಜಿ.ಎಂ. ಸಿದ್ದೇಶ್ವರ್​ ವಾಗ್ದಾಳಿ ನಡೆಸಿದ್ದಾರೆ. ಟೆಲಿಫೋನ್ ಸಲಹಾ ಸಮಿತಿ ಸಭೆಯಲ್ಲಿ ಸಂಸದರು ಬಿಎಸ್​ಎನ್​ಎಲ್ ನೆಟ್​ವರ್ಕ್ ಬಗ್ಗೆ ಕಿಡಿಕಾರಿದ್ದಾರೆ. ಬಿಎಸ್​​ಎನ್​​ಎಲ್​ ನೆಟ್​​ವರ್ಕ್​ ಸರಿಯಾಗಿ ವರ್ಕ್​ ಆಗ್ತಿಲ್ಲ. ಜೊತೆಗೆ 4G ಆಗಬೇಕಾದ್ರೆ ಹಣಕಾಸು ಸಹಾಯ ಕೇಳ್ತಿದ್ದಾರೆ. ಆದ್ರೆ ಸಂಸ್ಥೆಯಿಂದ ಆದಾಯ ನಿರೀಕ್ಷಿತ ಮಟ್ಟದಲ್ಲಿ ಇಲ್ಲ. ವ್ಯವಸ್ಥೆ ಸರಿಪಡಿಸಿ ಇಲ್ಲದಿದ್ರೆ ವಿಆರ್​ಎಸ್​​ ತೆಗೆದುಕೊಂಡು ಹೋಗಿ ಎಂದು ಆಕ್ರೋಶ ಹೊರಹಾಕಿದ್ದಾರೆ. ಬಿಎಸ್​​ಎನ್​​ಎಲ್​ ಅಧಿಕಾರಿಗಳ ವಿರುದ್ಧ ಸಿದ್ಧೇಶ್ವರ ವಾಗ್ದಾಳಿ ನಡೆಸಿದ್ದಾರೆ.

ಮೈಸೂರಿನಲ್ಲಿ ವಿದ್ಯಾರ್ಥಿನಿ ಮೇಲೆ ಗ್ಯಾಂಗ್‌ರೇಪ್ ಪ್ರಕರಣದ ವಿಚಾರವಾಗಿ ಸಿದ್ದೇಶ್ವರ ಪ್ರತಿಕ್ರಿಯೆ ನೀಡಿದ್ದಾರೆ. ಗ್ಯಾಂಗ್‌ರೇಪ್ ವಿಚಾರ ನನಗೆ ಗೊತ್ತೇ ಇಲ್ಲ. ಅತ್ಯಾಚಾರ ವಿಚಾರ ನನಗೇನು ಗೊತ್ತು ನಾನು ನೋಡಿದ್ದೇನಾ? ಎಂದು ಸಂಸದ ಸಿದ್ದೇಶ್ವರ್ ಹೇಳಿಕೆ ನೀಡಿದ್ದಾರೆ. ನಾನು‌ ಪ್ರತಿನಿತ್ಯ ಪೇಪರ್​ ಓದಲ್ಲ, ನನಗೆ ವಿಚಾರ ಗೊತ್ತಿಲ್ಲ. ಬೆಳಗ್ಗೆ ಮನೆ ಬಿಟ್ಟರೆ ರಾತ್ರಿ 11 ಗಂಟೆಗೆ ಮನೆ ಸೇರುವುದು. ದಾವಣಗೆರೆ ಬಗ್ಗೆ ಏನಾದ್ರು ಕೇಳಿ ಹೇಳುತ್ತೇನೆ ಎಂದು ಸಂಸದ ಸಿದ್ದೇಶ್ವರ ಹೇಳಿದ್ದಾರೆ. ಗ್ಯಾಂಗ್​ರೇಪ್​ ಬಗ್ಗೆ ನನಗೆ ಏನೂ ಗೊತ್ತಿಲ್ಲ ಎಂದು ಕೇಂದ್ರದ ಮಾಜಿ ಸಚಿವ ಸಿದ್ದೇಶ್ವರ್​ ತಿಳಿಸಿದ್ದಾರೆ.

ನನ್ನ ಮನವಿಗೆ ಓಗೊಟ್ಟು ಕೇಂದ್ರ ಸರ್ಕಾರ ಅಡಿಕೆ ಬೆಳೆಗಾರರ ನೆರವಿಗೆ ಧಾವಿಸಿದೆ
ಕಳೆದ ಐದಾರು ವರ್ಷಗಳಿಂದ ಅಡಿಕೆ ಬೆಳೆಗಾರರು ಸಂಕಷ್ಟದಲ್ಲಿದ್ದರು. ಇದನ್ನು ಅರಿತು ಇತ್ತೀಚಿಗೆ ದೆಹಲಿಯಲ್ಲಿ ಕೇಂದ್ರ ಗೃಹ, ವಾಣಿಜ್ಯ ಇಲಾಖೆ ಸಚಿವರ ಭೇಟಿ ಮಾಡಿ ವಿದೇಶಗಳಿಂದ ಬರುವ ಅಡಿಕೆ ಆಮದು ನಿಲ್ಲಿಸಲು ಮನವಿ ಮಾಡಿದ್ದೆ. ಮೇಲಾಗಿ ಕೊರೊನಾ ಸಂಕಷ್ಟ ಕಾಲದಲ್ಲಿ ರೈತರ ಸ್ಥಿತಿ ಕುರಿತು ವಿವರಿಸಲಾಗಿತ್ತು. ಈ ಮನವಿಯನ್ನು ಪರಿಗಣಿಸಿದ ಕೇಂದ್ರ ಸರ್ಕಾರ ವಿದೇಶಿ ಅಡಿಕೆ ಆಮದಿಗೆ ಬ್ರೇಕ್ ಹಾಕಿದೆ. ಇದರಿಂದ ಅಡಿಕೆ ಬೆಲೆ 50 ಸಾವಿರದತ್ತ ಧಾವಿಸುತ್ತಿದೆ ಎಂದು ಸಂಸದ ಜಿಎಂ ಸಿದ್ದೇಶ್ವರ ತಿಳಿಸಿದರು.

ಕಳೆದ ಐದಾರು ವರ್ಷಗಳಿಂದ ಅಡಿಕೆ ಬೆಳೆಗಾರರು ಸಂಕಷ್ಟದಲ್ಲಿದ್ದರು. ಈ ಹಿನ್ನೆಲೆ ಇತ್ತೀಚಿಗೆ ದೆಹಲಿಯಲ್ಲಿ ಕೇಂದ್ರ ಗೃಹ, ವಾಣಿಜ್ಯ ಇಲಾಖೆ ಸಚಿವರ ಭೇಟಿ. ವಿದೇಶಗಳಿಂದ ಬರುವ ಅಡಿಕೆ ಆಮದು ನಿಲ್ಲಿಸಲು ಮನವಿ ನೀಡಿದ್ದೆ. ಮೇಲಾಗಿ ಕೊರೊನಾ ಸಂಕಷ್ಟ ಕಾಲದಲ್ಲಿ ರೈತರ ಸ್ಥಿತಿ ಕುರಿತು ವಿವರಿಸಲಾಗಿತ್ತು. ತಮ್ಮ ಮನವಿಯಿಂದ ಕೇಂದ್ರ ಸರ್ಕಾರ ವಿದೇಶಿ ಅಡಿಕೆ ಆಮದಿಗೆ ಬ್ರೇಕ್ ಹಾಕಿದೆ. ಈ ಕಾರಣದಿಂದಾಗಿ ಮಾರುಕಟ್ಟೆಯಲ್ಲಿ ಉತ್ತಮ ದರವಿದೆ. ಇಡಿ ದೇಶದ ಅಡಿಕೆ ಉತ್ಪಾದನೆಯಲ್ಲಿ ಕರ್ನಾಟಕ ಹೆಚ್ಚು ಅಡಿಕೆ ಬೆಳೆಯುವ ಪ್ರದೇಶವಾಗಿರುವುದು ಹೆಮ್ಮೆಯ ವಿಷಯ ಎಂದು ಸಹ ಅವರು ಇದೇ ಸಂದರ್ಭದಲ್ಲಿ ವಿವರಿಸಿದರು.


Spread the love

About Laxminews 24x7

Check Also

ಗೋಲಿಹಳ್ಳಿಯ ಶ್ರೀ ಶಿವ ಮಂದಿರದಲ್ಲಿ ನೂತನ ಶಿವ ಮುಖವಾಡ ಮತ್ತು ನಂದಿ ಮೂರ್ತಿ ಪ್ರತಿಷ್ಠಾಪನೆ

Spread the love ಗೋಲಿಹಳ್ಳಿಯ ಶ್ರೀ ಶಿವ ಮಂದಿರದಲ್ಲಿ ನೂತನ ಶಿವ ಮುಖವಾಡ ಮತ್ತು ನಂದಿ ಮೂರ್ತಿ ಪ್ರತಿಷ್ಠಾಪನೆ ಖಾನಾಪೂರ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ